October 2021

ಶತಕೋಟಿ ದಾಟಿದ ವ್ಯಾಕ್ಸಿನೇಷನ್‌| ಇಂದು ಬೆಳಿಗ್ಗೆ ಮೋದಿ‌ ಮಾತಾಡ್ತಾರೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್-19 ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿ ಈಗ ಪರಿಸ್ಥಿತಿ ಸಹಜತೆಗೆ ಬರುತ್ತಿದೆ. ಜನಜೀವನ, ವ್ಯಾಪಾರ-ವಹಿವಾಟುಗಳು ನಿಧಾನವಾಗಿ ಹಿಂದಿನ ಸ್ಥಿತಿಗೆ ಬರುತ್ತಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಯಾವ ವಿಷಯವನ್ನಿಟ್ಟುಕೊಂಡು ಇಂದು ಮಾತನಾಡಲಿದ್ದಾರೆ ಎಂದು ಕುತೂಹಲ ಕೆರಳಿದೆ. ಚೀನಾದ ನಂತರ 100 ಕೋಟಿ ಕೋವಿಡ್ -19 ಲಸಿಕೆ ಮೈಲಿಗಲ್ಲನ್ನು ತಲುಪಿದ ಎರಡನೇ ರಾಷ್ಟ್ರವಾಗಿ ಭಾರತ ಇತಿಹಾಸ ಬರೆದ ಒಂದು ದಿನ ನಂತರ ಪ್ರಧಾನಿ ದೇಶವಾಸಿಗಳನ್ನುದ್ದೇಶಿಸಿ […]

ಶತಕೋಟಿ ದಾಟಿದ ವ್ಯಾಕ್ಸಿನೇಷನ್‌| ಇಂದು ಬೆಳಿಗ್ಗೆ ಮೋದಿ‌ ಮಾತಾಡ್ತಾರೆ Read More »

ಪುತ್ತೂರು: ಮುಸ್ಲಿಂ ವಿದ್ಯಾರ್ಥಿಗಳಿಗೆ ಥಳಿಸಿದ ಅನ್ಯಕೋಮಿನ ಯುವಕರ ತಂಡ| ಸ್ಥಳದಲ್ಲಿ ಬಿಗುವಿನ ವಾತಾವರಣ|

ಪುತ್ತೂರು: ವಿದ್ಯಾರ್ಥಿಗಳು ಕಾಲೇಜು ಮುಗಿಸಿ‌ ಮನೆಗೆ ಮರಳುತ್ತಿದ್ದ ವೇಳೆ ಅನ್ಯಕೋಮಿನ ಯುವಕರ ತಂಡವೊಂದು ಏಕಾಎಕಿ ದಾಳಿ ನಡೆಸಿ, ವಿದ್ಯಾರ್ಥಿಗಳನ್ನು ಹಲ್ಲೆಗೈದು ಪರಾರಿಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿಗಳಾದ ಸಾಲ್ಮರ ನಿವಾಸಿಗಳಾದ ಇಜಾಝ್ ಮತ್ತು ಝಿಯಾದ್ ಎಂದು ಗುರುತಿಸಲಾಗಿದ್ದು ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕರ ತಂಡ ಪರಾರಿಯಾಗಿದೆ‌ ಎನ್ನಲಾಗಿದೆ. ವಿದ್ಯಾರ್ಥಿಗಳನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿದು

ಪುತ್ತೂರು: ಮುಸ್ಲಿಂ ವಿದ್ಯಾರ್ಥಿಗಳಿಗೆ ಥಳಿಸಿದ ಅನ್ಯಕೋಮಿನ ಯುವಕರ ತಂಡ| ಸ್ಥಳದಲ್ಲಿ ಬಿಗುವಿನ ವಾತಾವರಣ| Read More »

ಅಕ್ಷರ ಸಂತನಿಗೆ ಕೊನೆಗೂ ಒಲಿದ ಪದ್ಮಶ್ರೀ| ನ.8ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ|

ಮಂಗಳೂರು: ಅಕ್ಷರಸಂತ ಎಂದೇ ಖ್ಯಾತಿಯಾಗಿರುವ ಹರೇಕಳ ಹಾಜಬ್ಬರಿಗೆ ಕೊನೆಗೂ ಪದ್ಮಶ್ರೀ ಗೌರವ ಲಭಿಸಿದೆ. ನವೆಂಬರ್ 8ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಹಾಜಬ್ಬರಿಗೆ ಅಧಿಕೃತ ಆಹ್ವಾನ ಬಂದಿದೆ. ಹರೇಕಳ ಹಾಜಬ್ಬರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ 2020ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಾಗಿತ್ತು. ಆದರೆ ಕೊರೊನಾ

ಅಕ್ಷರ ಸಂತನಿಗೆ ಕೊನೆಗೂ ಒಲಿದ ಪದ್ಮಶ್ರೀ| ನ.8ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ| Read More »

ಮತ್ತೆ‌ ಬಂತು ತುಳುನಾಡ ಹೆಮ್ಮೆಯ ಕಂಬಳ| ಯಾವೂರಲ್ಲಿ ಯಾವಾಗ ಗೊತ್ತಾ?

ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಹೆಮ್ಮೆಯ ಕ್ರೀಡೆ ಕಂಬಳ ನಡೆಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸಿದ್ಧತೆ ನಡೆದಿದ್ದು, ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನ.27ರಿಂದ ಮಾರ್ಚ್ 26ರ ವರೆಗೆ ಒಟ್ಟು 17 ಕಂಬಳ ಕೂಟಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿ ಪ್ರಕಟಗೊಂಡಿದ್ದರೂ, ಕೆಲವು ಕಂಬಳಗಳ ದಿನಾಂಕಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ. ಕಂಬಳ ವೇಳಾಪಟ್ಟಿ:ನ.27 ಮೂಡುಬಿದಿರೆ, ಡಿ.11 ಹೊಕ್ಕಾಡಿ, ಡಿ.18 ಮಂಗಳೂರು, ಡಿ.26 ಮೂಲ್ಕಿ, ಜ.1

ಮತ್ತೆ‌ ಬಂತು ತುಳುನಾಡ ಹೆಮ್ಮೆಯ ಕಂಬಳ| ಯಾವೂರಲ್ಲಿ ಯಾವಾಗ ಗೊತ್ತಾ? Read More »

ಪುಟ್ಟ ಬಾಲಕಿಗೆ ಪೋರ್ನ್ ತೋರಿಸಿ ನೋಡುವಂತೆ ಒತ್ತಾಯ| ನಿರಾಕರಿಸಿದ್ದಕ್ಕೆ ಕೊಲೆಗೈದ ಅಪ್ರಾಪ್ತ ಬಾಲಕರು| ಎಲ್ಲಿಗೆ ಬಂತು ಕೇಡುಗಾಲ..!?

ಅಸ್ಸಾಂ: ತಮ್ಮ ಜೊತೆ ಅಶ್ಲೀಲ ವಿಡಿಯೋಗಳನ್ನು ನೋಡಲು ನಿರಾಕರಿಸಿದ ಆರು ವರ್ಷ ಪ್ರಾಯದ ಬಾಲಕಿಯನ್ನು ಮೂರು ಅಪ್ರಾಪ್ತ ಹುಡುಗರು ಕೊಲೆಗೈದ ಘಟನೆ ಅಸ್ಸಾಂ ರಾಜ್ಯದ ನಾಗೂನ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಬಾಲಕರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು 8 ರಿಂದ 11 ವರ್ಷದೊಳಗೆ ಬಾಲಕರು ಎಂದು ಹೇಳಲಾಗಿದೆ. ರಾಜ್ಯದ ನಾಗೂನ್ ಜಿಲ್ಲೆಯ ಬಲಿಬತ್ ಬಳಿಯ ಕಲ್ಲು ಕ್ರಶರ್ ಬಳಿ ಘಟನೆ ನಡೆದಿದೆ. ಮಂಗಳವಾರ ಬಾಲಕಿಯ ಮೃತದೇಹವು ಶೌಚಾಲಯದಲ್ಲಿ ಪತ್ತೆಯಾದಾಗ ಘಟನೆಯು ಬೆಳಕಿಗೆ ಬಂದಿದೆ. ಕುಟುಂಬಿಕರು ಕೂಡಲೇ

ಪುಟ್ಟ ಬಾಲಕಿಗೆ ಪೋರ್ನ್ ತೋರಿಸಿ ನೋಡುವಂತೆ ಒತ್ತಾಯ| ನಿರಾಕರಿಸಿದ್ದಕ್ಕೆ ಕೊಲೆಗೈದ ಅಪ್ರಾಪ್ತ ಬಾಲಕರು| ಎಲ್ಲಿಗೆ ಬಂತು ಕೇಡುಗಾಲ..!? Read More »

ಸುಳ್ಯ: ಚಲಿಸುತ್ತಿರುವಾಗ ಹೊತ್ತಿ‌ ಉರಿದ‌ ಕಾರು| ಚಾಲಕ ಅಪಾಯದಿಂದ ಪಾರು|

ಸುಳ್ಯ: ಇಲ್ಲಿನ ಅಜ್ಜಾವರ ಗ್ರಾಮದ ಮಾವಿನಪಳ್ಳ ಎಂಬಲ್ಲಿ ವ್ಯಾಗನರ್ ಕಾರೊಂದು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ಭುವನ್ ಅತ್ಯಾಡಿ ಎಂಬವರು ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಕಾರಿನೊಳಗೆ ಬೆಂಕಿ ಅವಘಡ ಸಂಭವಿಸಿರುವುದಾಗಿ ತಿಳಿದುಬಂದಿದೆ. ಭುವನ್ ರವರು ರಾತ್ರಿ ತನ್ನ ಮನೆಯಿಂದ ಮಾವಿನಪಳ್ಳ ರಸ್ತೆಯಲ್ಲಿ ಬರುತ್ತಿದ್ದಾಗ ಕಾರಿನ ಬೋನೆಟ್ ನಿಂದ ಹೊಗೆ ಬರಲಾರಂಭಿಸಿತು. ಇದನ್ನು ಗಮನಿಸಿದ ಭುವನ್ ಕಾರನ್ನು ಬದಿಗೆ ನಿಲ್ಲಿಸಿದರು. ಆ ವೇಳೆಗೆ ಕಾರ್ ಏಕಾಏಕಿ ಲಾಕ್ ಆಯಿತು. ಎದುರು ಬೆಂಕಿ ಹೊತ್ತಿಕೊಂಡಿತು. ಭುವನ್

ಸುಳ್ಯ: ಚಲಿಸುತ್ತಿರುವಾಗ ಹೊತ್ತಿ‌ ಉರಿದ‌ ಕಾರು| ಚಾಲಕ ಅಪಾಯದಿಂದ ಪಾರು| Read More »

ಕಿಲ್ಲರ್ ಕೆಎಸ್ಆರ್ ಟಿಸಿ ಗೆ ಬೈಕ್ ಸವಾರ ಬಲಿ| ಭೀಕರ ಅಪಘಾತದಲ್ಲಿ ಛಿದ್ರಗೊಂಡಿತು ದೇಹ|

ಚಿಕ್ಕಮಗಳೂರು: ಬೈಕ್​ಗೆ ಕೆಎಸ್‌ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​ನಲ್ಲಿ ಸಂಭವಿಸಿದೆ. ಬೈಕ್ ಸವಾರ ರಾಜೇಶ್ (24) ಮೇಲೆ ಬಸ್ ಹತ್ತಿದ ಪರಿಣಾಮ ದೇಹ ಛಿದ್ರ ಛಿದ್ರವಾಗಿದೆ. ಬೈಕ್​ನಲ್ಲಿ ಹಿಂಬದಿ ಕುಳಿತಿದ್ದ ದಾಸರಹಳ್ಳಿ ಅಶೋಕ್ ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾರೆ ಕೆಲಸಕ್ಕೆ ಅಂತ ಬೈಕ್ ಸವಾರರು ಬಣಕಲ್​ ನಿಂದ ಮತ್ತಿಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಬಾಳೂರು ಸಮೀಪದ ಚನ್ನಡ್ಲು ಗ್ರಾಮದ ರಾಜೇಶ್ ಮೃತಪಟ್ಟಿದ್ದು, ದಾಸರಹಳ್ಳಿಯ

ಕಿಲ್ಲರ್ ಕೆಎಸ್ಆರ್ ಟಿಸಿ ಗೆ ಬೈಕ್ ಸವಾರ ಬಲಿ| ಭೀಕರ ಅಪಘಾತದಲ್ಲಿ ಛಿದ್ರಗೊಂಡಿತು ದೇಹ| Read More »

ಹರಕೆ‌ ತೀರಿಸಿ‌ ಮರಳುತ್ತಿದ್ದಾಗ ದೇವರ ಪಾದ ಸೇರಿದ ಭಕ್ತ| 600 ಮೆಟ್ಟಿಲು ಹತ್ತಿ ದೇವಿ ದರ್ಶನ ಮಾಡಿದ್ದ|

ದಾವಣಗೆರೆ: ದೇವರ ಹರಕೆ ತೀರಿಸಲೆಂದು ಉಚ್ಚಂಗೆಮ್ಮ ಕ್ಷೇತ್ರದ 600 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದ ಭಕ್ತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ ದೇವಾಲಯದಲ್ಲಿ ನಡೆದಿದೆ. 60 ವರ್ಷದ ಹುಚ್ಚಪ್ಪ ಮೃತ ವ್ಯಕ್ತಿ. ಹುಚ್ಚಪ್ಪ 600 ಮೆಟ್ಟಿಲುಗಳನ್ನು ಹತ್ತಿ ದೇವಿಗೆ ಹರಕೆ ತೀರಿಸಿ ದೇವರ ದರ್ಶನ ಪಡೆದು ವಾಪಸ್ ಆಗುತ್ತಿದ್ದರು. ಈ ವೇಳೆ ಹೃದಯಾಘಾತಕ್ಕೀಡಾಗಿ ಕ್ಷೇತ್ರದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಹುಚ್ಚಪ್ಪ ದಾವಣಗೆರೆ ಮೂಲದವರಾಗಿದ್ದು, ಪತ್ನಿ ಸಮೇತ ಉಚ್ಚಂಗೆಮ್ಮ ದರ್ಶನಕ್ಕೆ ತೆರಳಿದ್ದರು. ದೇವರ

ಹರಕೆ‌ ತೀರಿಸಿ‌ ಮರಳುತ್ತಿದ್ದಾಗ ದೇವರ ಪಾದ ಸೇರಿದ ಭಕ್ತ| 600 ಮೆಟ್ಟಿಲು ಹತ್ತಿ ದೇವಿ ದರ್ಶನ ಮಾಡಿದ್ದ| Read More »

ಲಸಿಕೆ ಅಭಿಯಾನದಲ್ಲಿ ದಾಖಲೆ ನಿರ್ಮಿಸಿದ ಭಾರತ| 9 ತಿಂಗಳಲ್ಲಿ ನೂರು ಕೋಟಿ ಡೋಸೇಜ್ ಪೂರ್ಣ|

ನವದೆಹಲಿ : ಕೋವಿಡ್ ಲಸಿಕೆ ಅಭಿಯಾನದಲ್ಲಿ ಇಂದು ಭಾರತ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ದೇಶದಲ್ಲಿ 100 ಕೋಟಿ ಡೋಸ್ ಪೂರ್ಣಗೊಂಡಿದೆ. ಭಾರತದಲ್ಲಿ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಲಸಿಕೆ ನೀಡಿದ ದೇಶ ಭಾರತವಾಗಿದೆ.ಭಾರತದಲ್ಲಿ ನೀಡಲಾದ ಕೋವಿಡ್-19 ಲಸಿಕೆ ಡೋಸ್ ಗಳ ಸಂಖ್ಯೆ 100 ಕೋಟಿ ಗಡಿ ದಾಟುತ್ತಿದ್ದಂತೆ ಪ್ರಧಾನಿ ಮೋದಿ ಅವರು ಆರ್ ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದರು. ಆರೋಗ್ಯ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆ. ಜೊತೆಗೆ 100

ಲಸಿಕೆ ಅಭಿಯಾನದಲ್ಲಿ ದಾಖಲೆ ನಿರ್ಮಿಸಿದ ಭಾರತ| 9 ತಿಂಗಳಲ್ಲಿ ನೂರು ಕೋಟಿ ಡೋಸೇಜ್ ಪೂರ್ಣ| Read More »

ಅಕ್ರಮ ಮರಳುಗಾರಿಕೆ ತಪಾಸಣೆ| ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಯತ್ನ| ಆರೋಪಿಗಳು ಅರೆಸ್ಟ್

ಮಂಗಳೂರು: ಅಕ್ರಮ ಮರಳುಗಾರಿಕೆಯ ತಪಾಸಣೆಯ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಯತ್ನಿಸಿದ್ದಾರೆ ಎನ್ನಲಾದ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ. ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್, ಆಲ್ಟೋ ಕಾರು ಚಾಲಕ ಮೊಯಿದ್ದೀನ್ ಅಪ್ಸರ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಎರಡು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ವಿವರ: ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಬಂದ ಮಾಹಿತಿಯ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ನಸುಕಿನ ಜಾವ ಅಡ್ಯಾರ್

ಅಕ್ರಮ ಮರಳುಗಾರಿಕೆ ತಪಾಸಣೆ| ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಯತ್ನ| ಆರೋಪಿಗಳು ಅರೆಸ್ಟ್ Read More »