Ad Widget .

ತೊಕ್ಕೊಟ್ಟು:ಮಧ್ಯ ರಾತ್ರಿಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಸೆಕ್ಯುರಿಟಿ ಬೈಕನ್ನೇ ಕಳವಿಗೆ ಯತ್ನಿಸಿದವನಿಗೆ ಧರ್ಮದೇಟು,ಆರೋಪಿ ಪೊಲೀಸ್ ವಶಕ್ಕೆ.

Ad Widget . Ad Widget .

ಉಳ್ಳಾಲ:
ಮಧ್ಯರಾತ್ರಿಯಲ್ಲಿ ತೊಕ್ಕೊಟ್ಟಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರ ಮುಂದೆ ನಿಲ್ಲಿಸಿದ್ದ ಸೆಕ್ಯುರಿಟಿ ಗಾರ್ಡ್ ಓರ್ವರ ಬೈಕನ್ನೇ ಕಳವಿಗೆ ಯತ್ನಿಸಿದವನಿಗೆ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಲಾಗಿದೆ.

Ad Widget . Ad Widget .

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಅಂಗಡಿಪದವು ಶಾಂತಿನಗರ ನಿವಾಸಿ ನೌಫಾಲ್(23) ಬೈಕ್ ಕಳವಿಗೆತ್ನಿಸಿದ ಯುವಕ. ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿರುವ ಮಾರುತಿ ಸೆಂಟರ್ ವಾಣಿಜ್ಯ ಕಟ್ಟಡದ ಮುಂಭಾಗದಲ್ಲಿ ನಿನ್ನೆ ರಾತ್ರಿ ಅದೇ ಕಟ್ಟಡದಲ್ಲಿರುವ ಮುತ್ತೂಟು ಫೈನಾನ್ಸ್ ನ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ಅವರು ತನ್ನ (ಪಲ್ಸರ್ NS 200)ಬೈಕನ್ನ ನಿಲ್ಲಿಸಿದ್ದರು. ವಾಣಿಜ್ಯ ಕಟ್ಟಡದ ಮುಂದೆ ನಿಂತಿದ್ದ ಬೈಕನ್ನ ನೌಫಾಲ್ ಕಳವಿಗೆತ್ನಿಸುತ್ತಿರುವುದನ್ನ ಮೇಲಂತಸ್ಥಿನಲ್ಲಿ ಗಸ್ತಿನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗಮನಿಸಿದ್ದು ಕೂಡಲೇ ಕೆಳಗಡೆ ಓಡಿ ಬಂದಿದ್ದಾರೆ.ಆರೋಪಿ ನೌಫಾಲ್ ನಿಂದ ಬೈಕ್ ಕಳವು ಸಾಧ್ಯವಾಗದೆ ಕೊನೆಗೆ ಬೈಕಿಗೆ ಅಳವಡಿಸಿದ್ದ ದುಬಾರಿ ಎರಡು ಫ್ಯಾಶನ್ ಮಿರರ್ ಗಳನ್ನ ಕದ್ದು ಓಡಲು ಮುಂದಾಗಿದ್ದಾನೆ.ತಕ್ಷಣ ಹತ್ತಿರ ತಲುಪಿದ ಸೆಕ್ಯುರಿಟಿ ಗಾರ್ಡ್ ಬೈಕ್ ಕಳವಿಗೆತ್ನಿಸಿದ ನೌಫಾಲ್ಗೆ ತನ್ನ ಹೆಲ್ಮೆಟಲ್ಲೇ ಎರಡೇಟು ಹೊಡೆದಿದ್ದು,ಸ್ಥಳದಲ್ಲಿ ಜಮಾಯಿಸಿದ ಜನರೂ ನಾಲ್ಕು ಧರ್ಮದೇಟು ನೀಡಿದ್ದಾರೆ.ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಆರೋಪಿ ನೌಫಾಲನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೈಕ್ ಕಳವಿಗೆ ಯತ್ನಿಸಿದ್ದ ನೌಫಾಲ್ ಬಂದಿದ್ದ ಬೈಕ್ ಯಮಹ FZ ಆಗಿದ್ದು ಅದಕ್ಕೆ ಅಳವಡಿಸಿರುವ ನಂಬರ್ ಪ್ಲೇಟ್ ನೋಂದಣಿ ಸಂಖ್ಯೆ ಮಾತ್ರ(KL-14 T.5662)ಹೀರೊ ಮ್ಯಾಸ್ಟ್ರೋ ಕಂಪನಿದ್ದಾಗಿದ್ದು,ರಾಜೇಶ್ ಎಮ್.ಎಂಬವರಿಗೆ ಸೇರಿದ್ದಾಗಿದೆ.ಅಷ್ಟಲ್ಲದೆ ಬೈಕಲ್ಲಿ ಎರಡು ಹೆಲ್ಮೆಟ್ ಗಳಿದ್ದು ದೂರದಲ್ಲಿದ್ದ ಇನ್ನೋರ್ವ ಕಳ್ಳ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ.ತೊಕ್ಕೊಟ್ಟು,ಕಾಪಿಕಾಡು,ಕೊಲ್ಯ ಪರಿಸರದಲ್ಲಿ ಅನೇಕ ಮನೆ ,ಕಮರ್ಷಿಯಲ್ ಕಾಂಪ್ಲೆಕ್ಸ್ ಗಳ ಮುಂಭಾಗದಿಂದ ಬೈಕ್ ಕಳ್ಳತನ ನಡೆದಿದ್ದು ಇದರ ಹಿಂದೆ ನೌಫಾಲ್ ಪಾತ್ರ ಇದೆಯೇ ಎಂದು ಉಳ್ಳಾಲ ಪೊಲೀಸರು ತನಿಖೆ ನಡೆಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *