Ad Widget .

ಕಡಬ: ಆರೋಪಿಯಿಂದ ಹಣ ಪೀಕಿಸುವ ನೆಪದಲ್ಲಿ ಬೆದರಿಕೆ ಆರೋಪ| ಪತ್ರಕರ್ತ ಗಣೇಶ್ ಇಡಾಳ ವಿರುದ್ದ ಎಫ್ಐಆರ್

ಮಂಗಳೂರು: ಮಾನಭಂಗ ಯತ್ನ ಪ್ರಕರಣದ ಆರೋಪಿಯಿಂದ ಹಣ ವಸೂಲಿ ಮಾಡಲು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಕಡಬದ ಸ್ಥಳೀಯ ಪತ್ರಕರ್ತನೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ. ಪತ್ರಕರ್ತ ಗಣೇಶ ಇಡಾಳ ಎಂಬಾತನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

‘ಸೊಬಗು ಟಿವಿ’ ಹಾಗೂ ಅದರ ಮಾಲಿಕರ ಹೆಸರಿನಲ್ಲಿ ಹಣ ವಸೂಲಿ ಮಾಡಲು ಯತ್ನಿಸಿದಲ್ಲದೇ , ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಕೊಲೆ ಬೆದರಿಕೆ ಹಾಕಿರುವ ದೂರಿಗೆ ಸಂಬಂಧಪಟ್ಟಂತೆ ಪುತ್ತೂರು ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶದಂತೆ , ಗಣೇಶ ಇಡಾಳ ಮೇಲೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಕಡಬದ ಮಹಿಳೆಯೊಬ್ಬರು ಕಳಾರದಲ್ಲಿರುವ ಆಯುರ್ವೇದಿಕ್ ಮಸಾಜ್ ಸೆಂಟರ್ ನ ಮಾಲಿಕ ತನಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾನೆ ಎಂದು ಆರೋಪಿಸಿ ಕಡಬ ಠಾಣೆಯಲ್ಲಿ ದೂರು ನೀಡಿದ್ದು ಬಾರೀ ಸುದ್ದಿಯಾಗಿತ್ತು. ಈ ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಮಸಾಜ್ ಪಾರ್ಲರ್ ನ ವೈದ್ಯನ ಮೇಲೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮ ವರದಿಗಾರನೆಂದು ಬಿಂಬಿಸಿ ‘ಸೊಬಗು ಟಿವಿ’ ಹೆಸರಿನಲ್ಲಿ ಗಣೇಶ ಇಡಾಳ ಎಂಬಾತ ವೈದ್ಯನ ಜೊತೆ 2 ಲಕ್ಷ ರೂ.ಗಳ ಬೇಡಿಕೆಯನ್ನು ಇಟ್ಟಿದ್ದ ಎನ್ನಲಾಗಿದೆ. ಕೇಳಿದ ಹಣ ನೀಡಿದ್ದಲ್ಲಿ ಆರೋಪಿ ವೈದ್ಯನನ್ನು ಈ ಪ್ರಕರಣದಿಂದ ಹೊರ ತರುವುದಾಗಿ ಆತನಲ್ಲಿ ಹೇಳಿದ್ದ ಎನ್ನಲಾಗಿದೆ.

ಇದೀಗ ಈತನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯವು ಇವನ ವಿರುದ್ಧ ತನಿಖೆ ನಡೆಸಿ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ನೀಡುವಂತೆ ಕಡಬ ಪೊಲೀಸರಿಗೆ ಆದೇಶಿಸಿದೆ. ಅದರಂತೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *