ನವದೆಹಲಿ: ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಸ್ವಲ್ಪ ನಿರಾಳರಾಗಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಡುಗೆ ಎಣ್ಣೆ ಅದರ ಲೀಟರ್ ಗೆ 20 ರೂ. ನಷ್ಟು ಕಡಿಮೆಯಾಗಿದೆ. ಇನ್ನು 5 ರೂಪಾಯಿಯಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಕೊರೋನಾ ನಂತರದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಅಡುಗೆ ಎಣ್ಣೆ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದ ದರ ಇಳಿಕೆಯಾಗಿದೆ.
ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಇಳಿಕೆ ಮಾಡಲಾಗಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಲೀಟರ್ ಅಡುಗೆ ಎಣ್ಣೆ ದರ 20 ರೂಪಾಯಿವರೆಗೂ ಇಳಿಕೆಯಾಗಿದೆ. ಇನ್ನು 5 ರೂಪಾಯಿ ಕಡಿಮೆಯಾಗಬಹುದು. ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್, ಸೋಯಾ ಎಣ್ಣೆ ದರದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ.