Ad Widget .

ನರಕ ಚತುರ್ದಶಿ| ಕಳೆಯಲಿ ಸರ್ವ ದುರಿತ|

ಸಮಗ್ರ ವಿಶೇಷ: ದೀಪಾವಳಿ ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆ ಕೊಂಡೊಯ್ಯುವ ಹಬ್ಬ. ಆದುದರಿಂದ ದೀಪಾವಳಿಯನ್ನು ಹಣತೆ ಹಚ್ಚಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Ad Widget . Ad Widget .

ದೀಪಾವಳಿಯ ಮೊದಲನೇ ದಿನ ನರಕ ಚತುರ್ದಶಿ. ಭೂಲೋಕದಲ್ಲಿ ನರಕಾಸುರನೆಂಬ ಅಸುರನು ಅಟ್ಟಹಾಸದಿಂದ ಮೆರೆಯುತ್ತಿದ್ದನು. ಶ್ರೀಕೃಷ್ಣ ಪರಮಾತ್ಮನು ಭೂದೇವಿಯ ಕೋರಿಕೆಯ ಮೇರೆಗೆ ತೈಲಾಭ್ಯಂಜನ ಸ್ನಾನ ಮಾಡಿ ನರಕಾಸುರನನ್ನು ಸಂಹಾರ ಮಾಡಿದನೆಂಬ ಪ್ರತೀತಿ.

Ad Widget . Ad Widget .

ಭೂದೇವಿಯ ಮಗನಾದ ನರಕಾಸುರ ಎಲ್ಲ ದೇವತೆಗಳನ್ನು ಎದುರಿಸಿ ಯಕ್ಷ , ಕಿನ್ನರ, ವಿದ್ಯಾಧರ ಮೊದಲಾದ ಹದಿನಾರು ಸಾವಿರ ಮಂದಿ ಸ್ತ್ರೀಯರನ್ನು ಸೆರೆಯಲ್ಲಿಟ್ಟು ಕಿರುಕುಳ ಕೊಡುತ್ತಾನೆ. ಇದನ್ನರಿತ ಭಗವಾನ್‌ ಶ್ರೀಕೃಷ್ಣ ನರಕಾಸುರನ್ನು ಕೊಂದು ಎಲ್ಲರನ್ನೂ ಪಾರು ಮಾಡುತ್ತಾನೆ.

ತನ್ನ ಮಗನ ಸಾವನ್ನು ತಿಳಿದ ಭೂದೇವಿಯ ಅವತಾರವಾದ ಸತ್ಯಭಾಮೆ ತನ್ನ ಮಗ ತೀರಿದ ಆ ದಿನ (ಚತು ರ್ದಶಿಯಂದು) ತನ್ನ ಮಗನ ಹೆಸರಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲಿ ಎಂಬುದಾಗ ಶ್ರೀಕೃಷ್ಣನಲ್ಲಿ ವರವನ್ನು ಬೇಡುತ್ತಾಳೆ. ಅಂದಿನಿಂದ ಆ ದಿನವನ್ನು ನರಕ ಚತುರ್ದಶಿ ಎಂಬುದಾಗಿ ಆಚರಿಸಲಾಗುತ್ತದೆ. ಆ ಕಾರಣಕ್ಕಾಗಿ ನರಕ ಚತುರ್ದಶಿಯ ದಿನ ಇಂದಿಗೂ ಜನ ಸೂರ್ಯೋದಯಕ್ಕೂ ಮೊದಲು ಎದ್ದು ಅಭ್ಯಂಜನ ಸ್ನಾನ ಮಾಡುತ್ತಾರೆ.

ನರಕಾಸುರನು ಹೆಂಗಸರನ್ನು ಹೊರತುಪಡಿಸಿ ಯಾರಿಂದಲೂ ಸೋಲನ್ನು ಹೊಂದಬಾರದು ಎಂದು ಬ್ರಹ್ಮನಿಂದ ವರ ಪಡೆದುಕೊಂಡಿದ್ದನು. ಭಗವಾನ್ ವಿಷ್ಣು ಕೃಷ್ಣನ ಅವತಾರದಲ್ಲಿರುವಾಗ ಗರುಡನನ್ನು ಸಾರ್ತಿ ಎಂದು ಕರೆದನು. ಅವನ ಹೆಂಡತಿ ಸತ್ಯಭಾಮ ನರಕಾಸುರನ ಮೇಲೆ ಆಕ್ರಮಣ ಮಾಡಿ ಕೊಂದಳು. ಈ ದಿನವನ್ನು ದುಷ್ಟನನ್ನು ಸಂಹವರಿಸಿ ವಿಜಯವನ್ನು ಪಡೆದ ದಿನವಾದ್ದರಿಂದ ವಿಜಯದ ಸಂಕೇತವಾಗಿ ಹಬ್ಬವನ್ನು ಆಚರಿಸಿದರು. ತಮಗೆಲ್ಲರಿಗೂ ನರಕ ಚತುರ್ದಶಿ ಶುಭಾಶಯಗಳು

Leave a Comment

Your email address will not be published. Required fields are marked *