ಸುಬ್ರಹ್ಮಣ್ಯ: ಸುಬ್ರಮಣ್ಯ-ಮಂಗಳೂರು ರೈಲ್ವೆಯ ಸುಬ್ರಹ್ಮಣ್ಯ ಸಮೀಪ ಸೋಮವಾರ ಹಳಿ ಬಿರುಕು ಬಿಟ್ಟಿದ್ದು, ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದೆ ಘಟನೆ ನಡೆದಿದೆ.
ಮುಂಜಾನೆ ಸಂಚರಿಸುವ ಬೆಂಗಳೂರು-ಕಾರವಾರ ರೈಲು ನೆಟ್ಟಣದಿಂದ ಮುಂದಕ್ಕೆ ಎಡಮಂಗಲ ಸಮೀಪ ತಲುಪಿದಾಗ ಹಳಿ ಬಿರುಕು ಬಿಟ್ಟಿರುವುದು ರೈಲಿನ ಒಂದು ಭೋಗಿ ಚಲಿಸಿದ ಬಳಿಕ ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಯಂತ್ರಿಸಿ ನಿಲುಗಡೆ ಮಾಡಿ ಘಟನೆಯನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಆ ಬಳಿಕ ಕಾರ್ಯಾಚರಣೆ ನಡೆಸಿ ದುರಸ್ತಿ ನಡೆಸಿ ಸಂಚರಿಸಲು ಅವಕಾಶ ನೀಡಲಾಯಿತು. ಚಾಲಕನ ಸಮಯ ಪ್ರಜ್ಞೆ ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ
ಸುಬ್ರಹ್ಮಣ್ಯ: ತಪ್ಪಿದ ರೈಲು ದುರಂತ – ಅರ್ಲಟಾಗಿದ್ದ ಚಾಲಕನಿಗೆ ವ್ಯಾಪಕ ಪ್ರಶಂಸೆ
