Ad Widget .

100 ಕೋಟಿ ಲಸಿಕೆ ವಿತರಣೆಗೆ ಸಂಭ್ರಮಿಸಿದ್ದಾಯ್ತು| ಪೆಟ್ರೋಲ್ ಡೀಸೆಲ್ ರೂ.100 ಆಗಿದ್ದಕ್ಕೆ ಸಂಭ್ರಮಾಚರಣೆ ಯಾವಾಗ ಮೋದಿಜೀ..!?

Ad Widget . Ad Widget .

ಡಿಜಿಟಲ್ ಡೆಸ್ಕ್: ಭಾರತದಲ್ಲಿ 100 ಕೋಟಿ ಕೋವಿಡ್ -19 ಲಸಿಕೆ ವಿತರಣೆ ನಡೆಸಿದ್ದನ್ನು ಆಚರಿಸಿದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇತರ ‘ಶತಕಾಚರಣೆ’ ‘ಸಂಭ್ರಮ’ಗಳನ್ನು ಆಚರಿಸುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಕ್ತಾರ ಪಿ.ಚಿದಂಬರಂ ಭಾನುವಾರ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

Ad Widget . Ad Widget .

ಕೇಂದ್ರದ ಆಡಳಿತಾರೂಡ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಜ್ಯಸಭಾ ಸಂಸದ ಪಿ.ಚಿದಂಬರಂ, ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ 100 ರೂ.ಗಳನ್ನು ದಾಟಿದೆ. ಪ್ರಧಾನಿ ಮೋದಿಯವರು ತಮ್ಮ ಮಂತ್ರಿಗಳನ್ನು 100 ಬಿಲಿಯನ್ ಲಸಿಕೆಗಳನ್ನು ನೀಡಿದ್ದಕ್ಕೆ ಮಾಡಿದ ಆಚರಣೆಯಂತೆ ಇತರ ಶತಮಾನೋತ್ಸವಗಳನ್ನು ಆಚರಿಸುವಂತೆ ಕರೆ ಕೊಡಬೇಕು. ಕೆಲವು ವಾರಗಳ ಹಿಂದೆ ಪೆಟ್ರೋಲ್ ಲೀಟರ್‌ಗೆ 100 ರೂ ದಾಟಿತ್ತು ಮತ್ತು ಈಗ ಡೀಸೆಲ್ ಲೀಟರ್‌ಗೆ 100 ರೂ ದಾಟಿದೆ” ಎಂದು ಅವರು ಬರೆದಿದ್ದಾರೆ.

ಭಾನುವಾರ ತಮ್ಮ ಟ್ವೀಟ್ ನಲ್ಲಿ, ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು ಗ್ಯಾಸ್ ಸಿಲಿಂಡರ್ ಬೆಲೆ 1,000 ರೂಪಾಯಿ ದಾಟಿದಾಗ “ಆಚರಿಸಲು ಇನ್ನೊಂದು ಅವಕಾಶವಿದೆ” ಎಂದೂ ಸಹ ಸೇರಿಸಿದರು.

ಒಟ್ಟಾರೆ ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ದರ ಗಗನಮುಖಿಯಾಗಿ ಓಡುತ್ತಿದ್ದರೂ ಮೌನ ಮುರಿಯದ ಪ್ರಧಾನಿಗೆ ವಿರೋಧ ಪಕ್ಷಗಳು ಜಾಲತಾಣಗಳಲ್ಲಿ ‌ಬಿಸಿ ಮುಟ್ಟಿಸುತ್ತಿವೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, 2020 ರ ಮೇ ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ಬೆಲೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 36 ರೂಪಾಯಿ ಹಾಗೂ 26.58 ರೂಪಾಯಿಗಳು ಏರಿಕೆಯಾಗಿದೆ.

ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ 107.24 ರೂಪಾಯಿಗಳಾಗಿದ್ದರೆ ಡೀಸೆಲ್ ಬೆಲೆ 95.97 ರೂಪಾಯಿಗಳಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ದೇಶದಲ್ಲಿ ಹೆಚ್ಚಳವಾಗುತ್ತಿದೆ.

ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ 100 ರೂಪಾಯಿಗಳಿಗಿಂತಲೂ ಹೆಚ್ಚಿದ್ದು, 12 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಡಿಸೆಲ್ ಸಹ 100 ರೂಪಾಯಿ ಗಡಿ ದಾಟಿದೆ.

ಸರ್ಕಾರ ತೈಲ ಬೆಲೆ ಮೇಲೆ ಅಬಕಾರಿ ಸುಂಕ ಎಚ್ಚಳಕ್ಕೆ ಮುಂದಾದಾಗಿನಿಂದಲೂ ಮೇ.5, 2020 ರಿಂದ ಇಲ್ಲಿಯವರೆಗೆ ಪೆಟ್ರೋಲ್ ಬೆಲೆಯ ಏರಿಕೆಯ ಒಟ್ಟು ಮೊತ್ತ ಪ್ರತಿ ಲೀಟರ್ ಗೆ 35.98 ರೂಪಾಯಿಗಳಾಗಿದ್ದರೆ ಡೀಸೆಲ್ ಬೆಲೆ ಏರಿಕೆಯ ಮೊತ್ತ 26.58 ರೂಪಾಯಿಗಳಾಗಿವೆ. ಅಂತಾರಾಷ್ಟ್ರೀಯ ತೈಲ ಬೆಲೆಗಳು ಪ್ರತಿ ಬ್ಯಾರೆಲ್ ಗೆ 19 ಯುಎಸ್ ಡಾಲರ್ ಇದ್ದಾಗ ಜನಸಾಮಾನ್ಯರಿಗೆ ಅದರ ಫಲವನ್ನು ತಲುಪಿಸದೇ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿತ್ತು.

Leave a Comment

Your email address will not be published. Required fields are marked *