Ad Widget .

ಕಡಬ| ಹಿಂದೂ ಮನೆಯೊಳಗೆ ಅನ್ಯಮತೀಯ ಮಂತ್ರವಾದಿ| ಕಾಯಿಲೆ ಗುಣಪಡಿಸಲು ಬಂದಾತ ಮಾಡಿದ್ದೇನು?

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದೂ ಮಹಿಳೆಯೊಬ್ಬರ ಕಾಯಿಲೆಯನ್ನು ಮಂತ್ರವಾದದಿಂದ ಗುಣಪಡಿಸಲೆಂದು ಬಂದ ಅನ್ಯಮತಿಯ ಮಂತ್ರಿವಾದಿಯೊಬ್ಬ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಅನ್ಯಮತೀಯ ವ್ಯಕ್ತಿ‌ ಹಿಂದೂ ಕುಟುಂಬದ ಮನೆಯಲ್ಲಿರುವುದನ್ನು ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ಮಂತ್ರವಾದಿಯನ್ನು ವಶಕ್ಕೆ ಪಡೆದುಕೊಂಡು ಬಳಿಕ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟರಿರುವುದಾಗಿ ತಿಳಿದುಬಂದಿದೆ.

Ad Widget . Ad Widget . Ad Widget .

ಕೊಂಬಾರಿನಲ್ಲಿ ನಡೆದ ಈ ಘಟನೆಗೆ ಸಂಬಂದಪಟ್ಟಂತೆ ಮೂಲತಃ ಬಂಟ್ವಾಳ ತಾಲೂಕು ವಗ್ಗ ನಿವಾಸಿ, ಪ್ರಸ್ತುತ ಬೆಂಗಳೂರಿನ ಚಿಂತಾಮಣಿ ಭಾಗದಲ್ಲಿ ದರ್ಗಾವೊಂದರಲ್ಲಿ ಕಾರ್ಯನಿರ್ವಹಿಸುವ ಆಬೀದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಿಂಬೆ ಹುಳಿಯಲ್ಲಿ ಏನೋ ಕ್ರಿಯೆಗಳನ್ನು ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಕಡಬ ವಿ.ಹಿಂ.ಪ ಕಾರ್ಯದರ್ಶಿ ಪ್ರಮೋದ್ ರೈಯವರಿಗೆ ಮಾಹಿತಿ ನೀಡಿದ್ದು ಕೂಡಲೇ ತಕ್ಷಣ ಹಾಗೂ ಕೊಂಬಾರಿನ ಹಲವಾರು ಮಂದಿ ಮನೆಗೆ ಭೇಟಿ ನೀಡಿ ಅಲ್ಲಿ ವಿಚಾರಿಸಿದ್ದು, ಆತ ಕಪಟ ಮಂತ್ರವಾದಿ ಏನೋ ದುರುದ್ದೇಶದಿಂದ ಅನಾರೋಗ್ಯ ಪೀಡಿತ ಕುಟುಂಬವನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಎಂದು ಆಪಾದಿಸಿ ಕಡಬ ಪೋಲಿಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೋಲಿಸರು ಆಗಮಿಸಿ ಮಂತ್ರವಾದಿ ಎನ್ನಲಾದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು.

ಅನ್ಯಮತಿಯ ವ್ಯಕ್ತಿಯೋರ್ವ ಕೆಲವು ದಿನಗಳಿಂದ ಆ ಮನೆಗೆ ಭೇಟಿ ಕೊಡುತ್ತಿದ್ದ, ಅಲ್ಲದೆ ಇಂದು ಕೂಡ ಮನೆಯೊಳಗಡೆ ಇದ್ದಾನೆ ಎನ್ನುವ ಸ್ಥಳೀಯರ ಮಾಹಿತಿಯನ್ವಯ ಹಿಂದೂ ಸಂಘಟನೆಯ ನೇತೃತ್ವದಲ್ಲಿ ಆ ಮನೆಗೆ ಭೇಟಿ ನೀಡಿದ ವೇಳೆ ಮನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಅವರ ಗಂಡಂದಿರು, ಮನೆ ಮಂದಿ ಇದ್ದರು. ಮನೆಗೆ ಭೇಟಿ ನೀಡುತ್ತಿದ್ದಂತೆ ಇಬ್ಬರು ಮಹಿಳೆಯರೂ ತಮಗೆ ಏನೋ ದೆವ್ವ ಬಂದಂತೆ ವರ್ತಿಸಿ ಬಂದವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಈ ವೇಳೆ ಮನೆಯ ಪುರುಷರು ಕೂಡ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿ, ಈಗಾಗಲೇ ಆ ವ್ಯಕ್ತಿಯಿಂದ ಇವರ ಅರ್ಧ ಕಾಯಿಲೆ ಗುಣವಾಗಿತ್ತು, ಅವರ ಮೈಗೆ ಯಾವುದೋ ದೈವಿ ಶಕ್ತಿ ಆವರಿಸಿದೆ ಅದನ್ನು ಈ ಮಂತ್ರವಾದಿಯವರು ಸರಿ ಮಾಡುತ್ತಾರೆ, ಇನ್ನು ನೀವೇ ಸರಿ ಮಾಡಿ ನೋಡೋಣ ಎಂದು ಸವಾಲು ಹಾಕಿದರು. ಬಳಿಕ ಪೋಲಿಸರು ಬಂದಾಗಲೂ ಆ ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಂತ್ರವಾದಿ ಸಮಾಧಾನ ಹೇಳುತ್ತಿದ್ದುದು ಕಂಡು ಬಂತು.
ಈ ಹಿಂದೆ ಕೊಂಬಾರು ಭಾಗದಲ್ಲಿ ಮಹಿಳೆಯೊಬ್ಬರ ಪ್ರೇತ ಭಾದೆಯನ್ನು ಈತ ಬಿಡಿಸಿದ್ದ ಈತ ಅಲ್ಲಿ ಬಂದಾಗ ಈ ಮನೆಯವರಿಗೆ ಸಂಪರ್ಕವಾಗಿ ಈ ಹಿಂದೆ ಮೂರು ನಾಲ್ಕು ಬಾರಿ ಬಂದಿದ್ದರು ಎಂದು ತಿಳಿದು ಬಂತು. ಬಳಿಕ ಪೋಲಿಸರು ಮುಚ್ಚಳಿಕೆ ಬರೆದುಕೊಂಡು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ, ಮಾಟ ಮಂತ್ರವಾದಗಳಿಗೆ ಹೆಚ್ಚು ಬಲಿ ಬೀಳಬೇಡಿ ಎಂದು ಹೇಳಿ ಕಳಿಸಿದ್ದಾರೆ.

Leave a Comment

Your email address will not be published. Required fields are marked *