Ad Widget .

ಜೈಲಲ್ಲಿ ರಾಮಾಯಣದ ಮೊರೆ ಹೋದ ಆರ್ಯನ್ ಖಾನ್|

Ad Widget . Ad Widget .

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿರುವ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಲಾಗಿದೆ. ನಂತರ ಆರ್ಯನ್​ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಅಕ್ಟೋಬರ್ 26ರಂದು ವಿಚಾರಣೆಗೆ ನಡೆಯಲಿದೆ.

Ad Widget . Ad Widget .

ಏತನ್ಮಧ್ಯೆ, ಆರ್ಯನ್ ಜೈಲಿನಲ್ಲಿ ಸಮಯ ಕಳೆಯಲು ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗಳು ಏಳದೇ ಇರದು. ಅವರು ಜೈಲಿನಲ್ಲಿ ಕಾಲಕಳೆಯಲು ಪುಸ್ತಕಗಳನ್ನು ಓದುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಆರ್ಥರ್ ರೋಡ್ ಜೈಲಿನ ಗ್ರಂಥಾಲಯದಿಂದ ಆರ್ಯನ್ ಎರಡು ಪುಸ್ತಕಗಳನ್ನು ತೆಗೆದುಕೊಂಡಿದ್ದಾರೆ.

ಜೈಲು ಅಧಿಕಾರಿಗಳ ಪ್ರಕಾರ, ಬೇಲ್​ ಮನವಿಯನ್ನು ಎರಡನೇ ಬಾರಿಗೆ ಕೋರ್ಟ್ ತಿರಸ್ಕರಿಸಿದ ಸುದ್ದಿ ಕೇಳಿದ ನಂತರ ಆರ್ಯನ್ ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಆರ್ಯನ್​ಗೆ ಪುಸ್ತಕಗಳನ್ನು ಓದಲು ಸಲಹೆ ನೀಡಲಾಗಿತ್ತು. ಆರ್ಯನ್ ಖಾನ್ ಅವರಿಗೆ ಓದಲು 2 ಪುಸ್ತಕಗಳನ್ನು ನೀಡಲಾಗಿದೆಯಂತೆ. ಅವರಿಗೆ ನೀಡಿರುವ ಪುಸ್ತಕಗಳಲ್ಲಿ ‘ಗೋಲ್ಡನ್ ಲಯನ್’ ಸಹ ಒಂದು. ಎರಡನೇ ಪುಸ್ತಕ ರಾಮ ಮತ್ತು ಸೀತಾ ಕಥೆಯನ್ನು ಆಧರಿಸಿದೆ. ಜೈಲಿನಲ್ಲಿ ಆರ್ಯನ್​ ರಾಮಾಯಣ ಕಥೆಗಳನ್ನು ಓದುತ್ತಿದ್ದಾರಂತೆ.

Leave a Comment

Your email address will not be published. Required fields are marked *