Ad Widget .

ಅಪ್ರಾಪ್ತೆಯ ಮೇಲೆ ಎರಗಿದ ಕಾಮಾಂಧರು| ಮೂವರು ಅರೆಸ್ಟ್

ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಬಾಲಕಿಯ ತಾಯಿ ದೂರು ನೀಡಿದ್ದು ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad Widget . Ad Widget .

ಅಪ್ರಾಪ್ತೆ ಬಾಲಕಿಯ ತಾಯಿ ದೂರು ನೀಡಿದ ಆಧಾರದಲ್ಲಿ ರಿಕ್ಷಾ ಚಾಲಕ ರಿಜ್ವಾನ್ ಎಂದು ಗುರುತಿಸಲಾಗಿದ್ದು ವ್ಯಕ್ತಿಯನ್ನು ದಸ್ತಗಿರಿಗೊಳಪಡಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.

Ad Widget . Ad Widget .

ಇಷ್ಟು ಮಾತ್ರವಲ್ಲದೇ ಅದೇ ಬಾಲಕಿಯು ತನ್ನ ತಾಯಿಯೊಂದಿಗೆ ಹಾಜರಾಗಿ ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ಪರಿಚಿತರಾಗಿ ತನ್ನನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ತನ್ನ ಮೇಲೆ ಒಬ್ಬರಾದ ಮೇಲೇ ಇನ್ನೊಬ್ಬರು ಜೊತೆಯಲ್ಲಿ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಿದ್ದು, ಅದರಂತೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಹಮ್ಮದ್ ಖಾಸೀಂ, ಮತ್ತು ಅಜ್ಮಲ್ ಹುಸೈನ್ ಎಂಬವರು ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳು ಎಂದು ಗುರುತಿಸಲಾಗಿದೆ.

ಪ್ರಕರಣ ದಾಖಲಾದ ಕೂಡಲೇ ಚುರುಕಾಗಿ ತನಿಖೆ ನಡೆಸಿದ ತನಿಖಾ ತಂಡವು ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಾನೆ ಭಗವಾನ್ ಐ.ಪಿ.ಎಸ್ ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ ಶಿವಕುಮಾರ್ ಗುಣಾರೆ ರವರ ನಿರ್ದೇಶನದಂತೆ ಬಂಟ್ವಾಳ ಉಪವಿಭಾಗಾಧಿಕಾರಿ ಶಿವಾಂಶು ರಜಪೂತ್ ಐ.ಪಿ.ಎಸ್ ರವರ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಟಿ.ಡಿ ನಾಗರಾಜ್, ಮ.ಪಿ.ಎಸ್.ಐ ಭಾರತಿ, ತರಬೇತಿ ಪಿ.ಎಸ್.ಐ ರವರಾದ ರಾಮಕೃಷ್ಣ, ವೀಣಾ ರಾಮಚಂದ್ರ, ಎ.ಎಸ್.ಐ ಬಾಲಕೃಷ್ಣ, ಸಿಬ್ಬಂದಿಯವರಾದ ಜನಾರ್ಧನ, ಸುರೇಶ್, ಪುನೀತ್, ಮನೋಜ್ ಕುಮಾರ್ ,ಲೋಲಾಕ್ಷಿ, ವಿಶಾಲಾಕ್ಷಿ ರವರುಗಳೊನ್ನೊಳಗೊಂಡ ತನಿಖಾ ತಂಡವು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Comment

Your email address will not be published. Required fields are marked *