Ad Widget .

ಆತ್ಮಹತ್ಯೆ ಮಾಡಿಕೊಂಡು ಪುನೀತ್ ಆತ್ಮಕ್ಕೆ ಅಗೌರವ ತೋರಬೇಡಿ – ಅಭಿಮಾನಿಗಳಿಗೆ ರಾಜ್ ಕುಟುಂಬಸ್ಥರ ಮನವಿ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಅವರ ಅಭಿಮಾನಿಗಳು ತೀವ್ರ ನೋವಿನಲ್ಲಿ ಮುಳುಗಿದ್ದು, ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಮುಂದುವರೆದಿವೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಪುನೀತ್ ಗೆ ಅಗೌರವ ತೋರಿಸದಂತೆ ಕುಟುಂಬಸ್ಥರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Ad Widget . Ad Widget .

ನಿನ್ನೆ ವೆಂಕಟೇಶ್ ಎಂಬ 25 ವರ್ಷದ ಪುನೀತ್ ಅವರ ಅಭಿಮಾನಿ ತಮ್ಮ ಮನೆಯಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪುನೀತ್ ಅವರ ಅಂತಿಮ ಸಂಸ್ಕಾರದ ವಿಡಿಯೋಗಳು, ಸಿನಿಮಾಗಳು ಹಾಗೂ ಹಾಡುಗಳನ್ನು ಸುದೀರ್ಘವಾಗಿ ನೋಡುತ್ತಿದ್ದ ಅತ ತೀವ್ರವಾಗಿ ನೊಂದುಕೊಳ್ಳುತ್ತಿದ್ದ. ಇದರಂತೆ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕುಟುಂಬಸ್ಥರು ಹೇಳಿದ್ದಾರೆ.

Ad Widget . Ad Widget .

ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ವಿಚಾರ ತಿಳಿದ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಆತ್ಮಹತ್ಯೆಗೆ ಶರಣಾಗದಂತೆ ಮನವಿ ಮಾಡಿಕೊಂಡಿದ್ದಾರೆ.

ಇದಷ್ಟೇ ಅಲ್ಲದೆ, ಮಾಧ್ಯಮಗಳೂ ಕೂಡ ಪುನೀತ್ ಅವರ ಅಂತಿಮ ಸಂಸ್ಕಾರದ ವಿಡಿಯೋಗಳನ್ನು ಪ್ರಸಾರ ಮಾಡದಂತೆ ಹಾಗೂ ಅಭಿಮಾನಿಗಳು ಪುನೀತ್ ಆಸ್ಪತ್ರೆಯಲ್ಲಿದ್ದ ಕೊನೆಯ ಕ್ಷಣದ ಫೋಟೋಗಳನ್ನೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *