Ad Widget .

ಮಂಗಳೂರಿನಲ್ಲಿ ನಿಲ್ಲದ ಲವ್ ಜಿಹಾದ್| ಯುವತಿ ಪರಿಚಯ ಲಾಡ್ಜ್ ಮಂಚದ ತನಕ !! ಮುಸ್ಲಿಂ ಯುವಕ ಅರೆಸ್ಟ್

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳೂರು: ಮೊಬೈಲ್‌ ಅಂಗಡಿಯೊಂದರ ಸಿಬ್ಬಂದಿನೋರ್ವ ಮೊಬೈಲ್‌ ಖರೀದಿ ಮಾಡಲು ಬಂದ ಯುವತಿಯ ಪರಿಚಯ ಬೆಳೆಸಿಕೊಂಡು ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಸುರತ್ಕಲ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

Ad Widget . Ad Widget . Ad Widget .

ಕಿನ್ನಿಗೋಳಿಯ ಮುನ್ನ ಯಾನೆ ಇಬ್ರಾಹಿಂ ಬಂಧಿತ ಆರೋಪಿ. ಈತ ಬೈಕಂಪಾಡಿಯ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಮೊಬೈ‌ಲ್‌ ಅಂಗಡಿಗೆ ಮೊಬೈಲ್ ಖರೀದಿಸಲು ಯುವತಿಯೊಬ್ಬಳು ಹೋಗಿದ್ದು, ಈ ವೇಳೆ ಯುವಕ ಯುವತಿಯ ಪರಿಚಯ ಬೆಳೆಸಿಕೊಂಡಿದ್ದ. ಬಳಿಕ ಯುವಕ ತನ್ನ ನಿಜವಾದ ಹೆಸರನ್ನು ಮರೆಮಾಚಿ ಹಿಂದೂ ಎಂದು ತಿಳಿಸಿ ಪ್ರೀತಿಯ ನಾಟಕವಾಡಿದ್ದಾನೆ. ಆತನ ಪ್ರೀತಿಗೆ ಮನಸೋತು ಈಕೆ ಒಪ್ಪಿಕೊಂಡಿದ್ದಾಳೆ. ಬಳಿಕ ಇವರ ಪ್ರೀತಿ ದಿನದಿಂದ ದಿನಕ್ಕೆ ಬೆಳೆಯುತ್ತ ಹೋಗಿದೆ. ಮೊಬೈಲ್ ಚಾಟಿಂಗ್, ಕಾಲ್ ಹೀಗೆ ಪ್ರತಿಯೊಂದು ರೀತಿಯಲ್ಲೂ ಬೆಳೆದಿದೆ ಎನ್ನಲಾಗಿದೆ.

ಆದರೆ ಯುವಕ ಆಕೆಯನ್ನು ಕಳೆದ ಆಗಸ್ಟ್‌ ತಿಂಗಳಿನಲ್ಲಿ ಲಾಡ್ಜ್‌‌‌‌‌‌ವೊಂದಕ್ಕೆ ಕರೆದಿದ್ದು ಅಲ್ಲಿ ಅತ್ಯಾಚಾರ ವೆಸಗಿದ್ದಾನೆ. ಬಳಿಕ ಆಕೆಯ ಫೋಟೋ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಈ ವೇಳೆ ಅಕೆಗೆ ಆತನ ನಿಜಬಣ್ಣ ಗೊತ್ತಾಗಿದ್ದು, ಈ ಬಗ್ಗೆ ಆತನೊಂದಿಗೆ ವಿಚಾರಿಸಿದ್ದಾಳೆ. ಇದಕ್ಕೆ ಯಾರಿಗೂ ಈ ವಿಷಯ ಹೇಳದಂತೆ ಕೊಲೆ ಬೆದರಿಕೆಯೊಡ್ಡಿದ್ದಾನೆ. ಬಳಿಕ ಯುವತಿ ಪೊಲೀಸ್ ದೂರು ನೀಡಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *