Ad Widget .

ಬೆಳ್ಳಿಪರದೆಯಲ್ಲಿ ‘ಭಜರಂಗಿ 2’ ಅಬ್ಬರ ಶುರು| ಗ್ರಾಂಡ್ ಎಂಟ್ರಿ ನೀಡಿದ ಶಿವಣ್ಣ|

Ad Widget . Ad Widget .

ಬೆಂಗಳೂರು: ಒಂದೂವರೆ ವರ್ಷದ ನಂತರ ಬೆಳ್ಳಿತೆರೆಗೆ ಶಿವಣ್ಣ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಥಿಯೇಟರ್ ಗಳಲ್ಲಿ ‘ಭಜರಂಗಿ 2’ ಅಬ್ಬರ ಜೋರಾಗಿದೆ. ಥಿಯೇಟರ್ ಗಳ ಎದುರು ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ.

Ad Widget . Ad Widget .

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ‘ಭಜರಂಗಿ-2’ ಪ್ರದರ್ಶನ ಆರಂಭವಾಗಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.
ಥಿಯೇಟರ್ ಗಳ ಮುಂದೆ ಹಬ್ಬದ ವಾತಾವರಣ ಕಂಡು ಬಂದಿದ್ದು, ದೀಪಾವಳಿಗೆ ಮೊದಲು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ರಾಜ್ಯದ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಭಜರಂಗಿ 2’ ತೆರೆಕಂಡಿದೆ. ಕಲಾತಂಡಗಳೊಂದಿಗೆ ಅಭಿಮಾನಿಗಳು ಚಿತ್ರಮಂದಿರದ ಎದುರು ಸಂಭ್ರಮಿಸಿದ್ದಾರೆ. ಸಿದ್ದೇಶ್ವರ, ಶ್ರೀನಿವಾಸ ಮೊದಲಾದ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಶೋ ನೋಡಲು ಮಹಿಳಾ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

Leave a Comment

Your email address will not be published. Required fields are marked *