Ad Widget .

ಪತಿ ಮೇಲೆ ಸಿಟ್ಟಿಗೆ – ಮೂರು ತಿಂಗಳ ಕಂದಮ್ಮನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ| ಯುಟ್ಯೂಬ್ ನಲ್ಲಿ ಬಯಲಾಯ್ತು ಕೊಲೆ ಪ್ರಕರಣ !!!

Ad Widget . Ad Widget .

ಭೋಪಾಲ್: ಪತಿ ಮೇಲೆ ಇರುವ ಕೋಪಕ್ಕೆ ತನ್ನ ಮೂರು ತಿಂಗಳ ಕಂದಮ್ಮನನ್ನು ತಾಯಿಯೇ ಕೊಂದು ಹಾಕಿರುವ ಘಟನೆ ಅಕ್ಟೋಬರ್ 12 ರಂದು ಮಧ್ಯಪ್ರದೇಶದಲ್ಲಿ ನಡೆದಿದೆ.

Ad Widget . Ad Widget .

ಸ್ವಾತಿ ಎಂಬಾಕೆ ತನ್ನ 3 ತಿಂಗಳ ಮಗಳನ್ನು ಹತ್ಯೆ ಮಾಡಿದ್ದಾಳೆ. ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ.

ಕಾಣೆಯಾದ ಮಗುವಿಗಾಗಿ ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಸಿಗದೇ ಇದ್ದಾಗ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪಕ್ರರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆ ಶೋಧದ ವೇಳೆ ಮೂರನೇ ಅಂತಸ್ತಿನಲ್ಲಿರುವ ನೀರಿನ ಟ್ಯಾಂಕರ್‌ನಲ್ಲಿ 3 ತಿಂಗಳ ಹೆಣ್ಣು ಮಗುವಿನ ಮೃತ ದೇಹ ಪತ್ತೆಯಾಗಿದೆ. ಆದರೆ ಕೊಲೆ ಮಾಡಿದ್ದು, ಯಾರು ಎಂಬುಂದು ಪೊಲೀಸರಿಗೆ ತಲೆ ನೋವಾಗಿತ್ತು.

ಹಿನ್ನೆಲೆ ಏನು?:
ಮನೆಯಲ್ಲಿ ಒಟ್ಟು 4 ಮಂದಿ ಜೊತೆಯಾಗಿ ವಾಸವಿದ್ದರು, ಮಹಿಳೆ ಹಾಗೂ ಆಕೆಯ ಪತಿ, ಗಂಡನ ಅಪ್ಪ-ಅಪ್ಪಇವರೆಲ್ಲರೂ ಒಟ್ಟಿಗೆ ಇದ್ದರು. ಪೊಲೀಸರಿಗೆ ಎಲ್ಲರ ಮೇಲೆ ಅನುಮಾನ ಮೂಡಿತ್ತು. ಮಗು ಮೃತಪಟ್ಟ 10 ದಿನಗಳ ಕಾಲ ಪ್ರತಿದಿನ ತಾಯಿ ಠಾಣೆಗೆ ತೆರಳಿ ಮಗು ಹುಡುಕಿಕೊಂಡುವಂತೆ ಕಣ್ಣೀರು ಹಾಕುತ್ತಾ, ನನ್ನ ಮಗು ಸಿಗದೇ ಇದ್ದರೆ ನಾನು ಸತ್ತು ಹೋಗುತ್ತೇನೆ ಎಂದು ಹೇಳಿದ್ದಳು.

ಮಗುವಿನ ಕುಟುಂಬಸ್ಥರನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಮಗುವಿನ ತಾಯಿ ಮೋಬೈಲ್ ಫೋನ್ ಚೆಕ್ ಮಾಡಿದ್ದಾರೆ. ಆಗ ಗೂಗಲ್ ಹಾಗೂ ಯೂಟ್ಯೂಬ್‍ನಲ್ಲಿ ಮಗುವನ್ನು ಕೊಲ್ಲುವುದು ಹೇಗೆ ಎಂಬುದನ್ನು ತಾಯಿ ಸ್ವಾತಿ ಸರ್ಚ್ ಮಾಡಿರುವುದು ಕಂಡುಬಂದಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ನಡೆದ ಘಟನೆಯನ್ನೆಲ್ಲ ತಾಯಿ ಸ್ವಾತಿ ಹೇಳಿದ್ದಾಳೆ. ಪೊಲೀಸರ ಒಂದು ಕ್ಷಣ ದಂಗಾಗಿಹೋಗಿದ್ದಾರೆ.
ನಾನು ನನ್ನ ಗಂಡ ಸಪರೇಟ್ ಆಗಿ ಸಂಸಾರ ಮಾಡುವ ಕನಸು ಕಂಡಿದ್ದೇ, ತುಂಬಾ ಸಲ ಗಂಡನ ಬಳಿ ಬೇರೆ ಮನೆ ಮಾಡುವಂತೆ ಹೇಳಿದ್ದೆ. ಆದರೆ ಗಂಡ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಹೀಗಾಗಿ ಈ ರೀತಿಯ ಕೃತ್ಯ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

Leave a Comment

Your email address will not be published. Required fields are marked *