ಮಲೆನಾಡಿನ ಸೊಗಡು ಪರಿಚಯಿಸುತ್ತಿದೆ ಕಾರ್ಟೂನ್ ಚಾನೆಲ್| ಆರಂಭದಿಂದಲೇ ಅದ್ಭುತ ಪ್ರತಿಕ್ರಿಯೆ ಪಡೆದ ‘ಮಲ್ನಾಡ್ ಪುಟಾಣಿಗಳು’
ಶಿವಮೊಗ್ಗ: ಮಲೆನಾಡಿನ ಭಾಷಾ ಸೊಗಡು ಹಾಗೂ ಇಲ್ಲಿನ ಆಹಾರ ಪದ್ಧತಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಬೇಕು ಎಂಬ ಮಹತ್ವಾ ಕಾಂಕ್ಷೆಯೊಂದಿಗೆ ತೀರ್ಥಹಳ್ಳಿಯಲ್ಲಿ ಒಂದೇ ಕುಟುಂಬದವರು ‘ಮಲ್ನಾಡ್ ಪುಟಾಣಿಗಳು’ ಕನ್ನಡ ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಆರಂಭಿಸಿರುವ ಈ ಚಾನೆಲ್‌ಗೆ ವಿದೇಶದಲ್ಲೂ ವೀಕ್ಷಕರಿದ್ದಾರೆ. ವಿಶೇಷವೆಂದರೆ, ಶುರುವಾದ ಎರಡೇ ತಿಂಗಳಲ್ಲಿ 20 ಲಕ್ಷ ವೀಕ್ಷಕರನ್ನು ಚಾನೆಲ್ ಸಂಪಾದಿಸಿದೆ. ಮಲೆನಾಡಿನ ಸಂಸ್ಕೃತಿ, ಭಾಷೆಯನ್ನು ಉಳಿಸಿ ಬೆಳೆಸುವ ಹಾಗೂ ಜಾಗತಿಕ ಮಟ್ಟ ದಲ್ಲಿ ಜನರಿಗೆ ಇದನ್ನು ತಲುಪಿಸುವುದಕ್ಕಾಗಿ ಉಪನ್ಯಾಸಕಿ […]