Ad Widget .

ಅಪ್ಪುವಿನ ತದ್ರೂಪ ಈ ಯುವಕ – ತಕ್ಷಣಕ್ಕೆ ನೋಡಿದರೆ ಥೇಟ್ ಪುನೀತ್ ರಾಜ್ ಕುಮಾರ್!

ಕುಂದಾಪುರ: ಕನ್ನಡ ಚಿತ್ರರಂಗದಲ್ಲಿ ಜೂನಿಯರ್ ರಾಜ್ ಕುಮಾರ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್ನಾಗ್, ಜೂನಿಯರ್ ಅಂಬರೀಷ್, ಜೂನಿಯರ್ ಉಪೇಂದ್ರ..ಹೀಗೆ ಸ್ಯಾಂಡಲ್ ವುಡ್ ದೊಡ್ಡದೊಡ್ಡ ನಟರನ್ನೇ ಹೋಲುವಂಥ, ತಕ್ಷಣಕ್ಕೆ ನೋಡಿದರೆ ಅವರೇ ಅನಿಸುವಂಥವರಿದ್ದಾರೆ.

Ad Widget . Ad Widget .

ಅದೇ ರೀತಿ ಪುನೀತ್ ರಾಜ್ ಕುಮಾರ್ ರನ್ನು ಹೋಲುವ ಯುವಕನೊಬ್ಬ ಈಗ ಜನರ ಗಮನ ಸೆಳೆಯಲಾರಂಭಿಸಿದ್ದಾನೆ. ಹೌದು.. ಈಗ ಎಲ್ಲೆಡೆ ಪುನೀತ್ ರಾಜಕುಮಾರ್ ಅವರ ವಿಚಾರವೇ ಚರ್ಚೆಯಲ್ಲಿ ಇರುವ ಈ ಸಂದರ್ಭದಲ್ಲಿ ಇಲ್ಲೊಬ್ಬ ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಗುರುತಿಸಿಕೊಳ್ಳುತ್ತಿರುವ ಯುವಕನೊಬ್ಬ ಜನರ ಗಮನವನ್ನು ಸೆಳೆಯುತ್ತಿದ್ದಾನೆ. ಮೂಲತಃ ತೀರ್ಥಹಳ್ಳಿಯ ನಿವಾಸಿ ಆಗಿರುವ ಈತನ ಹೆಸರು ಪ್ರವೀಣ್ ಆಚಾರ್ಯ.

Ad Widget . Ad Widget .

ಸದ್ಯ ಈತ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಗ್ಯಾರೇಜ್ ನಡೆಸುತ್ತಿದ್ದಾನೆ. ನೋಡಲು ಪುನೀತ್ ಥರವೇ ಕಾಣುವ ಈತ ಪುನೀತ್ ಥರವೇ ಉಡುಗೆ-ತೊಡುಗೆ ತೊಟ್ಟು ಕಾಣಿಸಿಕೊಳ್ಳುತ್ತಾನೆ. ಮಾತ್ರವಲ್ಲ ಪುನೀತ್ ಧ್ವನಿಯನ್ನು ಅನುಕರಿಸಿ ಮಾತನಾಡುವುದನ್ನೂ ಅಭ್ಯಾಸ ಮಾಡಿಕೊಂಡಿರುವ ಈತ ಕುಂದಾಪುರ ಪರಿಸರದಲ್ಲಿ ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಗುರುತಿಸಿಕೊಳ್ಳುತ್ತಿದ್ದಾನೆ. ಪುನೀತ್ ಅಭಿಮಾನಿಯಾಗಿರುವ ಈತ ಅಪ್ಪು ಅಗಲಿಕೆಯಿಂದ ಸದ್ಯ ನೊಂದುಕೊಂಡಿದ್ದಾನೆ.

Leave a Comment

Your email address will not be published. Required fields are marked *