Ad Widget .

ಮಂಗಳೂರು: `ರಸ್ತೆ ಅಭಿವೃದ್ಧಿ ಕಾಮಗಾರಿ’ ಡಿ. 23ರ ವರೆಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ

Ad Widget . Ad Widget .

ಮಂಗಳೂರು: ನಗರದ ಶರವು ಮಹಾಗಣಪತಿ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಪ್ರಯುಕ್ತ ಮುಂಬರುವ ಡಿ. 23ರ ವರೆಗೆ ಆ ರಸ್ತೆಯಲ್ಲಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಬೇಕಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಶರವು ವಿಮಲೇಶ್ ಜಂಕ್ಷನ್ ನಿಂದ ಕೆ.ಎಸ್.ಆರ್. ಜಂಕ್ಷನ್ ವರೆಗಿನ ರಸ್ತೆಯಲ್ಲಿ ಶರವು ಮಹಾಗಣಪತಿ ದೇವಸ್ಥಾನ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಕೆ.ಎಸ್.ಆರ್ ರಸ್ತೆಯಿಂದ ಪಿ.ಎಂ. ರಾವ್ ರಸ್ತೆ ಮೂಲಕ ಗಣಪತಿ ಹೈಸ್ಕೂಲ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಬದಲಿ ಮಾರ್ಗಗಳು: ವಾಹನಗಳು ನೇರವಾಗಿ ಹಂಪನಕಟ್ಟೆ ಜಂಕ್ಷನ್ ಮೂಲಕ ಸಂಚರಿಸಬೇಕು. ಕೆ.ಬಿ.ಕಟ್ಟೆ ಜಂಕ್ಷನ್ ಗಣಪತಿ ಹೈಸ್ಕೂಲ್ ರಸ್ತೆ ಶರವು ದೇವಸ್ಥಾನ ರಸ್ತೆಯ ಮೂಲಕ ಕೆ.ಎಸ್.ಆರ್.ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಪಿ.ಎಂ.ರಾವ್ ರಸ್ತೆಯ ಮೂಲಕ ಕೆ.ಎಸ್.ಆರ್ ರಸ್ತೆ ಕಡೆಗೆ ಸಂಚರಿಸುವAತೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *