Ad Widget .

ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್|“ಚಿಟ್ಟೆ ದೂರ ಹಾರಿದೆ….!!”

Ad Widget . Ad Widget . Ad Widget . Ad Widget .

ಫ್ಲೋರಿಡಾ: ಮಾಡೆಲ್ ಒಬ್ಬಳು ತನ್ನ ತಂದೆಯ ಶವದ ಮುಂದೆಯೇ ಫೋಟೋಶೂಟ್ ಮಾಡಿಸಿಕೊಂಡು ಭಾರೀ ಚರ್ಚೆಗೆ ಗ್ರಾಸವಾದ ಘಟನೆ ಫ್ಲೋರಿಡಾದಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಆಕೆಯನ್ನು ಮಾಡೆಲ್ ಅನ್ನು ಜಯೆ ರಿವೇರಾ(20) ಎಂದು ಗುರುತಿಸಲಾಗಿದ್ದು, ಈಕೆ ಫ್ಲೋರಿಡಾದ ಮೈಮಿ ನಗರದ ಸಾಮಾಜಿಕ ಜಾಲತಾಣದ ಸ್ಟಾರ್ ಆಗಿದ್ದು, ಇದೀಗ ಈಕೆಯ ಫೋಟೋಶೂಟ್ ಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇನ್‌ಸ್ಟಾ ಖಾತೆಯಲ್ಲಿ ರಿವೇರಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾಳೆ. ಈಕೆ ತನ್ನ ತಂದೆಯ ಶವದ ಮುಂದೆ ನಿಂತು ಫೋಟೋಶೂಟ್ ಮಾಡಿಸಿದ್ದಾಳೆ. ಅಲ್ಲದೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡು, ‘ಚಿಟ್ಟೆ ದೂರ ಹಾರಿದೆ. ನೀವು ನನ್ನ ಬೆಸ್ಟ್ ಫ್ರೆಂಡ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಚೆನ್ನಾಗಿಯೇ ಬದುಕಿದ್ರಿ’ ಎಂದು ಬರೆದುಕೊಂಡಿದ್ದಾಳೆ. ಮತ್ತು #DadLess ಎಂದು ಹ್ಯಾಶ್‍ಟ್ಯಾಗ್ ಕೂಡ ನೀಡಿದ್ದಾಳೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಆಕೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.

ರಿವೇರಾ ತನ್ನ ತಂದೆಯ ಮೃತದೇಹದ ಮುಂದೆ ನಿಂತು ಸಖತ್ ಸ್ಟೈಲಿಶ್ ಆಗಿ ನಗುತ್ತಾ, ವಿಧ ವಿಧವಾಗಿ ಫೋಟೋಕ್ಕೆ ಪೋಸ್ ನೀಡಿದ್ದಾಳೆ. ಇದು ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ. 20 ವರ್ಷದ ಈಕೆಗೆ 3 ಲಕ್ಷಕ್ಕೂ ಅಧಿಕ ಟಿಕ್ ಟಾಕ್ ಫಾಲೋವರ್ಸ್ ಇದ್ದಾರೆ.

ತಂದೆಗೆ ಗೌರವ ಕೊಡಿ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ನೀವು ಈ ಫೋಟೋಗಳನ್ನು ಕುಡಲೇ ಡಿಲೀಟ್ ಮಾಡಿ ಕ್ಷಮೆ ಕೇಳಿ, ಇದೊಂದು ಕೆಟ್ಟ ರೀತಿಯ ನಡವಳಿಕೆ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Leave a Comment

Your email address will not be published. Required fields are marked *