ನವದೆಹಲಿ: ದೀಪಾವಳಿಯ ಮೊದಲು LPG ಬೆಲೆಯಲ್ಲಿ ಹೆಚ್ಚಳ ಕಂಡಿದೆ. ಅಂದ ಹಾಗೇ ಪ್ರತಿ ತಿಂಗಳ ಮೊದಲ ದಿನ ಗ್ಯಾಸ್ ಸಿಲೆಂಡರ್ ಬೆಲೆಯನ್ನು ನಿಗದಿ ಮಾಡಲಾಗುತ್ತಿದ್ದು, ಅದರಂತೆ ಇಂದು ವಾಣಿಜ್ಯ ಸಿಲಿಂಡರ್ ಬೆಲೆ 265 ರೂ ಹೆಚ್ಚಳ ಮಾಡಲಾಗಿದೆ.
ಈಗ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ 2000 ರೂ ದಾಟಿದೆ. ಮೊದಲು 1733 ರೂ ಇತ್ತು, . ಮುಂಬೈನಲ್ಲಿ 1683 ರೂ.ಗೆ ದೊರೆಯುವ 19 ಕೆಜಿ ಸಿಲಿಂಡರ್ ಈಗ 1950 ರೂ.ಗೆ ಲಭ್ಯವಾಗಲಿದೆ. ಅದೇ ಸಮಯದಲ್ಲಿ, ಈಗ 19 ಕೆಜಿ ಇಂಡೇನ್ ಗ್ಯಾಸ್ ಸಿಲಿಂಡರ್ ಕೋಲ್ಕತ್ತಾದಲ್ಲಿ 2073.50 ರೂ. ಚೆನ್ನೈನಲ್ಲಿ ಈಗ 19 ಕೆಜಿ ಸಿಲಿಂಡರ್ ಬೆಲೆ 2133 ರೂ ಆಗಲಿದೆ.
ದರ ಏರಿಕೆಯಿಂದಾಗಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ತಿನಿಸುಗಳ ಬೆಲೆಯಲ್ಲಿ ಕೂಡ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಒಟ್ಟಿನಲ್ಲಿ ಹೋಟೆಲ್ ಮಾಲೀಕರಿಗೆ ಹೋಟೆಲ್ ಗ್ರಾಹಕರ ಕಿಸೆಗೆ ದೊಡ್ಡ ಮಟ್ಟದಲ್ಲಿ ಕನ್ನ ಬೀಳುತ್ತಿದೆ