ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಚೈತ್ರಾ ಕುಂದಾಪುರ ವಿಡಿಯೋಗೆ ಅಶ್ಲೀಲ ವಾಯ್ಸ್| ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಕೀಳು ಮಟ್ಟದ ಅವಮಾನ ಮಾಡಿ ಪೋಸ್ಟಿಂಗ್| ಕೋಮು ಸಾಮರಸ್ಯ ಕದಡುತ್ತಿರುವವರಾರು?
ಮಂಗಳೂರು: ಚೈತ್ರಾ ಕುಂದಾಪುರ ಹಾಗೂ ತುಳುವರ ಆರಾಧ್ಯ ದೈವ ಕೊರಗಜ್ಜನನ್ನು ತೀರಾ ತುಚ್ಚ ರೀತಿಯಲ್ಲಿ, ಅಶ್ಲೀಲವಾಗಿ ನಿಂದಿಸುವ ಮೂಲಕ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಅವಮಾನ ಮಾಡಲಾಗಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆಯಲ್ಲದೆ ಆಕ್ರೋಶ ವ್ಯಕ್ತವಾಗಿದೆ. ಟಾರ್ಗೆಟ್ ಹಿಂದೂಸ್’ ಎಂಬ ಪ್ರೊಫೈಲ್ ಫೋಟೋ ಇಟ್ಟುsula-tuluver’ ಎಂಬ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆಯಲಾಗಿದ್ದು, ಇದರ ಡಿಸ್ಕ್ರಿಪ್ಷನ್‍ನಲ್ಲಿ ತುಳು ಅಪ್ಪೆ ಹಾಗೂ ಕೊರಗಜ್ಜನಿಗೆ ತೀರಾ ತುಚ್ಚ ರೀತಿಯಲ್ಲಿ ನಿಂದಿಸಲಾಗಿದೆ. ಅಲ್ಲದೆ ಮೊನ್ನೆ ಸುರತ್ಕಲ್‍ನಲ್ಲಿ ಭಾಷಣ ಮಾಡಿದ್ದ ಚೈತ್ರಾ ಕುಂದಾಪುರ ಅವರ ಭಾಷಣದ ವಿಡಿಯೋದ […]