October 2021

ಭೀಕರ ಅಪಘಾತ| ಪುಂಜಾಲಕಟ್ಟೆ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸಾವು|

ಬೆಳ್ತಂಗಡಿ: ಬೈಕ್ ಮತ್ತು ಆಕ್ಟಿವ್ ನಡುವೆ ಭೀಕರ ಅಪಘಾತ ಸಂಭವಿಸಿ ಪುಂಜಾಲಕಟ್ಟೆಯ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಸಮೀಪದ ನೇರಳಕಟ್ಟೆ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅಬೂಬಕ್ಕರ್(48) ಎಂದು ಗುರುತಿಸಲಾಗಿದೆ. ಅಬೂಬಕ್ಕರ್ ಅವರು ಕರ್ತವ್ಯ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತಡರಳುತ್ತಿದ್ದಾಗ ಎದುರಿನಿಂದ ಬಂದ ಜುಪಿಟರ್ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಭೀಕರ ಅಪಘಾತ| ಪುಂಜಾಲಕಟ್ಟೆ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸಾವು| Read More »

ತಾಯಿ-ಮಗನಿಗೆ ಗುಂಡಿಕ್ಕಿ ‌ವ್ಯಕ್ತಿ ಆತ್ಮಹತ್ಯೆ

ಕೊಡಗು: ತಾಯಿ, ಮಗನಿಗೆ ಗುಂಡಿಕ್ಕಿ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಿರಗೂರು ಗ್ರಾಮದಲ್ಲಿ ನಡೆದಿದೆ. ಮಗ ಮಧು(42) ಸಾವು, ತಾಯಿ ಯಶೋದಾ ಸ್ಥಿತಿ ಗಂಭೀರವಾಗಿದ್ದು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ ಆಲೆಮಾಡ ಸಾಗರ್(52) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಆರೋಪಿ ಆಲೆಮಾಡ ಸಾಗರ್ ತಾಯಿ, ಮಗನಿಗೆ ಶೋಟ್ ಮಾಡಿದ್ದಾನೆ. ಈ ಪೈಕಿ ಮಗ ಮಧು ಸ್ಥಳದಲ್ಲೇ ಮೃತಪಟ್ಟಿದ್ದು ತಾಯಿ ಯಶೋದಾ ಸ್ಥಿತಿ ಗಂಭೀರವಾಗಿದೆ. ಇನ್ನು ಶೋಟ್ ಮಾಡಿದ ಬಳಿಕ ಆರೋಪಿ

ತಾಯಿ-ಮಗನಿಗೆ ಗುಂಡಿಕ್ಕಿ ‌ವ್ಯಕ್ತಿ ಆತ್ಮಹತ್ಯೆ Read More »

ಆಸ್ಪತ್ರೆಯಲ್ಲಿ ‌ಮಗುವನ್ನು ಬದಲಾಯಿಸಿದರಾ ನರ್ಸ್ ಗಳು| ಲೇಡಿಗೋಷನ್ ಆಸ್ಪತ್ರೆ ಸಿಬ್ಬಂದಿ ಮೇಲೆ ಪೋಷಕರ ಆರೋಪ

ಮಂಗಳೂರು : ನಗರದ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಡಿಸ್ಚಾರ್ಜ್ ವೇಳೆ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸೆಪ್ಟಂಬರ್ 28 ರಂದು ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಅಂಬ್ರೀನ್ ಅವರಿಗೆ ಮಂಗಳೂರಿನ ಲೇಡಿಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಮಗುವನ್ನು ತೋರಿಸಲು ಸಿಬ್ಬಂದಿಗಳು ನಿರಾಕರಿಸಿದ್ದರು ಹಾಗೂ 18 ದಿನಗಳ ಕಾಲ

ಆಸ್ಪತ್ರೆಯಲ್ಲಿ ‌ಮಗುವನ್ನು ಬದಲಾಯಿಸಿದರಾ ನರ್ಸ್ ಗಳು| ಲೇಡಿಗೋಷನ್ ಆಸ್ಪತ್ರೆ ಸಿಬ್ಬಂದಿ ಮೇಲೆ ಪೋಷಕರ ಆರೋಪ Read More »

ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಬೆತ್ತಲಾಗಿ ಓಡಾಡಿದ ಮಹಿಳೆ| ಕ್ಯಾಮೆರಾ ‌ಕಣ್ಣಿಗೆ ನಗ್ನ ಸೌಂದರ್ಯ ಪ್ರದರ್ಶಿಸಿದ್ದು ಯಾಕೆ?

ಡಿಜಿಟಲ್ ಡೆಸ್ಕ್ : ಸಾರ್ವಜನಿಕವಾಗಿ ಯಾರೂ ಕೂಡಾ ಅಸಭ್ಯವಾಗಿ ವರ್ತಿಸುವ ಹಾಗಿಲ್ಲ. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ಅಸಭ್ಯವಾಗಿ ವರ್ತಿಸಿದರೆ ಶಿಕ್ಷೆ ಆಗೋದು ಮಾತ್ರ ಗ್ಯಾರಂಟಿ. ಆದರೆ ಇಲ್ಲೊಬ್ಬಳು ಮಹಿಳೆ ಅಂತರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಏನು ಮಾಡಿದ್ದಾಳೆ ಗೊತ್ತಾ? ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬಳು ಮೈ ಮೇಲೆ ಬಟ್ಟೆ ಇಲ್ಲದೆ ರಾಜರೋಷವಾಗಿ ತಿರುಗಾಡಿದ್ದಾಳೆ. ಮಾತ್ರವಲ್ಲದೆ ಎಲ್ಲರೊಂದಿಗೆ ಮಾತನಾಡುತ್ತಾ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡಿದ್ದಾಳೆ. ಅಮೆರಿಕದ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಬೆತ್ತಲಾಗಿ ಓಡಾಡಿರುವುದು ಕಂಡು ಬಂದಿದೆ. ಪೊಲೀಸರು ಕಣ್ಣು

ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಬೆತ್ತಲಾಗಿ ಓಡಾಡಿದ ಮಹಿಳೆ| ಕ್ಯಾಮೆರಾ ‌ಕಣ್ಣಿಗೆ ನಗ್ನ ಸೌಂದರ್ಯ ಪ್ರದರ್ಶಿಸಿದ್ದು ಯಾಕೆ? Read More »

ಹಿರಿಯ ನಟ‌ ಪ್ರೊ. ಜಿ.ಕೆ ಗೋವಿಂದ ರಾವ್ ವಿಧಿವಶ

ಬೆಂಗಳೂರು: ನಾಡಿನ ಹೆಸರಾಂತ ಚಿಂತಕ.ಲೇಖಕ ಕನ್ನಡದ ಹಿರಿಯ ನಟ ಜಿ.ಕೆ ಗೋವಿಂದರಾವ್‌ ಅವರು ಇಂದು ಹುಬ್ಬಳ್ಳಿಯ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ. ಅನಾರೋಗ್ಯದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಜಿ.ಕೆ.ಗೋವಿಂದ ರಾವ್ ಗ್ರಹಣ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕನ್ನಡ ಟಿ ವಿ ಧಾರಾವಾಹಿಗಳಾದ ಮಹಾ ಪರ್ವದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಕೂಡ ಅವರನ್ನು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಅಧಿಕೃತ

ಹಿರಿಯ ನಟ‌ ಪ್ರೊ. ಜಿ.ಕೆ ಗೋವಿಂದ ರಾವ್ ವಿಧಿವಶ Read More »

ಮೈಸೂರು: ಜಂಬೂ ಸವಾರಿಗೆ ಕ್ಷಣಗಣನೆ|

ಮೈಸೂರು: ಅರಮನೆ ನಗರಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಶುಭ ಶುಕ್ರವಾರ(ಅ.15) ಬೆಳ್ಳಂಬೆಳಗ್ಗೆ 4.40ಕ್ಕೆ ಅರಮನೆಯಲ್ಲಿ ವಿಜಯದಶಮಿ‌ ಪೂಜಾ ಕೈಂಕರ್ಯಗಳು ಆರಂಭವಾಯಿತು. ಕಳೆದೊಂದು ವಾರದಿಂದ ಆರಂಭವಾಗಿರುವ ನಾಡಹಬ್ಬ ದಸರಾ ಉತ್ಸವದ ಸಂಭ್ರಮಕ್ಕೆ ಇಂದಿನ ಜಂಬೂಸವಾರಿ ಮೆರವಣಿಗೆಯ ಮೂಲಕ ತೆರೆ ಬೀಳಲಿದೆ. ಕೊರೊನಾ ಕಾರಣದಿಂದ ಈ ಬಾರಿಯೂ ಸರಳವಾಗಿ ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಪ್ರತಿಬಾರಿಯಂತೆ ಅರಮನೆ ನಗರಿ ಸುಂದರವಾಗಿ ಸಿಂಗಾರಗೊಂಡಿದೆ. ಐತಿಹಾಸಿಕ ದಸರಾ ಮಹೋತ್ಸವನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಅರಮನೆ ನಗರಿಯ

ಮೈಸೂರು: ಜಂಬೂ ಸವಾರಿಗೆ ಕ್ಷಣಗಣನೆ| Read More »

ಆರ್ಯನ್ ಡ್ರಗ್ಸ್ ಸೇವನೆ ವಿಚಾರ ಬಹಿರಂಗಗೊಳಿಸಿದ ವಕೀಲರು| ಎಷ್ಟು ವರ್ಷದಿಂದ ಅಮಲು ಸೇವನೆ ಗೊತ್ತಾ?

ಮುಂಬೈ : ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ಮುಂಬೈ ಸೆಷನ್ಸ್ ಕೋರ್ಟ್ ಮುಂದೆ ಎನ್‍ಬಿಸಿ ಪರ ವಕೀಲ ಎಎಸ್‍ಜಿ ಅನಿಲ್‌ ಸಿಂಗ್‌ ಮಹತ್ವದ ಅಂಶದೊಂದಿಗೆ ವಾದ ಆರಂಭಿಸಿದ್ದಾರೆ.ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಮೂರು ವರ್ಷಗಳಿಂದ ಡ್ರಗ್ ಸೇವಿಸುತ್ತಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಹಾಗೂ ಇತರೆ ಆರೋಪಿಗಳು ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ

ಆರ್ಯನ್ ಡ್ರಗ್ಸ್ ಸೇವನೆ ವಿಚಾರ ಬಹಿರಂಗಗೊಳಿಸಿದ ವಕೀಲರು| ಎಷ್ಟು ವರ್ಷದಿಂದ ಅಮಲು ಸೇವನೆ ಗೊತ್ತಾ? Read More »

ಕೊನೆಗೂ ರಿಲೀಸ್ ಆಯ್ತು ಕೋಟಿಗೊಬ್ಬ 3| 300 ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ

ಬೆಂಗಳೂರು : ತಾಂತ್ರಿಕ ಕಾರಣಗಳಿಂದ ನಿನ್ನೆ ಬಿಡುಗಡೆಯಾಗಬೇಕಿದ್ದ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಇಂದು ಬಿಡುಗಡೆಯಾಗಿದೆ. ವಿತರಕರನ್ನು ಬದಲಾಯಿಸಿರುವ ಚಿತ್ರತಂಡ ಇದೀಗ ಜಾಕ್ ಮಂಜು, ಗಂಗಾಧರ್ ಸಾರಥ್ಯದಲ್ಲಿ ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯಾಗಿದೆ. ಅಕ್ಟೋಬರ್ 14 ರ ನಿನ್ನೆ ಬಿಡುಗಡೆಯಾಗಬೇಕಿದ್ದ ಕೋಟಿಗೊಬ್ಬ-3 ಚಿತ್ರ ಇಂದು ಬಿಡುಗಡೆಯಾಗಿದದೆ. ನಿನ್ನೆಯೇ ಸಿನಿಮಾ ಬಿಡುಗಡೆ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಆಕ್ರೋಶಗೊಂಡಿದ್ದ ಸುದೀಪ್ ಅಭಿಮಾನಿಗಳು ಹಲವೆಡೆ ಥಿಯೇಟರ್ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಕೊನೆಗೂ ರಿಲೀಸ್ ಆಯ್ತು ಕೋಟಿಗೊಬ್ಬ 3| 300 ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ Read More »

ಸುಳ್ಯ: ಪೊಲೀಸ್ ಠಾಣೆಯಲ್ಲಿ ವಿಶಿಷ್ಟ ಆಯುಧ ಪೂಜೆ| ಸಾಂಪ್ರದಾಯಿಕ ಧಿರಿಸಿನೊಂದಿಗೆ ‌ಮಿಂಚಿದ ಆರಕ್ಷಕರು

ಸುಳ್ಯ: ನಾಡಿನೆಲ್ಲೆಡೆ ಸಂಭ್ರಮದ ಆಯುಧ ಪೂಜೆ ನಡೆಯುತ್ತಿದ್ದರೆ, ಸುಳ್ಯ ಠಾಣೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ನಡೆಸಲಾಯಿತು. ದಿನಂಪ್ರತಿ ಖಾಕಿ ಬಟ್ಟೆಯಲ್ಲಿ ಜಬರ್ದಸ್ತ್ ಆಗಿ ಕಾಣುತ್ತಿದ್ದ ಪೊಲೀಸರು ಇಂದು ಸಾಂಪ್ರದಾಯಿಕ ಶೈಲಿಯ ದಿರಿಸನ್ನು ಧರಿಸಿ ಹಬ್ಬಾಚರಣೆ ನಡೆಸಿದರು. ಠಾಣೆಯಲ್ಲಿ ಆಯುಧಗಳಿಗೆ ಪೂಜೆ ನಡೆಸಲಾಯಿತು. ಬಳಿಕ ಪೊಲೀಸ್ ವಾಹನಗಳಿಗೆ ವಾಹನ ಪೂಜೆ ನಡೆಸಿ ಸಿಹಿಹಂಚಿ ಸಂಭ್ರಮಿಸಿದರು.

ಸುಳ್ಯ: ಪೊಲೀಸ್ ಠಾಣೆಯಲ್ಲಿ ವಿಶಿಷ್ಟ ಆಯುಧ ಪೂಜೆ| ಸಾಂಪ್ರದಾಯಿಕ ಧಿರಿಸಿನೊಂದಿಗೆ ‌ಮಿಂಚಿದ ಆರಕ್ಷಕರು Read More »

ಬೆಟ್ಟದಿಂದ ಭುವಿಗಿಳಿದ ನಾಡದೇವಿ| ನಾಳೆ ಜಗದ್ವಿಖ್ಯಾತ ಜಂಬೂಸವಾರಿ| ಸಿಂಗಾರಗೊಂಡ ಸಾಂಸ್ಕೃತಿಕ ನಗರಿ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ಜೊತೆಗೆ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ. ವಿಜಯದಶಮಿ ದಿನವಾದ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ, ಸೋಮಶೇಖರ್ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡುವರು. ಚಾಮುಂಡೇಶ್ವರಿ

ಬೆಟ್ಟದಿಂದ ಭುವಿಗಿಳಿದ ನಾಡದೇವಿ| ನಾಳೆ ಜಗದ್ವಿಖ್ಯಾತ ಜಂಬೂಸವಾರಿ| ಸಿಂಗಾರಗೊಂಡ ಸಾಂಸ್ಕೃತಿಕ ನಗರಿ Read More »