Ad Widget .

2ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಉಪ್ಪು ನೀರಿನ ಟ್ಯಾಂಕ್ ಗೆ ಬಿಸಾಕಿದ ಕಿರಾತಕ

ಮಂಗಳೂರು: ಲೈಂಗಿಕ ಕಿರುಕುಳ ನೀಡಲು 2 ವರ್ಷದ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಹೊತ್ತೊಯ್ದಿದ್ದು, ಬಳಿಕ ಮಗುವನ್ನು ಉಪ್ಪು ನೀರಿನ ಟ್ಯಾಂಕ್ ಎಸೆದು ಹೋಗಿರುವ ಹೀನಾತಿಹೀನ ಕೃತ್ಯ ನಡೆದಿದೆ.

Ad Widget . Ad Widget .

ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುಕೃತ್ಯ ನಡೆದಿದೆ. ಫಿಶ್ ಕಟ್ಟಿಂಗ್ ಮಾಡುವ ಫ್ಯಾಕ್ಟರಿ ಬಳಿ ಬಿಹಾರ ಮೂಲದ ಕಾರ್ಮಿಕರು ನೆಲೆಸಿದ್ದಾರೆ. ಕಾರ್ಮಿಕರೆಲ್ಲರ ಮಕ್ಕಳನ್ನ ನೋಡಿಕೊಳ್ಳಲು ಒಂದು ಕ್ಯಾಂಪ್ ಇದೆ. ಆ ಶಿಬಿರದಿಂದ ಹೆಣ್ಣು ಮಗುವನ್ನು ಚಂದನ್ ಎಂಬ ಆರೋಪಿ ಹೊತ್ತೊಯ್ದಿದ್ದಾನೆ. ಲೈಂಗಿಕ ಕಿರುಕುಳ ನೀಡಿ ಮಗುವನ್ನು ಫಿಶ್ ಕಟ್ಟಿಂಗ್ ಟ್ಯಾಂಕ್ ಗೆ ಬಿಸಾಡಿ ಹೋಗಿದ್ದಾನೆ.

Ad Widget . Ad Widget .

ನಾಲ್ಕು ಗಂಟೆಗಳ ಕಾಲ ಜೀವನ್ಮರಣದ ಮಧ್ಯೆ ಮಗು ಹೋರಾಡಿದೆ. ಫಿಶ್ ಕಟ್ಟಿಂಗ್ ಟ್ಯಾಂಕ್ ನಲ್ಲಿ ಮಗುವಿನ ಜೀವನ್ಮರಣ ಹೋರಾಟ ನಡೆಸುವಾಗ ಟ್ಯಾಂಕ್ ನಲ್ಲಿದ್ದ ಉಪ್ಪು ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾಳೆ. ಶ್ವಾಸಕೋಶಕ್ಕೆ ನೀರು ತುಂಬಿಕೊಂಡು ಮಗು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾಳೆ. ವೆನ್ಲಾಕ್ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿದೆ.

Leave a Comment

Your email address will not be published. Required fields are marked *