Ad Widget .

ಉಪನ್ಯಾಸಕರ ಕೊಠಡಿಯಲ್ಲಿ ಆತ್ಮಹತ್ಯೆಗೈದ ಪ್ರಾಂಶುಪಾಲ

Ad Widget . Ad Widget .

ಛತ್ತೀಸ್ ಗಡ: ಉಪನ್ಯಾಸಕರ ಕೊಠಡಿಯಲ್ಲಿ ಪ್ರಾಂಶುಪಾಲ ನೇಣಿಗೆ ಶರಣಾದ ಆಘಾತಕಾರಿ ಘಟನೆ ಚತ್ತೀಸಗಢದ ಸರ್ಕಾರಿ ಕಾಲೇಜೊಂದರಲ್ಲಿ ನಡೆದಿದೆ.

Ad Widget . Ad Widget .

ಅಹಿವಾರದ ಸರ್ಕಾರಿ ನಾಗರಿಕ ಕಲ್ಯಾಣ ಕಾಲೇಜಿನ ಪ್ರಾಂಶುಪಾಲರಾದ ಬಿ.ಪಿ. ನಾಯಕ್​(60) ಉಪನ್ಯಾಸಕರ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ದುರ್ಗ್​ ಹೆಚ್ಚುವರಿ ಎಸ್​ಪಿ ಅನಂತ್​ ಕುಮಾರ್ ಸಾಹು ಹೇಳಿದ್ದಾರೆ.

ಸಿಬ್ಬಂದಿ ನೀಡಿರುವ ಮಾಹಿತಿಯ ಪ್ರಕಾರ, ನಾಯಕ್​ ಬೆಳಗ್ಗೆ 9:30ರ ಸುಮಾರಿಗೆ ಕಾಲೇಜಿಗೆ ಆಗಮಿಸಿದ್ದರು. ಸ್ವಲ್ಪ ಹೊತ್ತು ಬಿಟ್ಟು ವಾಚ್​ ಮನ್​ ಗಮನಿಸಿದ ವೇಳೆ ಪ್ರಾಂಶುಪಾಲ ನಾಯಕ್​​ ಉಪನ್ಯಾಸಕರ ಕೊಠಡಿಯ ಫ್ಯಾನ್​ಗೆ ನೇಣು ಹಾಕಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಕೊಠಡಿಯ ಬಾಗಿಲನ್ನು ಒಡೆದು ಒಳನುಗ್ಗಿದ್ದಾರೆ. ಮೃತದೇಹದ ಸಮೀಪ ಪೊಲೀಸರಿಗೆ ಸೂಸೈಡ್​ ನೋಟ್​​ ಪತ್ತೆಯಾಗಿದ್ದು, ಇದರಲ್ಲಿ ಮೃತ ಪ್ರಾಂಶುಪಾಲ ಮೂವರ ಹೆಸರನ್ನು ನಮೂದಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *