Ad Widget .

ಬಂಟ್ವಾಳ: ಕಾರಿಂಜೇಶ್ವರ ಸನ್ನಿಧಿಯಲ್ಲಿ ವಿಕೃತಿ ಮೆರೆದ ಅನ್ಯಮತೀಯರು| ಚಪ್ಪಲಿ ಧರಿಸಿ ದೇಗುಲ ಪ್ರವೇಶಿಸಿ ಪುಂಡಾಟ| ಕಾನೂನು ಹೋರಾಟ ನಡೆಸಲು ಹಿಂದೂ ಪರ ಸಂಘಟನೆಗಳ ನಿರ್ಧಾರ|

Ad Widget . Ad Widget .

ಬಂಟ್ವಾಳ: ಇಲ್ಲಿನ ಪುರಾಣ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದ ಒಳಗಡೆ ಪಾದರಕ್ಷೆ ಧರಿಸಿ ಅಕ್ರಮವಾಗಿ ದೇಗುಲ ಪ್ರವೇಶಿಸಿ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಪೋಟೊ, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇವಾಲಯದ ಭಕ್ತರಿಂದ ಹಾಗೂ ಹಿಂದೂ ಪರ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಂಟ್ವಾಳ ತಾಲ್ಲೂಕು ಹಿಂದು ಜಾಗರಣ ವೇದಿಕೆ ಘಟನೆಯನ್ನು ಖಂಡಿಸಿದ್ದು, ಕಾನೂನು ಸಮರಕ್ಕೆ ಸಿದ್ಧವಾಗುವ ಸೂಚನೆ ನೀಡಿದೆ.

Ad Widget . Ad Widget .

ಏನಿದು ವಿವಾದ?.
ಶ್ರೀಕಾರಿಂಜೇಶ್ವರ ದೇವಸ್ಥಾನ ಬಂಟ್ವಾಳ ತಾಲೂಕಿನ ಕಾರಿಂಜ ಎಂಬ ಸ್ಥಳದಲ್ಲಿ ನೆಲೆಗೊಂಡಿರುವ ಪುರಾಣ ಪ್ರಸಿದ್ಧ ಈಶ್ವರನ ಸನ್ನಿಧಿ. ಬೆಟ್ಟದ ತುದಿಯಲ್ಲಿರುವ ದೇವಾಲಯ ಇದಾಗಿದ್ದು, ದೇವಾಲಯಕ್ಕೆ ಪ್ರವೇಶ ನೀಡುತ್ತಲೇ ಸುತ್ತಮುತ್ತಲಿನ ಭವ್ಯ ನೋಟವನ್ನು ನೀಡುತ್ತದೆ. ಈ ದೇವಾಲಯವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಒಂದು ಶಿವನಿಗೆ ಮತ್ತು ಇನ್ನೊಂದು ಪಾರ್ವತಿ ಮತ್ತು ಗಣೇಶ ದೇವರಿಗಾಗಿ ಸ್ಥಾಪಿಸಲಾಗಿದೆ. ದೇವಾಲಯವನ್ನು ತಲುಪಲು ಸುಮಾರು 355 ಮೆಟ್ಟಿಲುಗಳಿವೆ. ಪಾರ್ವತಿ ದೇವಿಯ ದೇವಾಲಯವು ಶಿವ ದೇವಾಲಯದ ಸ್ವಲ್ಪ ಕೆಳಕ್ಕೆ ಇಳಿಯುತ್ತದೆ. ಶಿವ ದೇವಾಲಯವನ್ನು ಜೈನ ಹಾಗೂ ವೈಷ್ಣವ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಹಿಂದೂ ಪುರಾಣಗಳಲ್ಲಿ ನಾಲ್ಕು ಯುಗಗಳನ್ನು ಉಲ್ಲೇಖಿಸಲಾಗಿದ್ದು, ಆ ನಾಲ್ಕೂ ಯುಗದಲ್ಲೂ ಕಾರಿಂಜೇಶ್ವರ ದೇವಸ್ಥಾನದ ಉಲ್ಲೇಖವಿದ್ದು, ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಈ ದೇವಾಲಯವನ್ನು ಕ್ರುತ ಯುಗದ ಸಮಯದಲ್ಲಿ ‘ರೌದ್ರ ಗಿರಿ’, ‘ದ್ವಾಪರಯುಗದಲ್ಲಿ‘ ಭೀಮಾ ಶೈಲಾ ’,‘ ತ್ರೇತಾ ಯುಗ’ದಲ್ಲಿ ಗಜೇಂದ್ರ ಗಿರಿ ’, ಮತ್ತು‘ ಕಲಿಯುಗ ’ದಲ್ಲಿ‘ ಕಾರಿಂಜ ’ಎಂದು ಕರೆಯಲಾಗುತ್ತಿತ್ತು. ಹಾಗಾಗಿ ಇದು ನಾಲ್ಕು ಪ್ರಮುಖ ಯುಗಗಳಿಗೆ ಸಾಕ್ಷಿಯಾಗಿರುವ ಒಂದು ಐತಿಹಾಸಿಕ ದೇವಾಲಯವಾಗಿದ್ದು, ಭಕ್ತರ ಪಾಲಿಗೆ ಬಲು ಇಷ್ಟದಾಯಕವಾಗಿದೆ.
ಇಂತಹ ದೇವಾಲಯದಲ್ಲಿ ಮತಿಗೇಡಿಗಳು ತಮ್ಮ‌ ಅತಿರೇಕ ತೋರಿದ್ದು, ದೇಗುಲದ ಒಳಗಡೆ ಪಾದರಕ್ಷೆ ಧರಿಸಿ ವಿಕೃತಿ ಮೆರೆದಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ‌.

Leave a Comment

Your email address will not be published. Required fields are marked *