Ad Widget .

ಕಡಬ| ಆಪರೇಶನ್ ಚೀತಾ ಸಕ್ಸಸ್| ಕೋಳಿ ಹಿಡಿಯಲು ಬಂದ ಚಿರತೆ ಬೋನೊಳಗೆ ಬಂಧಿ|

ಕಡಬ: ಕೋಳಿ ಹಿಡಿಯಲು ಬಂದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳ ಯಶಸ್ವಿ ಕಾರ್ಯಾಚರಣೆಯಿಂದ ಚಿರತೆಯನ್ನು ರಕ್ಷಿಸುವ ಕಾರ್ಯ ನಡೆದಿದೆ.

Ad Widget . Ad Widget .

ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರ ರಾಮಯ್ಯ ಗೌಡ ಎಂಬವರ ಮನೆಯ ಮುಂಭಾಗದ ಬಾವಿಗೆ ಬಿದ್ದಿತ್ತು.

Ad Widget . Ad Widget .

ಮಾಹಿತಿ‌ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಸೂಕ್ತ ಭದ್ರತೆಯೊಂದಿಗೆ ಸಂಜೆಯ ವೇಳೆಗೆ ಚಿರತೆಯ ರಕ್ಷಣಾ ಕಾರ್ಯವನ್ನು ಆರಂಭಿಸಿದ್ದರು.

ಬೋನು ತಂದು ಬಾವಿಯ ಕಟ್ಟೆಯ ಸಮೀಪ ಇಟ್ಟು ಬಾವಿಯ ಮೇಲಿನ ಭಾಗಕ್ಕೆ ಬಲೆ ಹಾಸಿ ಏಣಿ ಇಳಿಸಲಾಗಿದ್ದು, ಏಣಿ ಹತ್ತಿದ ಚಿರತೆಯು ನೇರವಾಗಿ ಬೋನಿಗೆ ಬಿದ್ದಿದೆ. ಈ ಮೂಲಕ ಊರವರ ಸಹಕಾರದೊಂದಿಗೆ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.

Leave a Comment

Your email address will not be published. Required fields are marked *