Ad Widget .

ನೀವು ಸಾಲ ಮಾಡಿ ಕಳ್ಳತನ‌ ಮಾಡಿ; ಆದ್ರೆ ಮೂಲ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ: ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್​​ ತರಾಟೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು: ದಾಸರಹಳ್ಳಿ ವಿಭಾಗದಲ್ಲಿ ರಸ್ತೆ ದುಸ್ಥಿತಿ ಹಿನ್ನೆಲೆ, ಇಲ್ಲಿ ನಿಜಕ್ಕೂ ರಸ್ತೆಗಳು ಅಸ್ತಿತ್ವದಲ್ಲಿವೆಯೇ ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಮಳೆ‌ ಮುಗಿದ ನಂತರ ರಸ್ತೆ ಕಾಮಗಾರಿ ನಡೆಸಲಾಗುವುದು. ಅನುದಾನ ಲಭ್ಯವಾದರೆ ಶೀಘ್ರ ಕಾಮಗಾರಿ ನಡೆಸುವುದು ಎಂದು ಹೈಕೋರ್ಟ್​​ಗೆ ಬಿಬಿಎಂಪಿ ಪರ ವಕೀಲ‌ ವಿ. ಶ್ರೀನಿಧಿ ಹೇಳಿಕೆ ನೀಡಿದ್ದಾರೆ. ನೀವು ಸಾಲ ಮಾಡಿ, ಕಳ್ಳತನ‌ ಮಾಡಿ. ಆದರೆ, ಮೂಲಭೂತ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ. ಮಳೆಯ‌ ನಂತರ ಬೆಂಗಳೂರಿನ ರಸ್ತೆಗಳು ಇನ್ನೂ ಹಾಳಾಗಿವೆ ಎಂದು ಸಿಜೆ ರಿತು ರಾಜ್ ಅವಸ್ತಿ ನೇತೃತ್ವದ ಪೀಠ‌ ಅಸಮಾಧಾನ ಹೊರಹಾಕಿದೆ.

Ad Widget . Ad Widget . Ad Widget .

ಈ ಸಂಬಂಧ ಜನವರಿ ತಿಂಗಳೊಳಗೆ ಕಾಮಗಾರಿ ಪ್ರಗತಿಯ ವರದಿ ನೀಡಿ ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ಮಾಡಿದೆ. ಈ ಪ್ರಕರಣ ಬಗ್ಗೆ ಅಶ್ವತ್ಥ್​​ ನಾರಾಯಣ ಚೌಧರಿ ಪಿಐಎಲ್ ಸಲ್ಲಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ.

ಚರ್ಚ್​ಗಳ ಸರ್ವೆ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್
ರಾಜ್ಯದಲ್ಲಿ ಚರ್ಚ್​ಗಳ ಸರ್ವೆಗೆ ಸರ್ಕಾರ ನಿರ್ಧಾರ ಹಿನ್ನೆಲೆ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್ ದಾಖಲಾಗಿದೆ. ಪಿಯುಸಿಎಲ್ ಸಂಸ್ಥೆಯಿಂದ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರ ಕೇವಲ ಚರ್ಚ್​ಗಳ ಸರ್ವೆ ನಡೆಸುತ್ತಿದೆ. ಕ್ರೈಸ್ತರ ವಿರುದ್ಧ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ.

ಸರ್ಕಾರ ಕೇವಲ ಅಂಕಿ‌‌ಅಂಶ ಸಂಗ್ರಹಿಸುತ್ತಿದೆ. ಇದು ಅಲ್ಪಸಂಖ್ಯಾತರ ಅಭಿವೃದ್ಧಿಗೂ ಇರಬಹುದು. ಸರ್ವೆಯಿಂದ ಅಲ್ಪಸಂಖ್ಯಾತರ ಯಾವ ಹಕ್ಕು ಉಲ್ಲಂಘನೆಯಾಗಿದೆ‌ ಎಂದು ಅರ್ಜಿದಾರರಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ಶಾಸಕರೊಬ್ಬರ ಮನವಿಯಂತೆ ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆ. ಮತಾಂತರ ಕಾರಣ ನೀಡಿ ಚರ್ಚ್​ಗಳ ಸರ್ವೆ ನಡೆಸಲಾಗುತ್ತಿದೆ. ಖಾಸಗಿತನದ‌ ಹಕ್ಕು ಉಲ್ಲಂಘನೆಯಾಗಿದೆ ಎಂದು ವಾದ ಮಾಡಲಾಗಿದೆ. ಚರ್ಚ್​ಗಳ ಸರ್ವೆ ಆದೇಶಕ್ಕೆ ತಡೆ ನೀಡಲು ಮನವಿ ಮಾಡಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಚರ್ಚ್​ಗಳ ಸರ್ವೆ ಆದೇಶಕ್ಕೆ ಸದ್ಯಕ್ಕೆ ತಡೆ ಇಲ್ಲ. ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ 3 ವಾರ ಕಾಲಾವಕಾಶ ನೀಡಿದೆ.

Leave a Comment

Your email address will not be published. Required fields are marked *