ಡಿಜೆ ಆಪರೇಟ್ ಮಾಡಿದ “ಮಹಿಷಾಸುರ”- ಕ್ಷಮೆಗೆ ಆಗ್ರಹ

Ad Widget ... ..

ಮಂಗಳೂರು : ಕರಾವಳಿಯ ಗಂಡುಕಲೆ ಯಕ್ಷಗಾನದ ವೇಷ ಧರಿಸಿದ ಯುವಕನೊಬ್ಬ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.

Ad Widget

ಉಡುಪಿಯ ಮಣಿಪಾಲದ ಪಬ್‌ಯೊಂದರಲ್ಲಿ, “ದೇವಿ ಮಹಾತ್ಮೆ” ಪ್ರಸಂಗದಲ್ಲಿ ಬರುವ ಮಹಿಷಾಸುರನ ವೇಷ ಧರಿಸಿದ ಯುವಕ ಡಿಜೆ ಅಪರೆಟ್ ಮಾಡುತ್ತಿದ್ದ, ಇದನ್ನು ಪಬ್ ಹೋದವರು ವಿಡಿಯೋ ಮಾಡಿ ಸಾಮಾಜಿಕವಾಗಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಯಕ್ಷಗಾನ ವೇಷದಾರಿ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಯಕ್ಷಗಾನ ಅಭಿಮಾನಿಗಳಿಂದ ಬಾರೀ ಆಕ್ರೋಶ ವ್ಯಕ್ತವಾಗಿದೆ. ಪಬ್‌ನಲ್ಲಿ ಯಕ್ಷಗಾನ ವೇಷವನ್ನು ಈ ರೀತಿಯಲ್ಲಿ ಬಳಸಿಕೊಳ್ಳುವುದು ಸರಿಯಲ್ಲ, ವೇಷದಾರಿ ಈ ಬಗ್ಗೆ ಕ್ಷಮೆ ಕೇಳಬೇಕು ಅಂತ ಆಗ್ರಹ ಕೇಳಿ ಬಂದಿದೆ.

Leave a Comment

Your email address will not be published. Required fields are marked *