Ad Widget .

ಸದ್ಯಕ್ಕಿಲ್ಲ ಕರ್ನಾಟಕ-ಕೇರಳ ಅಂತರಾಜ್ಯ ಬಸ್‌ ಸಂಚಾರ

Ad Widget . Ad Widget .

ಮಂಗಳೂರು: ಸದ್ಯಕ್ಕೆ ಕರ್ನಾಟಕ-ಕೇರಳ ಅಂತರಾಜ್ಯ ಬಸ್‌ ಸಂಚಾರ ಪುನರಾರಂಭವಾಗುವುದು ಅನುಮಾನವಾಗಿದ್ದು, ಈ ಕಾರಣ ಒಂದು ವಾರ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

Ad Widget . Ad Widget .

ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ನ.1ರಿಂದ ಬಸ್‌ ಸಂಚಾರ ಪುನರಾರಂಭವಾಗುವು ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಆದರೆ, ಒಂದು ವಾರಗಳ ಕಾಲ ಅಂತರಾಜ್ಯ ಬಸ್‌ ಸಂಚಾರ ಪುನರಾರಂಭವಾಗದು ಎಂದು ದ.ಕ ಜಿಲ್ಲಾಡಳಿತ ಹೇಳಿದೆ.

ಈ ವಿಚಾರವಾಗಿ ಕೇರಳ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ತಿಳಿಸಿದ್ದು, “ಕರ್ನಾಟಕ ಬಸ್‌ಗಳು ರಾಜ್ಯ ಪ್ರವೇಶಿಸುವುದಕ್ಕಾಗಲಿ, ನಮ್ಮ ಬಸ್‌ಗಳನ್ನು ಕರ್ನಾಟಕಕ್ಕೆ ಬಿಡುವುದಕ್ಕಾಗಲಿ ನಮ್ಮದೇನೂ ಅಭ್ಯಂತರವಿಲ್ಲ. ಕರ್ನಾಟಕ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆ ಬಸ್‌ಗಳ ಗಡಿ ದಾಟಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಸರ್ಕಾರ ಅವಕಾಶ ನೀಡಿದ ತಕ್ಷಣವೇ ನಮ್ಮಲ್ಲಿಂದ ಬಸ್‌‌ ಪ್ರಾರಂಭಿಸಲಾಗುವುದು” ಎಂದು ಹೇಳಿದ್ದಾರೆ.

“ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗೆ ಬಾರದೇ ಇದ್ದಲ್ಲಿ ಅಂತರಾಜ್ಯ ಬಸ್‌ ಪುನರಾರಂಭಿಸಲು ಸಾಧ್ಯವಿಲ್ಲ. ಈ ಬಗ್ಗೆ ಇನ್ನೂ ಒಂದು ವಾರ ಕಾದು ಪರಿಸ್ಥಿತಿ ಅವಲೋಕಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ತಿಳಿಸಿದ್ದಾರೆ.

ಕರ್ನಾಟಕ-ಕೇರಳ ಅಂತರಾಜ್ಯ ಬಸ್‌‌ ಸಂಚಾರ ನಿರ್ಬಂಧದ ಮಧ್ಯೆಯೇ ಅ.25ರಿಂದ ಕರ್ನಾಟಕದಲ್ಲಿ ಪ್ರಾಥಮಿಕ ಸೇರಿದಂತೆ ಎಲ್ಲಾ ಶಾಲಾ ಹಾಗೂ ಕಾಲೇಜುಗಳು ಪ್ರಾರಂಭವಾಗಿವೆ.

ದ.ಕ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕಾಸರಗೋಡು ಭಾಗದಿಂದ ಬರುವ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಕಡ್ಡಾಯವಾಗಿ ತರಗತಿಗೆ ಹಾಜರಾಗಬೇಕೆಂದಿಲ್ಲ. ಆನ್‌ಲೈನ್‌‌ ತರಗತಿಗಳಿಗೂ ಹಾಜರಾಗಲು ಅವಕಾಶ ನೀಡಲಾಗಿದೆ. ಆದರೆ, ಒಂದೂವರೆ ವರ್ಷದಿಂದ ಮನೆಯಲ್ಲಿಯೇ ಉಳಿದಿರುವ ವಿದ್ಯಾರ್ಥಿಗಳ ಪೈಕಿ ಅನೇಕ ಮಂದಿ ಈಗ ತರಗತಿಗೆ ಹಾಜರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *