Ad Widget .

ಕೋವಿಡ್ ಗೆ ಕೊಡಲಿ ಏಟು ಕೊಡಲು ಸಿದ್ದವಾಯ್ತು ಟ್ಯಾಬ್ಲೆಟ್| ಭಾರತದಲ್ಲೇ ತಯಾರಾಗಲು ಈ ಮಾತ್ರೆಯ ಬೆಲೆ ಎಷ್ಟು ಗೊತ್ತಾ..?

ನವದೆಹಲಿ: ಕೋವಿಡ್‌-_19ರ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಮಾತ್ರೆ ಭಾರತದಲ್ಲೂ ಉತ್ಪಾದನೆಯಾಗುವ ಸಾಧ್ಯತೆ ಇದೆ. ಅಮೆರಿಕ ಮೂಲದ ಮೆರ್ಕ್ ಆ್ಯಂಡ್ ಕೋ ಅಭಿವೃದ್ಧಿಪಡಿಸಿರುವ ಮೋಲ್ನುಪಿರಾವಿರ್‌ ಗುಳಿಗೆಯನ್ನು ಭಾರತದಲ್ಲೂ ಉತ್ಪಾದಿಸಲು ಅನುಮತಿ ಕೋರಿ ಹೈದ್ರಾಬಾದ್‌ ಮೂಲದ ಆಪ್ಟಿಮಸ್‌ ಫಾರ್ಮಾ, ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.

Ad Widget . Ad Widget .

‘ಭಾರತದಲ್ಲಿ ಗುಳಿಗೆಯ ತುರ್ತು ಬಳಕೆಗೆ ಒಂದೊಮ್ಮೆ ಅನುಮೋದನೆ ದೊರೆತರೆ ಕಂಪನಿಯು ತಿಂಗಳಲ್ಲಿ 8 ಕೋಟಿ ಗುಳಿಗೆಗಳನ್ನು ಉತ್ಪಾದಿಸಲಿದೆ. ಪ್ರತಿ ಗುಳಿಗೆಗೆ ಅಂದಾಜು 30 ರೂ.ದರ ಇರಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

Ad Widget . Ad Widget .

ಒಬ್ಬ ಕೋವಿಡ್‌ ರೋಗಿಯು ಚಿಕಿತ್ಸೆಗಾಗಿ ಇಂಥ 40 ಗುಳಿಗೆಗಳನ್ನು ನುಂಗಬೇಕಾಗುತ್ತದೆ. ಅದಕ್ಕೆ ಒಟ್ಟು ಅಂದಾಜು 1196 ರು. ವೆಚ್ಚ ತಗುಲಬಹುದು ಎಂದು ತಿಳಿಸಿದ್ದಾರೆ.

ಸೌಮ್ಯ ಪ್ರಮಾಣದ ಸೋಂಕು ಇರುವ ರೋಗಿಗಳ ಮೇಲೆ ಗುಳಿಗೆ ಪ್ರಯೋಗಿಸಲು ಆಪ್ಟಿಮಸ್‌ ಫಾರ್ಮಾ ಕಳೆದ ಮೇನಲ್ಲಿ ಭಾರತೀಯ ಔಷಧ ಮಹಾ ನಿಯಂತ್ರಕ ಮಂಡಳಿಯಿಂದ ಅನುಮೋದನೆ ಪಡೆದಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಕಂಪನಿ, ಮೊಲ್ನುಪಿರಾವಿರ್‌ ಅಂತಿಮ ಹಂತದ ಪರೀಕ್ಷೆ ಮುಕ್ತಾಯವಾಗಿದ್ದು ಗುಳಿಗೆ ಸೇವಿಸಿದ 5ನೇ ದಿನದಲ್ಲಿ ಶೇ.78ರಷ್ಟುರೋಗಿಗಳ ವರದಿ ಕೋವಿಡ್‌ ನೆಗೆಟಿವ್‌ ಬಂದಿದೆ.

Leave a Comment

Your email address will not be published. Required fields are marked *