Ad Widget .

ಪುತ್ತೂರು: ಕಾಮದಾಸೆಯಿಂದ ಮೊಮ್ಮಗಳ ವಯಸ್ಸಿನ ಬಾಲಕಿ ಕೈಗೆ ಮಗುವಿತ್ತ ಆರ್ ಎಸ್ಎಸ್ ಮುಖಂಡ..!? ಪೊಲೀಸ್ ಕಣ್ತಪ್ಪಿಸಿ ನಾರಾಯಣ ರೈ ಕೋರ್ಟ್ ಗೆ ಶರಣಾಗಿದ್ಹೇಗೆ? ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದ ಆರೋಪಿ|

Ad Widget . Ad Widget .

ಮಂಗಳೂರು: ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಪುತ್ತೂರು‌ ತಾಲೂಕಿನ ಬಡಗನ್ನೂರು ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಸಂಘಪರಿವಾರದ ಮುಖಂಡ, ಸುಳ್ಯಪದವು ಪಡವನ್ನೂರು ಗ್ರಾಮದ ಕುದ್ಕಾಡಿ ನಾರಾಯಣ ರೈ ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.

Ad Widget . Ad Widget .

ಆರೋಪಿ ನಾರಾಯಣ ರೈ ತನ್ನ ಮನೆಗೆ ಕೆಲಸಕ್ಕೆ ಬರುತ್ತಿದ್ದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ತನ್ನ ರಾಜಕೀಯ ಪ್ರಭಾವ ಬಳಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಈ ನಡುವೆ ಸಂತ್ರಸ್ತೆ ಸೆ.5ರಂದು ಮಗುವಿಗೆ ಜನ್ಮ ನೀಡಿದ್ದಳು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಲಕಿಯ ಕುಟುಂಬದವರು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಅ.27ರ ಬುಧವಾರ ನಾರಾಯಣ ರೈ ವಕೀಲ ಮಹೇಶ್ ಕಜೆ ಜತೆ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣರಾಗಿದ್ದಾನೆ. ಸೆ.23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164ರಡಿ ಹೇಳಿಕೆ ನೀಡಿದ್ದು, ಅದರಲ್ಲಿ ಕುದ್ಕಾಡಿ ನಾರಾಯಣ ರೈ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಳು. ಆದರೆ ಆರೋಪಿ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದನೋ ಅಥವಾ ಪೊಲೀಸರೇ ಆರೋಪಿಯನ್ನು ಬಂಧಿಸದೇ ರಕ್ಷಿಸಿದರೋ, ಆರೋಪಿ ಪೊಲೀಸರಿಗೆ ಸಿಗದೇ ಕೋರ್ಟ್ ನಲ್ಲಿ ವಕೀಲರ ಮುಖಾಂತರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಆರೋಪಿ ನ್ಯಾಯಾಲಯದ ಎದುರು ಶರಣಾಗಿದ್ದಾನೆ. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಳಪಡಿಸುತ್ತಿದ್ದಂತೆ ನಾರಾಯಣ ರೈ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ!. ನಂತರ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ‌ ಎಂಬ ಗುಮಾನಿ ಹಬ್ಬುತ್ತಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಆರೋಪಿಯ ಬಂಧನಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿತ್ತು. ದಲಿತ ಮುಖಂಡರು ಪತ್ರಿಕಾಗೋಷ್ಠಿ ಕರೆದು ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿತ್ತು.
ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರಾದ ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ ರಘು ಕೆ ಎಕ್ಕಾರು, ಸರೋಜಿನಿ ಬಂಟ್ವಾಳ, ಯುಕೆ ಗಿರೀಶ್ ಕುಮಾರ್, ಆನಂದ್ ಬೆಳ್ಳಾರೆ, ಸುಧಾಕರ್ , ಕಮಲಾಕ್ಷ ಬಜಾಲ್ ಮತ್ತು ಗಣೇಶ್ ಸುದ್ದಿಗೋಷ್ಠಿ ನಡೆಸಿ‌ ಒತ್ತಾಯಿಸಿದ್ದರು. ಅಪ್ರಾಪ್ತ ವಯಸ್ಸಿನ ಬಾಲಕಿಯ ಕುಟುಂಬ ಅಲ್ಲಿನ ಭೂ ಮಾಲಕ, ಆರ್ ಎಸ್ ಎಸ್ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಾಗೂ ಈಶ್ವರಮಂಗಲದ ಪ್ರೌಢಶಾಲೆಯೊಂದರ ಆಡಳಿತ ಮಂಡಳಿಯ ಸಂಚಾಲಕ ನಾರಾಯಣ ರೈ ಮನೆಗೆ ತೋಟದ ಕೆಲಸಕ್ಕೆ ಹೋಗುತ್ತಿದ್ದು, ಬಾಲಕಿಯ ಮನೆಯವರ ಅಸಹಾಯಕತೆಯನ್ನೇ ಉಪಯೋಗಿಸಿಕೊಂಡು ಆಕೆಯನ್ನು ಅತ್ಯಾಚಾರವೆಸಗಿ ಆಕೆ ಮಗುವಿಗೆ ಜನನ ನೀಡುವುದಕ್ಕೆ ಕಾರಣವಾಗಿದ್ದಾನೆ ಎಂದು ಗೋಷ್ಠಿಯಲ್ಲಿ ಆರೋಪಿಸಿದ್ದರು.

ದೂರುದಾರರು ದೂರು ನೀಡುವ ಸಂದರ್ಭದಲ್ಲಿ ನಾರಾಯಣ ರೈ ಹೆಸರನ್ನು ನಮೂದಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಸಮಿತಿಯು ಹೇಳಿತ್ತು. ಎಫ್ ಐಆರ್ ನಲ್ಲಿ ಪೊಲೀಸರು, ರೈಯನ್ನು ರಕ್ಷಿಸುವ ನಿರ್ದಿಷ್ಟ ಉದ್ದೇಶದಿಂದ ಆರೋಪಿಗಳ ಹೆಸರನ್ನು ಪ್ರಮೋದ್ ಎಂದು ಉಲ್ಲೇಖಿಸಿದ್ದು, ವರಸೆಯಲ್ಲಿ ಬಾಲಕಿಗೆ ಅಣ್ಣನಾಗಬೇಕಾದವನನ್ನೇ ಬಂಧಿಸಲಾಗಿದೆ ಎಂದು ಸಮಿತಿ ಆರೋಪಿಸಿತ್ತು.‌

ರೈ ಅವರನ್ನು ತಕ್ಷಣ ಬಂಧಿಸಬೇಕು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪುತ್ತೂರು ಗ್ರಾಮಾಂತರ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಆರೋಪಿ ಮತ್ತು ನೊಂದ ಬಾಲಕಿಯ ಡಿಎನ್ ಎ ಪರೀಕ್ಷೆ ನಡೆಸುವಂತೆ ಸಂಘಟನೆ ಆಗ್ರಹಿಸಿತ್ತು. ಈ ಬೇಡಿಕೆಗಳನ್ನು ಈಡೇರಿಸಲು ವಿಳಂಬವಾದರೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಸಂಪ್ಯದಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ವ್ಯವಸ್ಥೆ ಮಾಡುತ್ತದೆ ಎಂದು ನಾಯಕರು ಎಚ್ಚರಿಸಿದ್ದರು.

ಇತ್ತ ಕೂಲಿ ಕಾರ್ಮಿಕರಾಗಿರುವ ಬಾಲಕಿಯ ಮನೆಯವರು ಹಸುಗೂಸು ಕೈಗಿತ್ತ ನಾರಾಯಣ ರೈಯನ್ನು ಏನೂ ಮಾಡಲಾಗದೇ ಒದ್ದಾಟ ನಡೆಸುತ್ತಿದ್ದಾರೆ. ಅನ್ಯ ಧರ್ಮೀಯರ ವಿರುದ್ದ ಹಲವು ಹೋರಾಟ‌ ನಡೆಸುವ ಸಂಘ ಪರಿವಾರದ ಧರ್ಮರಕ್ಷಕರು ಸ್ವಧರ್ಮದಲ್ಲಿ ಅನ್ಯಾಯವಾದಾಗ ಯಾಕೆ ಧ್ವನಿ ಎತ್ತಿ ಚೀರಾಟ ನಡೆಸುವುದಿಲ್ಲ‌ ಎಂದು ‌ದಸಂಸ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನೇ ಆದರೂ ಅಮಾಯಕ ಬಾಲಕಿಯ ಬಾಳಲ್ಲಿ ಆಟವಾಡಿದ ದುರುಳರಿಗೆ ಶಿಕ್ಷೆಯಾಗಬೇಕಿದ್ದು, ಆಕೆಯ ಬಾಳು ಹಾಳಾಗದಂತೆ‌ ಕಾಪಾಡುವುದು ಘನತೆವೆತ್ತ ನ್ಯಾಯಾಲಯದ ಕೆಲಸ. ಈ ಆಶಾಭಾವನೆಯೇ ಆ ಸಂತ್ರಸ್ತ ಕುಟುಂಬವನ್ನು ಕಾಯಬೇಕಿದೆ.

Leave a Comment

Your email address will not be published. Required fields are marked *