October 2021

ಕಾಶ್ಮೀರದಲ್ಲಿ ಪಾಕ್ ಉಗ್ರರಿಂದ ಶಸ್ತ್ರಾಸ್ತ್ರಗಳ ತರಬೇತಿ| ಸ್ಥಳ ತನಿಖೆಗೆ ತೆರಳಲು ಮುಂದಾದ ಅಮಿತ್ ಶಾ|

ನವದೆಹಲಿ: ಕಾಶ್ಮೀರದಲ್ಲಿ ಪಾಕ್ ಉಗ್ರರು ಶಸ್ತ್ರಾಸ್ತ್ರಗಳ ಬಳಸುವ ಬಗ್ಗೆ ತರಬೇತಿ ಕೊಡುತ್ತಿರುವ ಬಗ್ಗೆ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಈ ಕುರಿತು ವೀಡಿಯೋವನ್ನು ಬಿಡುಗಡೆ ಮಾಡಿರುವ ವಾಹಿನಿ ಈ ಸಾಕ್ಷ್ಯವನ್ನು ಪಾಕ್ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ತೆರಳಲು ಮುಂದಾಗಿದ್ದಾರೆ. ವೀಡಿಯೋದಲ್ಲಿ ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ಮೂಲದ ಉಗ್ರರು ತರಬೇತಿ ನೀಡುತ್ತಿರುವ ಅಂಶ ಒಳಗೊಂಡಿದೆ. ಕಾಶ್ಮೀರದಲ್ಲಿ ಇತ್ತಿಚೆಗೆ ಬಂಧಿಸಲಾಗಿದ್ದ ಉಗ್ರನಿಂದ ವಶ ಪಡೆಸಿಕೊಂಡಿದ್ದ ಮೊಬೈಲ್‌ನಿಂದ […]

ಕಾಶ್ಮೀರದಲ್ಲಿ ಪಾಕ್ ಉಗ್ರರಿಂದ ಶಸ್ತ್ರಾಸ್ತ್ರಗಳ ತರಬೇತಿ| ಸ್ಥಳ ತನಿಖೆಗೆ ತೆರಳಲು ಮುಂದಾದ ಅಮಿತ್ ಶಾ| Read More »

ಮಹಿಳಾ ಕಾಂಗ್ರೇಸ್ ನಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕಟೀಲ್‌ಗೆ ಫಿನಾಯಿಲ್ ರವಾನೆ| ಸ್ಪೀಡ್ ಪೋಸ್ಟ್ ಮೂಲಕ ತಲುಪಲಿದೆ ಫಿನಾಯಿಲ್

ಕೊಪ್ಪಳ: ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನಳೀನ್ ಕುಮಾರ್ ಕಟೀಲ್‌ಗೆ ಅಂಚೆ ಮುಖಾಂತರ ಫಿನಾಯಿಲ್ ತಲುಪಿಸುವಂತೆ, ಇಂದು ಕೊಪ್ಪಳ ನಗರದ ಅಂಚೆ ಕಚೇರಿ ಮುಂಭಾಗದಲ್ಲಿ ಅರ್ಧ ಗಂಟೆ ಪ್ರತಿಭಟನಾರ್ಥ ಮೌನವಾಗಿ ಕುಳಿತು, ಸಂಸದ ನಳೀನ್ ಕುಮಾರ್‌ಗೆ ಫಿನಾಯಲ್ ಕಳಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ,

ಮಹಿಳಾ ಕಾಂಗ್ರೇಸ್ ನಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕಟೀಲ್‌ಗೆ ಫಿನಾಯಿಲ್ ರವಾನೆ| ಸ್ಪೀಡ್ ಪೋಸ್ಟ್ ಮೂಲಕ ತಲುಪಲಿದೆ ಫಿನಾಯಿಲ್ Read More »

100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ – ಸಿದ್ದರಾಮಯ್ಯ ಟೀಕೆ

ಬೆಂಗಳೂರು: 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಸಂಭ್ರಮಾಚರಣೆ? ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. 100 ಕೋಟಿ ಲಸಿಕೆ ವಿತರಿಸಿದ ಹಿನ್ನೆಲೆಯಲ್ಲಿ ಕೇದ್ರ ಸರ್ಕಾರ ಸಂಭ್ರಮಾಚಾರಣೆಗೆ ಮುಂದಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ – ಸಿದ್ದರಾಮಯ್ಯ ಟೀಕೆ Read More »

ಆಸಿಯಾ-ಇಬ್ರಾಹಿಂ ಖಲೀಲ್ ಸಂಸಾರ ಗಲಾಟೆಗೆ ಇತಿಶ್ರೀ ಸಮಯ| ಸುದ್ದಿಗೋಷ್ಟಿಯಲ್ಲಿ ಪತಿಯ ಕುರಿತು ಆಸಿಯಾ ಹೇಳಿದ್ದೇನು?

ಮಂಗಳೂರು: ಅ 22 : ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಹಾಗೂ ಆಸಿಯಾ ಸಂಸಾರ ಗಲಾಟೆ ಕೊನೆಗೂ ಅಂತ್ಯ ಕಾಣುವತ್ತ ಹೊರಟಿದೆ. ಪತಿಯ ಜೊತೆ ಸಂಸಾರ ಮಾಡಲು ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಆಸಿಯಾ ಇದ್ದಕ್ಕಿದಂತೆ ತನ್ನ ಹೋರಾಟದಿಂದ ಹಿಂದೆ ಸರಿಯುವ ನಿರ್ಧಾರ‌ ಮಾಡಿದ್ದಾರೆ. ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸಿಯಾ, ತನ್ನನ್ನು ವಿವಾಹವಾಗಿದ್ದ ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಅವರ ಮನ ಒಲಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಎರಡು ವರ್ಷ ಇದಕ್ಕಾಗಿ

ಆಸಿಯಾ-ಇಬ್ರಾಹಿಂ ಖಲೀಲ್ ಸಂಸಾರ ಗಲಾಟೆಗೆ ಇತಿಶ್ರೀ ಸಮಯ| ಸುದ್ದಿಗೋಷ್ಟಿಯಲ್ಲಿ ಪತಿಯ ಕುರಿತು ಆಸಿಯಾ ಹೇಳಿದ್ದೇನು? Read More »

ಸುಳ್ಯ| ಮಸೀದಿಯೊಳಗೆ ಇತ್ತಂಡಗಳಿಂದ ಹೊಡೆದಾಟ| ಮೂರು ಮಂದಿ ಆಸ್ಪತ್ರೆಗೆ ದಾಖಲು

ಸುಳ್ಯ : ಬೆಳ್ಳಾರೆಯ ಮಸೀದಿಯೊಂದರಲ್ಲಿ ಎರಡು ತಂಡಗಳು ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ‌ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ . ಬೆಳ್ಳಾರೆ ಮಸೀದಿಯಲ್ಲಿ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಫಾರ್ಮ್ ಕೊಡುವ ವಿಷಯದಲ್ಲಿ ತಕರಾರು ಉಂಟಾಗಿರುವುದಾಗಿ ಹೇಳಲಾಗಿದ್ದು, ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟ ನಡೆಸಿಕೊಂಡಿರುವುದಾಗಿ ಹೇಳಲಾಗಿದೆ. ಆಸಿರ್, ಹಾರಿಸ್, ಹಮೀದ್, ಮುನೀರ್, ಹೈದರಾಲಿ ಮತ್ತು ಮಹಮ್ಮದ್ ಅಜರುದ್ದೀನ್, ಜಮಾಲುದ್ದೀನ್ ಕೆ.ಎಸ್., ಅಬ್ದುಲ್ ಜಮಾಲ್ ನಡುವೆ

ಸುಳ್ಯ| ಮಸೀದಿಯೊಳಗೆ ಇತ್ತಂಡಗಳಿಂದ ಹೊಡೆದಾಟ| ಮೂರು ಮಂದಿ ಆಸ್ಪತ್ರೆಗೆ ದಾಖಲು Read More »

ಕೊಲೆಯಾಗಿ‌ ಬದಲಾದ ಆತ್ಮಹತ್ಯೆ |ಗಂಡನ ಪ್ರಾಣಕ್ಕೇ ಕೊಳ್ಳಿ ಇಟ್ಟ ಪತ್ನಿ|ಅಪ್ರಾಪ್ತ ವಯಸ್ಕರಿಬ್ಬರ ಬಂಧನ

ಕುಂದಾಪುರ: ಇಲ್ಲಿನ ಅಂಪಾರು ಗ್ರಾಮದಲ್ಲಿ ಅ.19ರಂದು ಬೆಳಕಿಗೆ ಬಂದ ಆತ್ಮಹತ್ಯೆ ಪ್ರಕರಣವು ಇದೀಗ ಕೊಲೆ ಎಂದು ತನಿಖೆಯಲ್ಲಿ ನಿಜಾಂಶ ಬಯಲಾಗಿದೆ. ಮೃತನ ಪತ್ನಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರಾಗಿರುವ ಕಾರಣ ಇವರನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದೆ. ಅಂಪಾರು ಗ್ರಾಮದ ವಿವೇಕ್ ನಗರ, ಮೋಡುಬಗೆ ನಿವಾಸಿ ನಾಗರಾಜ್ (36) ಕೊಲೆಯಾದವರು. ನಾಗರಾಜ್ ಪತ್ನಿಯಾಗಿದ್ದ ಆರೋಪಿ ಮಮತಾ (34) ಮತ್ತು ಆಕೆಯ ಪರಿಚಯಸ್ಥರು, ಕುಮಾರ್ ಮತ್ತು ದಿನಕರ್ ಅವರನ್ನು ಬಂಧಿಸಲಾಗಿದೆ. ಕೊಲೆಯಲ್ಲಿ ಭಾಗಿಯಾಗಿರುವ ಇಬ್ಬರು ಅಪ್ರಾಪ್ತರನ್ನು

ಕೊಲೆಯಾಗಿ‌ ಬದಲಾದ ಆತ್ಮಹತ್ಯೆ |ಗಂಡನ ಪ್ರಾಣಕ್ಕೇ ಕೊಳ್ಳಿ ಇಟ್ಟ ಪತ್ನಿ|ಅಪ್ರಾಪ್ತ ವಯಸ್ಕರಿಬ್ಬರ ಬಂಧನ Read More »

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಲಾಂಛನ ಅನಾವರಣ|

ಸುಳ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಡಳಿತ ಮಂಡಳಿಯು ನೂತನ ಲಾಂಛನವನ್ನು ಸಿದ್ಧಗೊಳಿಸಿದೆ. ರಜತ ವರ್ಣದ ಏಳು ಹೆಡೆಯ ನಾಗರಾಜ ಮತ್ತು ಷಣ್ಮುಖನನ್ನು ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೋಲುವ ಏಳು ಹೆಡೆ ನಾಗರಾಜನ ನಡುವೆ ಷಣ್ಮುಖ ವಿರಾಜಮಾನನಾಗಿರುವ ರಜತ ವರ್ಣದ ಚಿತ್ರವು ಲಾಂಛನದ ಮದ್ಯ ಭಾಗವನ್ನು ಅಲಂಕರಿಸಿದೆ. ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಆಚಾರ್ಯ ಪುತ್ತೂರುರವರು ತಮ್ಮ ಕೈಚಳಕದಿಂಡ ಲಾಂಛನವನ್ನು ಬಿಡಿಸಿದ್ದು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ದ.ಕ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಲಾಂಛನ ಅನಾವರಣ| Read More »

ಶತಕೋಟಿ ‌ವ್ಯಾಕ್ಸಿನ್ ನಮ್ಮ ಸಾಮರ್ಥ್ಯದ ಪ್ರತಿಬಿಂಬ|ದೀಪಾವಳಿಗೆ ದೇಶೀಯ ಉತ್ಪನ್ನ ಖರೀದಿಸಿ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ನಮ್ಮ ದೇಶ ಕರ್ತವ್ಯವನ್ನು ಪಾಲಿಸಿದ್ದು ಅದರಲ್ಲಿ ಯಶಸ್ಸು ಸಿಕ್ಕಿದೆ. ಅಕ್ಟೋಬರ್ 21ಕ್ಕೆ ದೇಶದಲ್ಲಿ ಶತಕೋಟಿ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲ ಆರೋಗ್ಯ ಸಮುದಾಯದ ಕಾರ್ಯಕರ್ತರು, ವೈದ್ಯರು, ದೇಶದ ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನುದ್ದೇಶಿಸಿ ಹೇಳಿದ್ದಾರೆ. ಇಂದು ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶ 100 ಕೋಟಿ ಲಸಿಕೆ ಗುರಿಯನ್ನು ಸಾಧಿಸಿದ ಸಂತೋಷವನ್ನು ಹಂಚಿಕೊಂಡರು. ಇದು ಎಲ್ಲರ ಸಾಧನೆ, ಹೃದಯಪೂರ್ವಕವಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ.

ಶತಕೋಟಿ ‌ವ್ಯಾಕ್ಸಿನ್ ನಮ್ಮ ಸಾಮರ್ಥ್ಯದ ಪ್ರತಿಬಿಂಬ|ದೀಪಾವಳಿಗೆ ದೇಶೀಯ ಉತ್ಪನ್ನ ಖರೀದಿಸಿ – ಪ್ರಧಾನಿ ನರೇಂದ್ರ ಮೋದಿ Read More »

ಕಾಲುವೆಗೆ ಉರುಳಿದ ಕಾರು| ನಾಲ್ವರು ಸಾವು

ಬಾಗಲಕೋಟೆ : ಘಟಪ್ರಬಾ ಕಾಲುವೆಗೆ ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ.ಹಲಕಿ ಗ್ರಾಮದ ಬಳಿಯ ಘಟಪ್ರಭಾ ಕಾಲುವೆಗೆ ಕಾರು ಪಲ್ಟಿಯಾಗಿ ನಾಲ್ವರು ಮೃತಪಟ್ಟಿದ್ದಾರೆ. ತಡರಾತ್ರಿ ಈ ಭೀಕರ ದುರಂತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಕಾಲುವೆಗೆ ಉರುಳಿದ ಕಾರು| ನಾಲ್ವರು ಸಾವು Read More »

ಮಕ್ಕಳಿಲ್ಲದ ಬಂಜೆ ಎಂಬ‌ ಚುಚ್ಚುಮಾತಿಗೆ ಹತಾಶೆ| 70ರ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತ ಮಹಾತಾಯಿ..!

ಗುಜರಾತ್: ವೃದ್ಧೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯನ್ನು ವಿಶ್ವದ ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಗುಜರಾತ್ ನ ಮೋರಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೀವನ್ ಬೆನ್ ರಬಾರಿ ಎಂಬ ವೃದ್ಧೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅವರ ಪತಿ ಮಾಲ್ಧಾರಿ (75) ಅವರ ಆಸೆಯನ್ನು ಈಡೇರಿಸಿದ್ದಾರೆ. ಅವರು ಐವಿಎಫ್ ಮೂಲಕ ಗರ್ಭಧರಿಸಿದ್ದಾರೆ. ಇನ್ನೊಬ್ಬ ಭಾರತೀಯ ಮಹಿಳೆ ಎರ್ರಮಟ್ಟಿ ಮಂಗಯಮ್ಮ, ಸೆಪ್ಟೆಂಬರ್ 2019 ರಲ್ಲಿ

ಮಕ್ಕಳಿಲ್ಲದ ಬಂಜೆ ಎಂಬ‌ ಚುಚ್ಚುಮಾತಿಗೆ ಹತಾಶೆ| 70ರ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತ ಮಹಾತಾಯಿ..! Read More »