ಬೆಂಗಳೂರು: ಒಂದೂವರೆ ವರ್ಷದ ನಂತರ ರಾಜ್ಯದಲ್ಲಿ ಇಂದಿನಿಂದ 1 ರಿಂದ 5 ನೇ ತರಗತಿ ಆರಂಭವಾಗಿವೆ. ನೀಟಾಗಿ ಯೂನಿಫಾರ್ಮ್ ತೊಟ್ಟು ಪುಟ್ಟ ಪುಟಾಣಿಗಳು ವರ್ಷದ ಬಳಿಕ ಶಾಲೆಗೆ ಹೊರಟಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಕೋವಿಡ್ ಮಾರ್ಗಸೂಚಿಯಂತೆ ಭೌತಿಕವಾಗಿ ತರಗತಿ ನಡೆಸಲು ಸೂಚನೆ ನೀಡಿದ್ದು, ಶಾಲೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಾಲೆಗಳಲ್ಲಿ ಶಾಲಾ ಕೊಠಡಿ, ಶೌಚಾಲಯ, ಅಡುಗೆ ಮನೆ ಮತ್ತು ಶಾಲಾ ಆವರಣವನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿಸಬೇಕು. ಮಕ್ಕಳು ಶಾಲೆಗಳಿಗೆ ಬರಲು ಪೋಷಕರಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆದುಕೊಂಡು ಬರಬೇಕು. ಮಧ್ಯಾಹ್ನದ ಅವಧಿಗೆ ತರಗತಿಗಳನ್ನು ಸೀಮಿತಗೊಳಿಸಿ ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ.