Ad Widget .

ಡಿಜಿಟಲ್ ವ್ಯವಹಾರ|ಎಚ್ಚರಿಕೆ ಅಗತ್ಯ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನವದೆಹಲಿ: ನೋಟ್​​ ಬ್ಯಾನ್ ಆಗಿ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ, ಹಣಕಾಸು ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾಗಿವೆ.
ನೋಟ್​ ಬ್ಯಾನ್ ನಂತರದ ಕೆಲವು ದಿನಗಳಲ್ಲಿ ನಗದು ವಹಿವಾಟಿನಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡುಬಂದಿದ್ದು, ಪ್ರಸ್ತುತ ನಗದು ವಹಿವಾಟು ಹೆಚ್ಚಾಗುತ್ತಿದೆ. ಇದರ ಜೊತೆಗೆ ಡಿಜಿಟಲ್ ಪೇಮೆಂಟ್​ ಕೂಡಾ ತೀವ್ರಗತಿಯಲ್ಲಿ ಏರಿಕೆಯಾಗಿದೆ.ಅಂದಹಾಗೆ, ನೋಟ್ ಬ್ಯಾನ್ ಮಾಡಿದ ಉದ್ದೇಶ ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚಿಸುವುದು ಮತ್ತು ಕಪ್ಪು ಹಣವನ್ನು ಹೊರಕ್ಕೆ ತರುವುದೇ ಆಗಿತ್ತು. ಈಗ ಡಿಜಿಟಲ್ ಪಾವತಿ ಎಲ್ಲೆಡೆಯೂ ವ್ಯಾಪಿಸಿಕೊಂಡಿದ್ದು, ಎರಡೂ ಉದ್ದೇಶಗಳು ಬಹುಪಾಲು ಈಡೇರಿವೆ. ಹಿಂದಿನ ಹಣಕಾಸು ವರ್ಷದಲ್ಲಿ ಕೋವಿಡ್ ಆವರಿಸಿದ್ದ ಕಾರಣದಿಂದ ಸಾಕಷ್ಟು ಮಂದಿ ಹಣದ ಉಳಿತಾಯಕ್ಕೆ ಒಲವು ತೋರಿದ್ದರು. ಕಳೆದ ಹಣಕಾಸು ವರ್ಷದಲ್ಲಿ ನೋಟುಗಳು ಚಲಾವಣೆ ಹೆಚ್ಚಾಗಿತ್ತು ಎಂದು ತಿಳಿದುಬಂದಿತ್ತು.

Ad Widget . Ad Widget . Ad Widget .

ಯುಪಿಐ ಪಾರುಪತ್ಯ: ಅಧಿಕೃತ ಮಾಹಿತಿಯಂತೆ, ಡೆಬಿಟ್ ಕಾರ್ಡ್‌ಗಳು, ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಸೇರಿದಂತೆ ವಿವಿಧ ಮೂಲಗಳು ಡಿಜಿಟಲ್ ಪಾವತಿ ಹೆಚ್ಚಾಗಲು ಕಾರಣವಾಗಿದ್ದವು. ಈಗಲೂ ಕೂಡಾ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿರುವ ಯುಪಿಐ ಡಿಜಿಟಲ್ ಪೇಮೆಂಟ್ ವಿಭಾಗದಲ್ಲಿ ದಾಖಲೆ ಸೃಷ್ಟಿಸುವತ್ತ ಮುನ್ನುಗ್ಗುತ್ತಿದೆ.
ಇತ್ತೀಚಿನ ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ನವೆಂಬರ್ 4, 2016ರಂದು 17.74 ಲಕ್ಷ ಕೋಟಿ ರೂಪಾಯಿಗಳಿದ್ದು, ಅಕ್ಟೋಬರ್ 29, 2021ರಲ್ಲಿ 29.17 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಅಕ್ಟೋಬರ್ 30, 2020ರ ವೇಳೆಗೆ 26.88 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ, ಅಕ್ಟೋಬರ್ 29, 2021ರ ವೇಳೆಗೆ 2,28,963 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.ಮೌಲ್ಯ, ಪ್ರಮಾಣದಲ್ಲೂ ಏರಿಕೆ:ಚಲಾವಣೆಯಾಗುತ್ತಿರುವ ನೋಟುಗಳ ಮೌಲ್ಯ ಮತ್ತು ಪ್ರಮಾಣದಲ್ಲೂ ಏರಿಕೆಯಾಗಿದೆ. 2019-20ರಲ್ಲಿ ನೋಟುಗಳ ಮೌಲ್ಯ ಮತ್ತು ಪ್ರಮಾಣ ಕ್ರಮವಾಗಿ ಶೇಕಡಾ 14.7 ಮತ್ತು ಶೇಕಡಾ 6.6ರಷ್ಟಿತ್ತು. 2020-21ರ ವೇಳೆಯಲ್ಲಿ ಬ್ಯಾಂಕ್​ ನೋಟುಗಳ ಮೌಲ್ಯ ಶೇಕಡಾ 16.8ಕ್ಕೆ ಹಾಗೂ ಬ್ಯಾಂಕ್ ನೋಟುಗಳ ಪ್ರಮಾಣ ಶೇಕಡಾ 7.2ಕ್ಕೆ ಏರಿಕೆಯಾಗಿದೆ.ನೋಟ್​ ಬ್ಯಾನ್​ನ ಹಿಂದಿನ ತಿಂಗಳಾದ ಅಕ್ಟೋಬರ್ 2014ರಿಂದ ಅಕ್ಟೋಬರ್ 2016ರವರೆಗೆ ಚಲಾವಣೆಯಲ್ಲಿರುವ ನೋಟುಗಳ ಬೆಳವಣಿಗೆ ದರ ಶೇಕಡಾ 14.51ರಷ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.
ಇಂದು ಹಣಕಾಸು ವ್ಯವಹಾರವೂ ಬೆರಳು ತುದಿಯಲ್ಲೇ ನಡೆಯುತ್ತಿರುವುದು ಗಮನಾರ್ಹವಾದ ಸಂಗತಿ. ಡಿಜಿಟಲ್‌ ಮಾಧ್ಯಮಗಳ ಮೂಲಕ ಹಣಕಾಸು ವ್ಯವಹಾರವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಆದರೆ ಇದರಿಂದ ಹಲವು ರೀತಿಯಲ್ಲಿ ಉಪಯೋಗವಾಗಿದೆ. ಆದರೆ ಅಷ್ಟೇ ಪ್ರಮಾಣದ ಎಚ್ಚರಿಕೆಯನ್ನು ನಾವು ವಹಿಸಬೇಕಾಗುತ್ತದೆ. ಈ ಇಂಟರ್‌ನೆಟ್‌ ಯುಗದಲ್ಲಿ, ಸುರಕ್ಷತೆಯ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ನಾವು ಎಲ್ಲೆಲ್ಲ ಎಚ್ಚರಿಕೆ ವಹಿಸಬೇಕು ಗೊತ್ತಾ? ಈ ಬಗ್ಗೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ವಿಳಾಸ ನೋಡಿ

ಹಣಕಾಸು ವ್ಯವಹಾರ ನಡೆಸುವ ಸಂದರ್ಭದಲ್ಲಿ ಆನ್‌ಲೈನ್‌ ತಾಣ ಅಥವಾ ಬ್ಯಾಂಕ್‌ ವೆಬ್‌ಸೈಟ್‌ ತೆರೆಯುವಾಗ ಅದರ ವಿಳಾಸವನ್ನು (ಯು.ಆರ್‌.ಎಲ್‌) ಪರೀಕ್ಷಿಸಿ. ಮೋಸಗಾರರು ಬ್ಯಾಂಕ್‌ ವೆಬ್‌ಸೈಟ್‌ ಹೋಲುವ ನಕಲಿ ಜಾಲತಾಣಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ನೀಡಿದರೆ ಅದನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ವಿಳಾಸ ನೋಡಿದರೆ ಅಸಲೀಯತ್ತು ಗೊತ್ತಾಗುತ್ತದೆ.

ಸಾರ್ವಜನಿಕ ವೈಫೈ ಬಳಕೆ ಬಗ್ಗೆ ಗಮನವಿರಲಿ

ವೈಯಕ್ತಿಕ ವ್ಯವಹಾರ ನಡೆಸಲು ಸುರಕ್ಷಿತ ಸ್ವಂತ ನೆಟ್‌ವರ್ಕ್‌ ಬರುವವರೆಗೆ ಕಾಯುವುದು ಉತ್ತಮ. ಸಾರ್ವಜನಿಕ ವೈಫೈಗಳಲ್ಲಿ ಹಣಕಾಸು ವ್ಯವಹಾರಗಳನ್ನು ಮಾಡದಿರುವುದು ಹೆಚ್ಚು ಸೂಕ್ತ.

ನಿಬಂಧನೆಗಳನ್ನು ತಿಳಿದುಕೊಳ್ಳಿ

ಶಾಪಿಂಗ್‌ ಮಾಡುವಾಗ, ಗ್ರಾಹಕರು ಪಾಲಿಸಬೇಕಿರುವ ನಿಬಂಧನೆಗಳ ಪಟ್ಟಿಯನ್ನು ಸಾಮಾನ್ಯವಾಗಿ ಯಾರೂ ಓದುವುದಿಲ್ಲ. ಆದರೆ ಅದನ್ನು ಓದುವುದರಿಂದ ತಿಳಿವಳಿಕೆ ಮತ್ತು ಜಾಗೃತಿ ಹೆಚ್ಚುತ್ತದೆ. ಆಯಾ ಉತ್ಪನ್ನದ ಕುರಿತಂತೆ ಬಳಕೆದಾರರ ರಿವ್ಯೂಗಳನ್ನು ಓದಿ.

ಬೇಕಾಬಿಟ್ಟಿ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ

ವಿಶೇಷ ಡೀಲ್‌ಗ‌ಳು, ದರ ಕಡಿತ ಮಾರಾಟ ಅಥವಾ ಇನ್ನಾವುದೋ ಆಕರ್ಷಕ ಜಾಹೀರಾತಿಗೆ ಮರುಳಾಗಿ ಬ್ರೌಸರ್‌ ಬದಿಯಲ್ಲಿ ಕಾಣುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ಅದರಿಂದ ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಮಾಲ್‌ ವೇರ್‌ಗಳು, ವೈರಸ್‌ಗಳು ದಾಳಿ ನಡೆಸಬಹುದು. ಅವು ಸ್ಮಾರ್ಟ್‌ಫೋನಿನಲ್ಲಿನ ಸೂಕ್ಷ್ಮ ಮಾಹಿತಿಯನ್ನು ಕದ್ದು ಮೂರನೆಯವರಿಗೆ ಕೊಡಬಹುದು. ಇದರಿಂದ ಎಚ್ಚರಿಕೆ ವಹಿಸಬೇಕಾಗುತ್ತದೆ.

ಇ-ಮೇಲ್‌ ಗಾಳ
“ನಿಮಗೆ ಒಂದು ಕೋಟಿ ರೂ. ಲಾಟರಿ ಹೊಡೆದಿದೆ. ಬಹುಮಾನದ ಮೊತ್ತ ನಿಮಗೆ ತಲುಪಲು ನಿರ್ದಿಷ್ಟ ಮೊತ್ತವನ್ನು ಡೆಪಾಸಿಟ್‌ ಆಗಿ ಕೊಡಬೇಕು. ನಂತರ ಅದನ್ನು ಮರಳಿಸಲಾಗುವುದು ಈ ರೀತಿಯ ಇಮೇಲ್‌ ಕಳಿಸಿ ಮೋಸ ಮಾಡುವ ದೊಡ್ಡ ಜಾಲವೇ ಇದೆ. ಇಂಥ ಇ-ಮೇಲ್‌ಗ‌ಳಿಗೆ ಪ್ರತಿಕ್ರಿಯಿಸಲು ಹೋಗಬಾರದು. ಬದಲಿಗೆ ಸ್ಪಾಮ್‌ ಪಟ್ಟಿಗೆ ಸೇರಿಸಿ ಅನಂತರ ಡಿಲೀಟ್‌ ಮಾಡಿಬಿಡಬೇಕು.

Leave a Comment

Your email address will not be published. Required fields are marked *