Ad Widget .

ಮಲೆನಾಡಿನ ಸೊಗಡು ಪರಿಚಯಿಸುತ್ತಿದೆ ಕಾರ್ಟೂನ್ ಚಾನೆಲ್| ಆರಂಭದಿಂದಲೇ‌ ಅದ್ಭುತ ಪ್ರತಿಕ್ರಿಯೆ ಪಡೆದ ‘ಮಲ್ನಾಡ್ ಪುಟಾಣಿಗಳು’

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶಿವಮೊಗ್ಗ: ಮಲೆನಾಡಿನ ಭಾಷಾ ಸೊಗಡು ಹಾಗೂ ಇಲ್ಲಿನ ಆಹಾರ ಪದ್ಧತಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಬೇಕು ಎಂಬ ಮಹತ್ವಾ ಕಾಂಕ್ಷೆಯೊಂದಿಗೆ ತೀರ್ಥಹಳ್ಳಿಯಲ್ಲಿ ಒಂದೇ ಕುಟುಂಬದವರು ‘ಮಲ್ನಾಡ್ ಪುಟಾಣಿಗಳು’ ಕನ್ನಡ ಯೂ‌ ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

Ad Widget . Ad Widget . Ad Widget .

ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಆರಂಭಿಸಿರುವ ಈ ಚಾನೆಲ್‌ಗೆ ವಿದೇಶದಲ್ಲೂ ವೀಕ್ಷಕರಿದ್ದಾರೆ. ವಿಶೇಷವೆಂದರೆ, ಶುರುವಾದ ಎರಡೇ ತಿಂಗಳಲ್ಲಿ 20 ಲಕ್ಷ ವೀಕ್ಷಕರನ್ನು ಚಾನೆಲ್ ಸಂಪಾದಿಸಿದೆ.

ಪೂರ್ಣಿಮ

ಮಲೆನಾಡಿನ ಸಂಸ್ಕೃತಿ, ಭಾಷೆಯನ್ನು ಉಳಿಸಿ ಬೆಳೆಸುವ ಹಾಗೂ ಜಾಗತಿಕ ಮಟ್ಟ ದಲ್ಲಿ ಜನರಿಗೆ ಇದನ್ನು ತಲುಪಿಸುವುದಕ್ಕಾಗಿ ಉಪನ್ಯಾಸಕಿ ಪೂರ್ಣಿಮಾ ಮಳಲಿ ನೇತೃತ್ವದಲ್ಲಿ ಈ ವಿಶೇಷ ಪ್ರಯತ್ನ ಮಾಡಲಾಗಿದೆ. ಸಹೋದರ ನಿತಿನ್ ಮಳಲಿ ತಾಂತ್ರಿಕ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಸಂಬಂಧಿಕರೇ ಆದ ಕ್ಷಮಿತಾ, ನೂತನ, ದೀಪ್ತಿ, ಹರ್ಷಿತ್, ಪ್ರೀತಮ್, ಗೋಷ್ಠ, ದೀಪಕ್, ಸಾತ್ವಿಕ ಇವರು, ಈ ರೂವಾರಿಗಳ ಜೊತೆ ಕೈಜೋಡಿಸಿದ್ದಾರೆ.

ಶೂನ್ಯ ಬಂಡವಾಳದಲ್ಲಿ ಶುರುವಾದ ಈ ಚಾನೆಲ್ ಗೆ‌ ಇವರೇನು ಹೆಚ್ಚು ಖರ್ಚು ಮಾಡುತ್ತಿಲ್ಲ. ಲಭ್ಯವಿರುವ ಮೊಬೈಲ್‌ನಲ್ಲಿಯೇ ಆಡಿಯೋ ರೆಕಾರ್ಡಿಂಗ್, ವಿಡಿಯೋ ಎಡಿಟಿಂಗ್‌ ಮತ್ತಿತ್ತರ ಕೆಲಸಗಳನ್ನು ‌ಮಾಡುತ್ತಿದ್ದಾರೆ.

ಪ್ರಸ್ತುತ ದ.ಕ ಜಿಲ್ಲೆಯ ಸುಳ್ಯದ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪೂರ್ಣಿಮಾ ಕೊರೊನಾ ಲಾಕ್ ಡೌನ್ ನಿಂದ ಹುಟ್ಟೂರಿಗೆ ಮರಳಿದ‌ ಸಂದರ್ಭದಲ್ಲಿ ತಮ್ಮೂರಿಗಾಗಿ ಏನಾದರೂ‌ ಮಾಡಬೇಕು ಎಂಬ ಉತ್ಸುಕತೆಯೊಂದಿಗೆ ‘ಮಲ್ನಾಡ್ ಪಟಾಣಿಗಳು’ ಹೆಸರಿನಲ್ಲಿ ಕನ್ನಡ ಕಾರ್ಟೂನ್ ಪೂರ್ಣಿಮಾ ಮಳಲಿ ಚಾನೆಲ್ ಆರಂಭಿಸಿದ್ದಾರೆ.

ಮಲೆನಾಡಿನ ಅದೆಷ್ಟೋ ಶಬ್ದಗಳನ್ನು ಹೊಸ ತಲೆಮಾರು ಮರೆಯುತ್ತಿದೆ. ಅದನ್ನು ದಾಖಲಿಸಿ, ಬೆಳಕಿಗೆ ತರುವ ಕೆಲಸಕ್ಕೆ ಕೈ ಹಾಕಿದ್ದೇನೆ. ಕಾಲ ಗರ್ಭದಲ್ಲಿ ಹೂತು ಹೋಗಿರುವ ಅದೆಷ್ಟೋ ಮಲೆನಾಡು ಮೂಲದ ಪದಗಳನ್ನು ಈಗ ಮರು ಬಳಕೆಗೆ ತರುವ ಕೆಲಸವನ್ನು ಚಾನೆಲ್ ಮೂಲಕ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ ಪೂರ್ಣಿಮಾ. ಇವರ ಈ ಪ್ರಯತ್ನ ‌ಯಶಸ್ವಿಯಾಗಲಿ ಎಂಬುದೇ ನಮ್ಮ ಹಾರೈಕೆ.

ಸಮಗ್ರ ಸಮಾಚಾರ ತಂಡ

Leave a Comment

Your email address will not be published. Required fields are marked *