October 2021

ಅ.24ರಿಂದ ಒಂದು ವಾರ ಕನ್ನಡ ಕಂಪು| ವಿಶಿಷ್ಟ ಕಾರ್ಯಕ್ರಮಕ್ಕೆ ತಯಾರಿ|

ಬೆಂಗಳೂರು: ರಾಜ್ಯಾದ್ಯಂತ 66ನೇ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಣೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೇ ತಿಂಗಳ 24ರಿಂದ 30ರವರೆಗೆ ಒಂದು ವಾರ ಕಾಲ ‘ಕನ್ನಡಕ್ಕಾಗಿ ನಾವು’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಮಾತಾಡ್‌ ಮಾತಾಡ್‌ ಕನ್ನಡ ಎಂಬ ಘೋಷ ವಾಕ್ಯದ ಕಲ್ಪನೆಯಲ್ಲಿ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲಾಗಿದ್ದು, ಈ ಒಂದು ವಾರ ಕಾಲ ಆರು ರೀತಿಯ ಅಭಿಯಾನಗಳನ್ನು ಕೈಗೊಳ್ಳಲಾಗುತ್ತದೆ. ಅಭಿಯಾನದ ವೇಳೆ ಎಲ್ಲರೂ ಕನ್ನಡದಲ್ಲಿಯೇ ಮಾತನಾಡುವುದು, ಕನ್ನಡದಲ್ಲಿಯೇ ವ್ಯವಹರಿಸುವುದು, ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಕನ್ನಡವನ್ನೇ ಬಳಸುವುದು, […]

ಅ.24ರಿಂದ ಒಂದು ವಾರ ಕನ್ನಡ ಕಂಪು| ವಿಶಿಷ್ಟ ಕಾರ್ಯಕ್ರಮಕ್ಕೆ ತಯಾರಿ| Read More »

ನಟಿ ಸಂಜನಾ ಗಲ್ರಾಣಿಗೆ ವಂಚನೆ| ಸ್ನೇಹಿತನ ವಿರುದ್ದ ಎಫ್ಐಆರ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಂಜನಾ ಗಲ್ರಾಣಿಗೆ ಸ್ನೇಹಿತನಿಂದಲೇ ವಂಚನೆಯಾಗಿದ್ದು ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕ್ಯಾಸಿನೊದಲ್ಲಿ ಹಣ ಹೂಡಿಕೆ ಮಾಡುವುದಾಗಿ ರಾಹುಲ್ ಥೋನ್ಸೆ ಸಂಜನಾಗೆ ಕಳೆದ ಮೂರು ವರ್ಷಗಳಿಂದ ಹಣದ ಹೂಡಿಕೆ ವಿಚಾರದಲ್ಲಿ ವಂಚನೆ ಎಸಗಿರುವುದು ಗೊತ್ತಾಗಿದ್ದು ಇಂದಿರಾನಗರ ಪೊಲೀಸರು ರಾಹುಲ್ ಥೋನ್ಸೆ, ರಾಮಕೃಷ್ಣ ಹಾಗೂ ಶ್ರೀಮತಿ ರಾಗೇಶ್ವರಿ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಮೂವರ ವಿರುದ್ಧವೂ ಐಪಿಸಿ ಸೆಕ್ಷನ್ 120 ಬಿ,

ನಟಿ ಸಂಜನಾ ಗಲ್ರಾಣಿಗೆ ವಂಚನೆ| ಸ್ನೇಹಿತನ ವಿರುದ್ದ ಎಫ್ಐಆರ್ Read More »

ಉಳ್ಳಾಲ: ಯುವಕನಿಗೆ ಚೂರಿ ಇರಿತ – ಆರೋಪಿ ಪರಾರಿ, ಪೊಲೀಸರಿಂದ ಶೋಧ

ಮಂಗಳೂರು: ಉಳ್ಳಾಲದ ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಗಾಯಗೊಂಡವರನ್ನು ಗ್ಯಾಸ್ ರಿಪೇರಿ ಅಂಗಡಿ ಮಾಲೀಕ ಹರೀಶ್ ಎಂದು ಗುರುತಿಸಲಾಗಿದೆ. ಉಳ್ಳಾಲ ಪೊಲೀಸರು ಗಾಯಾಳುಗಳನ್ನು ತೊಕ್ಕೊಟ್ಟುವಿನಲ್ಲಿರುವ ಆಸ್ಪತ್ರೆಗೆ ಸೇರಿಸಿದ್ದಾರೆ. ಮೊಗವೀರಪಟ್ನ ನಿವಾಸಿಯೊಬ್ಬ ವಿಶಾಲ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ವೈಯಕ್ತಿಕ ದ್ವೇಷದಿಂದ ನಡೆದಿರುವ ಕೃತ್ಯ ಎಂದು ಶಂಕಿಸಲಾಗಿದ್ದು, ಸದ್ಯ ವಿಶಾಲ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಉಳ್ಳಾಲ: ಯುವಕನಿಗೆ ಚೂರಿ ಇರಿತ – ಆರೋಪಿ ಪರಾರಿ, ಪೊಲೀಸರಿಂದ ಶೋಧ Read More »

ವರ್ಷ ಹಲವಾದರೂ ಮದುವೆಯಾಗದ ಸಂಸದೆ ಕುರಿತು ಚೈತ್ರಾ ಕುಂದಾಪುರ ಯಾಕೆ ಪ್ರಶ್ನೆ ಕೇಳಲ್ಲ – ಮಾಜಿ ಶಾಸಕ ಶಕುಂತಳಾ ಶೆಟ್ಟಿ

ಮಂಗಳೂರು: ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಂಟ ಸಮುದಾಯದ ಹುಡುಗಿಯ ಬಗ್ಗೆ ಮಾತನಾಡುವ ಚೈತ್ರಾ ಕುಂದಾಪುರ ನಿಮ್ಮದೇ ಕ್ಷೇತ್ರದ ಸಂಸದೆ ಜೊತೆಗೆ ನನ್ನ ಊರಿನ ಹೆಣ್ಣು ಮಗಳು ಶೋಭಾ ಕರಂದ್ಲಾಜೆಗೆ 55 ವರ್ಷ ಪ್ರಾಯ ಆದ್ರೂ ಮದುವೆ ಆಗದ ಕುರಿತು ನೀವು ಯಾಕೆ ಪ್ರಶ್ನೆ ಎತ್ತಿಲ್ಲ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ ಸಮುದಾಯದವರು ಪಕ್ಷದ ರಾಜ್ಯಾಧ್ಯಕ್ಷರಾಗಿರುವಾಗ, ಆಕೆ ಭಾಷಣ ಮಾಡಿದ ಜಾಗದಲ್ಲಿ ಬಂಟ ಸಮುದಾಯ ಪ್ರತಿನಿಧಿ ಶಾಸಕರಾಗಿರುವಾಗ, ಬಂಟ ಸಮುದಾಯದ ಹೆಣ್ಣು

ವರ್ಷ ಹಲವಾದರೂ ಮದುವೆಯಾಗದ ಸಂಸದೆ ಕುರಿತು ಚೈತ್ರಾ ಕುಂದಾಪುರ ಯಾಕೆ ಪ್ರಶ್ನೆ ಕೇಳಲ್ಲ – ಮಾಜಿ ಶಾಸಕ ಶಕುಂತಳಾ ಶೆಟ್ಟಿ Read More »

“ನಳಿನ್ ಗೆ ಹುಚ್ಚು ಹಿಡಿದಿದೆ, ದಯವಿಟ್ಟು ನಿಮ್ಹಾನ್ಸ್ ಗೆ ಸೇರಿಸಿ”| ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಿಡಿಕಾರಿದ‌ ಮಾಜಿ ಸಿಎಂ ಸಿದ್ದರಾಮಯ್ಯ

ಸಿಂದಗಿ: ‘ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಕೆಂಡ ಕಾರಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಂದಗಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಳೀನ್ ಕುಮಾರ್ ಕಟೀಲ್ ಒಬ್ಬ ಬೇಜವಾಬ್ದಾರಿ, ಅಪ್ರಬುದ್ಧ ರಾಜಕಾರಣಿ. ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಹುಚ್ಚನ ತರಹ ಮಾತನಾಡುತ್ತಿದ್ದಾರೆ. ಮೊದಲು ಅವರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಎಂದು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ನಳೀನ್ ಕಟೀಲ್ ನೀಡಿರುವ ಹೇಳಿಕೆ ಖಂಡನೀಯ.

“ನಳಿನ್ ಗೆ ಹುಚ್ಚು ಹಿಡಿದಿದೆ, ದಯವಿಟ್ಟು ನಿಮ್ಹಾನ್ಸ್ ಗೆ ಸೇರಿಸಿ”| ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಿಡಿಕಾರಿದ‌ ಮಾಜಿ ಸಿಎಂ ಸಿದ್ದರಾಮಯ್ಯ Read More »

ಡೀಸೆಲ್‌ ಬೆಲೆ ಇಳಿಸದಿದ್ದರೆ ಅನಿರ್ಧಿಷ್ಟಾವಧಿ ಲಾರಿ ಮುಷ್ಕರ| ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಲಾರಿ ಮಾಲೀಕರು|

ಬೆಂಗಳೂರು: ಡೀಸೆಲ್‌ ಮೇಲೆ ವಿಧಿಸಿರುವ ವ್ಯಾಟ್‌ ಅನ್ನು ರಾಜ್ಯ ಸರ್ಕಾರ ಕಡಿಮೆ ಮಾಡಬೇಕು ಇಲ್ಲವಾದಲ್ಲಿ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಡಿಸೇಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ ಕಳೆದ ಒಂದು ವರ್ಷದಲ್ಲಿ ಡೀಸೆಲ್ ಬೆಲೆ 26 ರೂಪಾಯಿಯಷ್ಟು ಹೆಚ್ಚಾಗಿದೆ.‌ ರಾಜ್ಯದಲ್ಲಿರುವ ಆರು ಲಕ್ಷ ಲಾರಿಗಳಲ್ಲಿ ಶೇ. 30 ರಷ್ಟು ಲಾರಿಗಳು ಶೆಡ್ ಸೇರಿವೆ. ದಿನದಿಂದ‌

ಡೀಸೆಲ್‌ ಬೆಲೆ ಇಳಿಸದಿದ್ದರೆ ಅನಿರ್ಧಿಷ್ಟಾವಧಿ ಲಾರಿ ಮುಷ್ಕರ| ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಲಾರಿ ಮಾಲೀಕರು| Read More »

ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟರ್ – ವಿವಾದಾತ್ಮಕ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್

ಹುಬ್ಬಳ್ಳಿ: ‘ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್. ಡ್ರಗ್ ಪೆಡ್ಲರ್’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತೆ ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್ ಕುಮಾರ್, ‘ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್ , ಡ್ರಗ್ ಪೆಡ್ಲರ್ ಅಂತ ವರದಿಯಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ‘ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಜೈಲಿಗೆ ಹೋಗಿ ಬಂದಿದ್ದಾರೆ. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ

ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟರ್ – ವಿವಾದಾತ್ಮಕ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್ Read More »

ಉತ್ತರಾಖಂಡ್ ನಲ್ಲಿ ಭಾರೀ ವರ್ಷಧಾರೆ| ಹಲವೆಡೆ ಪ್ರವಾಹ, ಅಪಾರ ನಷ್ಟ|

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯೊಂದಿಗೆ ಚರ್ಚಿಸಿದ್ದು, ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ಪ್ರಧಾನಿ ಅವಲೋಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿಯಿಂದ ನೈನಿತಾಲ್ ಮತ್ತು ಕೌಶಾನಿಯಿಂದ ಮುನ್ಸಿವರೆಗೆ ಹೋಗುವ ದಾರಿಯಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ. ಕೌಶನಿಯ ವಿವಿಧ ಸ್ಥಳಗಳಲ್ಲಿ ಸುಮಾರು 500 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಅಲ್ಮೋರಾ ಜಿಲ್ಲೆಯಲ್ಲಿ ಭಾರೀ

ಉತ್ತರಾಖಂಡ್ ನಲ್ಲಿ ಭಾರೀ ವರ್ಷಧಾರೆ| ಹಲವೆಡೆ ಪ್ರವಾಹ, ಅಪಾರ ನಷ್ಟ| Read More »

ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಸುಬ್ರಹ್ಮಣ್ಯ: ಇಲ್ಲಿನ ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯೊಬ್ವರ ಮೃತದೇಹ ಪತ್ತೆಯಾಗಿದೆ. ಗೃಹ ರಕ್ಷಕ ದಳದ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಕುಮಾರಧಾರ ನದಿಯಿಂದ ಮೃತ ದೇಹವನ್ನು ಮೇಲೆಕ್ಕೆತ್ತಿದ್ದಾರೆ. ಬಳಿಕ ಸುಬ್ರಹ್ಮಣ್ಯ ಪ್ರಾಥಮಿಕ ಅರೋಗ್ಯ ಕೇಂದ್ರದ ಶವಾಗಾರದಲ್ಲಿ ಮೃತ ದೇಹವನ್ನು ಇರಿಸಲಾಗಿದೆ. ಮೃತ ಮಹಿಳೆಯ ಪ್ರಾಯ ಸುಮಾರು 55 ವರ್ಷ ಆಗಬಹುದೆಂದು ಅಂದಾಜಿಸಲಾಗಿದೆ. ವಿಳಾಸ ಪತ್ತೆ ಇನ್ನಷ್ಟೇ ಆಗಬೇಕಿದ್ದು,ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್, ಎ. ಎಸ್.ಐ ಮೋಹನ್. ಕೆ,ಮಹಾಲಕ್ಷ್ಮಿ, ಮಹೇಶ್ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ Read More »

45ರ ವರ, 25ರ ವಧು..! ವೈರಲ್ ಆಗ್ತಾ‌ ಇದೆ ಈ ಜೋಡಿಯ ಫೋಟೋ|

ತುಮಕೂರು: ಮದುವೆಯನ್ನ ದೇವರು ಸ್ವರ್ಗದಲ್ಲೇ ನಿಶ್ಚಯ ಮಾಡುತ್ತಾನೆ ಅನ್ನೊ ಮಾತಿದೆ. ಋಣ ಸಂಬಂಧ ಇದ್ದರೆ ಎಲ್ಲೇ ಇದ್ದರೂ, ಹೇಗಾದರೂ ಒಂದಾಗುತ್ತಾರೆ ಅನ್ನೋ ಮಾತುಗಳು ಕೂಡ ಇವೆ. ಅದೇ ರೀತಿ ಈ ಮಾತುಗಳು ನಿಜವೆಂಬಂತೆ 45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ ಯುವತಿ ಮದುವೆಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬುವರ ಜೊತೆ ಮೇಘನಾ ಎಂಬ ಯುವತಿ ಮದುವೆಯಾಗಿದ್ದಾಳೆ. 45 ವರ್ಷದ ವ್ಯಕ್ತಿಯ ಜೊತೆ 25 ವರ್ಷದ

45ರ ವರ, 25ರ ವಧು..! ವೈರಲ್ ಆಗ್ತಾ‌ ಇದೆ ಈ ಜೋಡಿಯ ಫೋಟೋ| Read More »