ಪುತ್ತೂರು: ಮೀನು ಹಿಡಿಯಲು ಹೋದ ಯುವಕ ಕೆರೆಪಾಲು

ಪುತ್ತೂರು: ಮೀನು ಹಿಡಿಯಲೆಂದು‌‌ ಸ್ನೇಹಿತರ ಜೊತೆ ಹೋದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ‌ ಸಾವನ್ನಪ್ಪಿದ ಘಟನೆ ಬೆಳ್ಳಾರೆಯಿಂದ ವರದಿಯಾಗಿದೆ. ಮೃತಪಟ್ಟ ಯುವಕನನ್ನು ಪುತ್ತೂರು ಸಂಪ್ಯದ ಮೂಲೆ ನಿವಾಸಿ ಸುಂದರ ಅವರ ಪುತ್ರ ಅವಿನಾಶ್ (23ವ) ಎಂದು ಗುರುತಿಸಲಾಗಿದೆ.

Ad Widget ... ..

ಈತ ಬೆಳ್ಳಾರೆಯ ಮೊಗಪ್ಪೆ ಕೆರೆಯಲ್ಲಿ ಮೀನು ಹಿಡಯಲೆಂದು ಸ್ನೇಹಿತರೊಂದಿಗೆ ತೆರಳಿದ್ದು, ಬಳಿಕ ಕೆರೆಯಲ್ಲಿ ಕಣ್ಮರೆಯಾಗಿರುವುದಾಗಿ ಹೇಳಲಾಗಿದೆ. ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಅವಿನಾಶ್ ಅವರ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *