October 2021

ಪಿಲಿಕುಳದ ಮದ್ಯಪ್ರೇಮಿ ಲಂಗೂರ್ ಸಾವು| ಇದರ ಹಿಂದಿದೆ ರೋಚಕ ಕಹಾನಿ..!

ಮಂಗಳೂರು: ಒಂದು ಕಾಲದಲ್ಲಿ ಮದ್ಯವ್ಯಸನಿಯಾಗಿದ್ದ 21 ವರ್ಷದ ಲಂಗೂರ್​​ ಮಂಗಳೂರಿನ ಪಿಲಿಕುಳ ನೈಸರ್ಗಿಕ ಧಾಮದಲ್ಲಿ ಸಾವನ್ನಪ್ಪಿದೆ. ಮಂಗಳೂರಿನ ಈ ಪಾರ್ಕ್​ಗೆ ಕರೆತರಲಾಗಿದ್ದ ಮೊದಲ ಲಂಗೂರ್ ಇದಾಗಿತ್ತು. ರಾಜು ಎಂಬ ಈ ಲಂಗೂರ್ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಕಿಡ್ನಿ ಹಾಗೂ ಲಿವರ್​​ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಪಡುಬಿದ್ರಿಯ ಬಾರ್​​ ಒಂದರ ಸಮೀಪ ಅನಾರೋಗ್ಯದಿಂದ ಬಳಲುತ್ತಿದ್ದ ಈ ಲಂಗೂರ್ ನ್ನು 2005ರಲ್ಲಿ ರಕ್ಷಿಸಲಾಗಿತ್ತು. ಬಾರ್ ಸಮೀಪವೇ ಈ ಲಂಗೂರ್ ಇರುತ್ತಿದ್ದರಿಂದ ಇದಕ್ಕೆ ಮದ್ಯಪಾನಿಗಳು ಮದ್ಯವನ್ನು ನೀಡುತ್ತಿದ್ದರು. ಇದಾದ […]

ಪಿಲಿಕುಳದ ಮದ್ಯಪ್ರೇಮಿ ಲಂಗೂರ್ ಸಾವು| ಇದರ ಹಿಂದಿದೆ ರೋಚಕ ಕಹಾನಿ..! Read More »

ನಳಿನ್ ಹೇಳಿಕೆಗೆ ಮುನಿಸಿಕೊಂಡ ಯಡಿಯೂರಪ್ಪ| ಬೇಜವಾಬ್ದಾರಿ ಹೇಳಿಕೆಗೆ ಅಸಮಾಧಾನ|

ಬೆಂಗಳೂರು : ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಮತ್ತು ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಮೊರಟಗಿಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಯಾರಿಗೂ ಅಗೌರವ ತರುವ ಹಾಗೆ ಯಾರೂ ಮಾತನಾಡಬಾರದು. ರಾಹುಲ್ ಗಾಂಧಿ ಅವರ ಬಗ್ಗೆ ನನಗೆ ಗೌರವ ಇದೆ. ನಳಿನ್ ಕುಮಾರ್ ರೀತಿ ಯಾರು ಮಾತನಾಡಬಾರದು ಎಂದಿದ್ದಾರೆ. ನಳಿನ್ ಕುಮಾರ್

ನಳಿನ್ ಹೇಳಿಕೆಗೆ ಮುನಿಸಿಕೊಂಡ ಯಡಿಯೂರಪ್ಪ| ಬೇಜವಾಬ್ದಾರಿ ಹೇಳಿಕೆಗೆ ಅಸಮಾಧಾನ| Read More »

ಬೆಂಗಳೂರಿನ ಗುಂಡಿಗಳಿಗೆ ಪೂಜೆ ನೆರವೇರಿಸಿ ಎಎಪಿ ಪ್ರತಿಭಟನೆ| ರಸ್ತೆ ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸಲು ಆಗ್ರಹ

ಬೆಂಗಳೂರು : ರಸ್ತೆಗಳಲ್ಲಿರುವ ಗುಂಡಿಯ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಎತ್ತಿ ಪೂಜೆ. ಅದರ ಸುತ್ತಮುತ್ತ ಸರ್ಕಾರದ ವಿರುದ್ಧ ಬರಹಗಳಿರುವ ಬೋರ್ಡ್‌ ಹಿಡಿದು ನಿಂತಿರುವ ಬಿಳಿ ಟೋಪಿಧಾರಿಗಳು. ಅವರ ಬಾಯಲ್ಲಿ ಭ್ರಷ್ಟಾಚಾರದ ವಿರುದ್ಧ ಆಕ್ರೋಶದ ಘೋಷಣೆಗಳು. ಇದು ಆಮ್‌ ಆದ್ಮಿ ಪಾರ್ಟಿಯು ಬುಧವಾರ ಬೆಂಗಳೂರಿನಾದ್ಯಂತ ಹಮ್ಮಿಕೊಂಡಿದ್ದ ರಸ್ತೆಗುಂಡಿ ಹಬ್ಬ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ. ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಬೆಂಗಳೂರು ನಗರದ ಅಧ್ಯಕ್ಷ ಮೋಹನ್‌ ದಾಸರಿ ನೇತೃತ್ವದಲ್ಲಿ ಬೆಂಗಳೂರಿನ ಎಲ್ಲಾ ವಿಧಾನಸಭಾ

ಬೆಂಗಳೂರಿನ ಗುಂಡಿಗಳಿಗೆ ಪೂಜೆ ನೆರವೇರಿಸಿ ಎಎಪಿ ಪ್ರತಿಭಟನೆ| ರಸ್ತೆ ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸಲು ಆಗ್ರಹ Read More »

ಡ್ರಗ್ಸ್ ದಂಧೆ ಪ್ರಕರಣ| ಆರ್ಯನ್ ಖಾನ್ ಸೇರಿ ಮೂವರ ಜಾಮೀನು ಅರ್ಜಿ ವಜಾ

ಮುಂಬೈ: ಹೈಪ್ರೋಫೈಲ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರುವಂತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು, ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯವು ಆರ್ಯನ್ ಖಾನ್ ಸೇರಿದಂತೆ ಮೂವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಮುಂಬೈನ ಕಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದಂತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ

ಡ್ರಗ್ಸ್ ದಂಧೆ ಪ್ರಕರಣ| ಆರ್ಯನ್ ಖಾನ್ ಸೇರಿ ಮೂವರ ಜಾಮೀನು ಅರ್ಜಿ ವಜಾ Read More »

ಮತ್ತೆ ಮತ್ತೆ ಕಂಪಿಸುತ್ತಿರುವ ಬಸವನಾಡು ವಿಜಯಪುರ| ಇದು ಅಪಾಯದ ಮುನ್ಸೂಚನೆಯೇ?

ವಿಜಯಪುರ : ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಆತಂಕದಿಂದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಸೇರಿ ಹಲವು ಗ್ರಾಮಗಳಲ್ಲಿ ಇಂದು ಬೆಳಗ್ಗೆ 10.30 ರ ಸುಮಾರಿಗೆ ಭೂಕಂಪನದ ಅನುಭವವಾಗಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪನ‌ ಅನುಭವ ಆಗುತ್ತಿರುವ ಕಾರಣ ಜನರಲ್ಲಿ ಆತಂಕ ಮನೆ ಮಾಡಿದ್ದು, ಇಂದು ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮಕ್ಕೆ ನ್ಯಾಶನಲ್ ಜಿಯೋಫಿಜಿಕಲ್

ಮತ್ತೆ ಮತ್ತೆ ಕಂಪಿಸುತ್ತಿರುವ ಬಸವನಾಡು ವಿಜಯಪುರ| ಇದು ಅಪಾಯದ ಮುನ್ಸೂಚನೆಯೇ? Read More »

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ವೈಷ್ಣವಿ ದಯಾನಂದ

ಮಡಿಕೇರಿ: ಗರಿಷ್ಠ ಸಂಖ್ಯೆಯ ಪ್ರಾಣಿಗಳ ಹೆಸರು ಮತ್ತು ಅವುಗಳ ಮರಿಗಳನ್ನು ಹೇಳುವುದರ ಮೂಲಕ ವೈಷ್ಣವಿ.ಕೆ.ಡಿ.ಇಂಡಿಯಾ ಬುಕ್ ಆಫ್ ರೆಕಾರ್ಡ್ ಲ್ಲಿ ಸ್ಥಾನ ಪಡೆದಿದ್ದಾಳೆ ಮಡಿಕೇರಿಯ ವೈಷ್ಣವಿ ದಯಾನಂದ್. ಇವಳು ಕೂಡಕಂಡಿ ಓಂಶ್ರೀ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಮಡಿಕೇರಿಯ ಸಹ ಪ್ರಾಧ್ಯಾಪಕ ಡಾ.ದಯಾನಂದ. ಕೆ.ಸಿ ಯವರ ಪುತ್ರಿ. ಈಕೆ ಮಡಿಕೇರಿ ಸಂತ ಜೋಸೆಫರ ಶಾಲೆಯ ಒಂದನೆ ತರಗತಿಯ ವಿದ್ಯಾರ್ಥಿನಿ.

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ವೈಷ್ಣವಿ ದಯಾನಂದ Read More »

ಎರಡು ಮದುವೆಯಾದ ಕುಮಾರಸ್ವಾಮಿಗೆ ಬ್ಲೂಪಿಲಂ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ – ಬಿಜೆಪಿ ತಿರುಗೇಟು

ಬೆಂಗಳೂರು: ಆರ್ ಎಸ್ಎಸ್ ವಿರುದ್ಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಿರಂತರ ವಾಗ್ದಾಳಿ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ‌ ಪ್ರಧಾನ ಕಾರ್ಯದರ್ಶಿ ಅಶ್ವಥ್​ ನಾರಾಯಣ, ವಕ್ತಾರರಾದ ಗಣೇಶ್ ಕಾರ್ಣಿಕ್, ಚಲವಾದಿ ನಾರಾಯಣ ಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅಶ್ವಥ್​ ನಾರಾಯಣ ಅವರು ಎಚ್​ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸ್ವಯಂ ಸೇವಕ ಸಂಘದ ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ ಎಚ್​ಡಿಕೆ ಕ್ಷಮೆ ಕೇಳಬೇಕು.

ಎರಡು ಮದುವೆಯಾದ ಕುಮಾರಸ್ವಾಮಿಗೆ ಬ್ಲೂಪಿಲಂ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ – ಬಿಜೆಪಿ ತಿರುಗೇಟು Read More »

ವಾಲ್ಮೀಕಿ ಜಯಂತಿ| ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ ಸಿಎಂ|

ಬೆಂಗಳೂರು : ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2020 ಹಾಗೂ 2021 ನೇ ಸಾಲಿನ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ವಾಲ್ಮೀಕಿ ಜಯಂತಿಯಂದು ನೀಡಲಾಗುವಂತ ವಾಲ್ಮೀಕಿ ಪ್ರಶಸ್ತಿಯನ್ನು ಘೋಷಿಸಿದೆ. 2020ನೇ ಸಾಲಿಗೆ ಐದು ಸಾಧಕರು ಹಾಗೂ 2021ನೇ ಸಾಲಿಗೆ ಆರು ಸಾಧಕರು ಸೇರಿದಂತೆ 11 ಸಾಧಕರಿಗೆ ಈ ಬಾರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2020 ನೇ ಸಾಲಿನಲ್ಲಿ ವಾಲ್ಮೀಕಿ

ವಾಲ್ಮೀಕಿ ಜಯಂತಿ| ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ ಸಿಎಂ| Read More »

ಕಿಸ್ ಕೊಡಲಿಲ್ಲವೆಂದು ಗುಂಡಿಟ್ಟು ಕೊಂದ ಮಹಿಳೆ|

ಅಮೆರಿಕಾ: ತನಗೆ ಮುತ್ತು ಕೊಡೆಂದು ಕೇಳಿದಾಗ ಆತ ನಿರಾಕರಿಸಿದ ಎನ್ನುವ ಕಾರಣಕ್ಕೆ 28 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕದ ಇಲಿನೋಯಿಯಲ್ಲಿ ನಡೆದಿದೆ. ಸಧ್ಯ ಆಕೆಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯ ಹೆಸರು ಕ್ಲಾಡಿಯಾ ರೆಸೆಂಡಿಜ಼್‌-ಫ್ಲೋರೆಸ್.ಈಕೆ ತನ್ನಿಬ್ಬರು ಗೆಳೆಯರೊಂದಿಗೆ ನೈಟ್‌ ಔಟ್‌ ನಲ್ಲಿ ಭಾಗಿಯಾಗಿದ್ದಳು. ತಾನು ಆಗ ತಾನೇ ವಾಸಿಸಲು ಬಂದಿದ್ದ ಆಪಾರ್ಟ್ಮೆಂಟ್‌ ನಲ್ಲಿದ್ದ ಜೋಡಿ ಈಕೆಯೊಂದಿಗೆ ಪಾರ್ಟಿ ಮಾಡಿದ್ದಾರೆ. ಈ ಬಳಿಕ ರೆಸೆಂಡಿಜ಼್‌ ತನಗೊಂದು ಮುತ್ತು ಕೊಡು ಎಂದು ಜೇಮ್ಸ್ ಜೋನ್ಸ್‌ ಗೆ ಕೇಳಿಕೊಂಡಿದ್ದಾಳೆ.

ಕಿಸ್ ಕೊಡಲಿಲ್ಲವೆಂದು ಗುಂಡಿಟ್ಟು ಕೊಂದ ಮಹಿಳೆ| Read More »

ಸ್ಕ್ಯಾನಿಂಗ್ ಸೆಂಟರ್ ನ ಶೌಚಗೃಹದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ವಿಕೃತಿ| ಸಾರ್ವಜನಿಕರಿಂದ ಬಿತ್ತು ಧರ್ಮದೇಟು|

ತುಮಕೂರು: ಸ್ಕ್ಯಾನಿಂಗ್ ಸೆಂಟರ್​ವೊಂದರ ಶೌಚಗೃಹದಲ್ಲಿ ಮೊಬೈಲ್​ ಇಟ್ಟು ಮಹಿಳೆಯರಿಗೆ ಗೊತ್ತಾಗದಂತೆ ಅವರ ದೃಶ್ಯ ಸೆರೆ ಹಿಡಿದು ವಿಕೃತಿ ಮೆರೆದ ಕಾಮುಕನಿಗೆ ಧರ್ಮದೇಟು ಬಿದ್ದಿದೆ. ನಗರದ ಗಾಂಧಿನಗರದಲ್ಲಿರುವ ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ಮಹಿಳೆಯರ ವಿಡಿಯೋ ತೆಗೆಯುತ್ತಿದ್ದವನಿಗೆ ಮಂಗಳವಾರ ಸಾರ್ವಜನಿಕರೇ ಥಳಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹರೀಶ್ (35) ಆರೋಪಿ. ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್​ನಲ್ಲಿ ವರ್ಷದಿಂದ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಈತ ಶೌಚಗೃಹದ ಗೋಡೆ ಮೇಲೆ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ಮಹಿಳೆಯೊಬ್ಬರು ಅನುಮಾನದಿಂದ ಮೊಬೈಲ್

ಸ್ಕ್ಯಾನಿಂಗ್ ಸೆಂಟರ್ ನ ಶೌಚಗೃಹದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ವಿಕೃತಿ| ಸಾರ್ವಜನಿಕರಿಂದ ಬಿತ್ತು ಧರ್ಮದೇಟು| Read More »