Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷಾದಿ ದ್ವಾದಶ ರಾಶಿಗಳ ಈ ವಾರದ ವಾರಭವಿಷ್ಯ ಇಲ್ಲಿದೆ. ಸಮಸ್ಯೆಗಳು ಹಾಗೂ ಅದರ ಪರಿಹಾರವನ್ನು ಸೂಚಿಸಲಾಗಿದೆ. ನಿಮ್ಮ ರಾಶಿಗಳ ವಾರಭವಿಷ್ಯ ತಿಳಿದುಕೊಂಡು ಅದರಂತೆ ಮುಂದುವರೆಯಿರಿ. ಶುಭವಾಗಲಿ

Ad Widget . Ad Widget .

ಮೇಷ ರಾಶಿ
ಉದ್ಯೋಗ ಆಕಾಂಕ್ಷಿಗಳಿಗೆ ಶುಭವಾರ್ತೆ ಕೇಳಿಬರಬಹುದು. ಆದಾಯದಲ್ಲಿ ತಕ್ಕಮಟ್ಟಿನ ಹೆಚ್ಚಳವನ್ನು ಕಂಡು ಆರ್ಥಿಕ ವಿಷಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸ್ತ್ರೀ ವರ್ಗದವರು ಸಂತೋಷದಿಂದ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.ಅನಗತ್ಯ ಸಿಟ್ಟಿನಿಂದ ವ್ಯವಹಾರಗಳಲ್ಲಿ ನಷ್ಟ ಉಂಟಾಗಬಹುದು. ಆದ್ದರಿಂದ ಶಾಂತಿ ಸಮಾಧಾನದಿಂದ ವರ್ತಿಸುವುದು ಒಳ್ಳೆಯದು. ನ್ಯಾಯಾಲಯದಲ್ಲಿನ ವ್ಯವಹಾರಗಳನ್ನು ಸ್ವಲ್ಪಕಾಲ ಮುಂದೂಡುವುದು ಒಳ್ಳೆಯದು. ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯದ ಜೊತೆಗೆ ತರಬೇತಿಯೂ ದೊರೆಯುತ್ತದೆ. ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಕಾರ್ಮಿಕರ ಸಮಸ್ಯೆಯಿಂದ ಸ್ವಲ್ಪ ಹಿನ್ನಡೆಯಾಗಬಹುದು.

Ad Widget . Ad Widget .

ವೃಷಭ ರಾಶಿ

ಯಾವುದೇ ವಿಷಯಗಳಲ್ಲಿ ದುಗುಡಕ್ಕೆ ಎಡೆಮಾಡಿಕೊಡುವುದು ಬೇಡ. ತಾಳ್ಮೆಯೂ ಬಹಳ ನೆಮ್ಮದಿಗೆ ಕಾರಣವಾಗುವುದು. ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣಬಹುದು. ನೀವು ಕೈಗೊಂಡಿರುವ ಕೆಲಸ ಕಾರ್ಯಗಳು ನಿಧಾನವಾದರೂ ಪೂರ್ಣಗೊಳ್ಳುತ್ತವೆ. ಹಿರಿಯರ ಸಲಹೆಯಿಂದ ಹೊಸ ಆದಾಯದ ಮೂಲಗಳು ಗೋಚರವಾಗುತ್ತವೆ. ಕಚೇರಿ ಕೆಲಸಗಳಲ್ಲಿ ಸ್ವಲ್ಪ ಎಚ್ಚರವಾಗಿರುವುದು ಬಹಳ ಅಗತ್ಯ. ಇಲ್ಲವಾದಲ್ಲಿ ಅನಗತ್ಯವಾಗಿ ದೂರಿಗೆ ಸಿಲುಕಿಕೊಳ್ಳುವಿರಿ. ಕೆಲವು ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವಾಗ ಅತಿಯಾದ ಒತ್ತಡ ಉಂಟಾಗುತ್ತದೆ. ವಿದೇಶಗಳಿಂದ ಅಲಂಕಾರಿಕ ವಸ್ತುಗಳನ್ನು ತರಿಸುವ ಸಾಧ್ಯತೆಗಳಿವೆ. ಆಹಾರ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.

ಮಿಥುನ ರಾಶಿ

ಸ್ನೇಹಿತರ ಸಹಕಾರದಿಂದ ನಿಮ್ಮ ಕಾರ್ಯಸಾಧನೆ ಅತ್ಯಂತ ಯಶಸ್ವಿಯಾಗಿ ಆಗುವುದು. ಭೂವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ರೀತಿಯ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿರಿ. ಆಕಸ್ಮಿಕ ಧನಪ್ರಾಪ್ತಿಯನ್ನು ನಿರೀಕ್ಷಿಸಬಹುದು. ಮಹಿಳೆಯರಿಗೆ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಯೋಗವಿದೆ. ಸಂಗಾತಿಯ ಕಡೆಯವರಿಂದ ಕಾವೇರಿದ ಮಾತುಗಳನ್ನು ಕೇಳಬೇಕಾಗಬಹುದು. ಅವರಿಗೆ ಸಂಗಾತಿ ನೀಡುವ ತಾಳ್ಮೆಯ ಉತ್ತರಗಳು ಸಮಸ್ಯೆಯನ್ನು ಪರಿಹಾರಗೊಳಿಸುತ್ತವೆ. ಆರ್ಥಿಕ ಸ್ಥಿತಿಯು ಮಂದಗತಿಯಲ್ಲಿ ಇರುತ್ತದೆ. ಉದ್ಯೋಗದಲ್ಲಿ ಪ್ರಾಮಾಣಿಕತೆಗೆ ಮೆಚ್ಚಿ ಪ್ರೋತ್ಸಾಹಧನ ನೀಡುವರು. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇದೆ.

ಕಟಕ ರಾಶಿ

ವಿದ್ಯಾರ್ಥಿಗಳು ಅಧ್ಯಯನದಲ್ಲಿ ಸಾಕಷ್ಟು ಮುನ್ನಡೆಯನ್ನು ಕಾಣಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಹೊಂದಿಸಬೇಕಾಗಬಹುದು. ಕೆಲವು ರೀತಿಯ ರಾಸಾಯನಿಕ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ವಿಸ್ತರಿಸುವುದರ ಜೊತೆಗೆ ಲಾಭವಿರುತ್ತದೆ. ವಸ್ತ್ರ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಆದಾಯವೂ ಹೆಚ್ಚುತ್ತದೆ. ಉದ್ದಿಮೆದಾರರಿಗೆ ಇದ್ದ ಕಾರ್ಮಿಕರ ಸಮಸ್ಯೆ ಪರಿಹಾರವಾಗುತ್ತದೆ. ಶಾಲಾ ಮುಖ್ಯಸ್ಥರಿಗೆ ಕಾನೂನಿನ ತೊಡಕುಗಳು ಎದುರಾಗಬಹುದು. ವಾಹನ ಚಾಲನೆ ವೇಳೆ ಎಚ್ಚರಿಕೆ ವಹಿಸಿರಿ. ಚಿಕ್ಕಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಖರ್ಚು ಕಡಿಮೆ ಮಾಡಿ ಹಣ ನಿರ್ವಹಣೆಯನ್ನು ಮಾಡುವಿರಿ.

ಸಿಂಹ ರಾಶಿ
ನಿಮ್ಮ ಕೆಲಸಕಾರ್ಯಗಳಿಗೆ ಇದ್ದ ಅಡ್ಡಿ ಆತಂಕಗಳು ನಿವಾರಣೆಯಾಗುತ್ತವೆ. ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸ ನಿಮ್ಮಲ್ಲಿ ಜಾಗೃತಿ ಆಗುತ್ತದೆ. ಕೆಲವು ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಅಧೀನ ಸಹೋದ್ಯೋಗಿಗಳಿಂದ ಕಿರುಕುಳ ಆಗಬಹುದು. ಬೆಲೆಬಾಳುವ ದಾಖಲೆಗಳನ್ನು ಜೋಪಾನ ಮಾಡಿರಿ. ಅದರಲ್ಲೂ ತಿಜೋರಿಗಳನ್ನು ನೋಡಿಕೊಳ್ಳುವವರು ಬಹಳ ಎಚ್ಚರವಹಿಸಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹಿರಿಯ ರಾಜಕಾರಣಿಗಳ ಒಡನಾಟ ದೊರೆಯುತ್ತದೆ. ಸೇನೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಮುಂಬಡ್ತಿ ದೊರೆಯಬಹುದು. ಹಣದ ಹರಿವು ನಿಮ್ಮ ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ. ಸಹೋದರಿಯ ಸಹಕಾರ ನಿಮಗೆ ದೊರೆಯುತ್ತದೆ.

ಕನ್ಯಾ ರಾಶಿ

ನಿವೇಶನ ಖರೀದಿಗಾಗಿ ಮಾಡಿದ್ದ ಯತ್ನಗಳು ಫಲ ಕೊಡುತ್ತವೆ. ಬಂಧುಗಳಿಂದ ಸಾಕಷ್ಟು ಸಹಾಯ ಈ ವಿಚಾರದಲ್ಲಿ ದೊರೆಯುತ್ತದೆ. ವ್ಯವಹಾರಗಳಲ್ಲಿ ವರ್ತಮಾನದ ವಿಷಯಗಳನ್ನು ಅವಲೋಕನ ಮಾಡಿ ಕಾರ್ಯಮಗ್ನರಾಗುವುದು ಒಳಿತು. ಹಣದ ಒಳಹರಿವು ನಿಮ್ಮ ನಿರೀಕ್ಷೆಗಿಂತ ತುಸು ಹೆಚ್ಚಿರುತ್ತದೆ. ಪಾರಂಪರಿಕ ಆಹಾರ ವಸ್ತುಗಳನ್ನು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಕಾರ್ಯದೊತ್ತಡ ಹೆಚ್ಚಾಗಬಹುದು. ಲೇವಾದೇವಿ ವ್ಯವಹಾರಸ್ಥರಿಗೆ ಅವರ ಬಾಕಿ ವಸೂಲಿ ಆಗಬಹುದು. ಹಿರಿಯರ ಆಸ್ತಿಪಾಸ್ತಿಗಳಲ್ಲಿ ನಿಮ್ಮ ಪಾಲು ನಿಮಗೆ ದೊರೆಯುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಅನುಕೂಲಗಳು ಒದಗಿಬರುತ್ತವೆ. ಸ್ವಂತ ಆರೋಗ್ಯದ ಕಡೆ ಗಮನ ಇರಲಿ.

ತುಲಾ ರಾಶಿ

ದಾಯಾದಿಗಳ ನಡುವಿನ ವೈಮನಸ್ಯ ದೂರವಾಗುತ್ತದೆ. ಜನಪ್ರತಿನಿಧಿಗಳಿಗೆ ಸಾರ್ವಜನಿಕರಿಂದ ಕಿರಿಕಿರಿಯಾಗುವ ಸಂದರ್ಭವಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹಣ ದುರ್ಬಳಕೆ ಮಾಡಿದ ಆಪಾದನೆ ಎದುರಾಗಬಹುದು. ಆಸ್ತಿ ದಾಖಲಾತಿಗಳನ್ನು ಈಗ ಸರಿ ಮಾಡಿಕೊಳ್ಳಬಹುದು. ನಿಮ್ಮ ಗುಪ್ತ ಆಸ್ತಿಗಳ ದಾಖಲೆಗಳನ್ನು ಸರಿಯಾಗಿ ಕಾಪಾಡಿಕೊಳ್ಳಿ. ಇಲ್ಲವಾದಲ್ಲಿ ಪರರ ಕೈಸೇರುವುದು. ಆರ್ಥಿಕ ಒತ್ತಡಗಳಿಂದ ಕಿರಿಕಿರಿಯಾಗಬಹುದು. ವೆಚ್ಚಕ್ಕೆ ಕಡಿವಾಣ ಹಾಕಿ ಸರಿದೂಗಿಸಿಕೊಳ್ಳಬಹುದು. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಕೆಲವರಿಗೆ ಅನಿರೀಕ್ಷಿತವಾಗಿ ವಿದೇಶ ಪ್ರಯಾಣ ಒದಗಬಹುದು. ಪರರ ಮಾತನ್ನು ನಂಬಿ ಬೇರೆಯವರನ್ನು ದೂಷಿಸುವುದು ಬೇಡ. ಪರಿಶೀಲನೆ ಮಾಡುವುದು ಬಹಳಷ್ಟು ಒಳಿತು.

ವೃಶ್ಚಿಕ ರಾಶಿ

ಕೆಲವು ಸರ್ಕಾರಿ ನೌಕರರಿಗೆ ಬಿಡುವಿಲ್ಲದ ತಿರುಗಾಟವಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆಗೆ ಅನುಕೂಲಕರವಾದ ವಾತಾವರಣವಿರುತ್ತದೆ. ಬಡ್ಡಿ ವ್ಯವಹಾರಸ್ಥರಿಗೆ ಸಾಧಾರಣ ಲಾಭವಿರುತ್ತದೆ. ನೈತಿಕ ಬಲದಿಂದ ಸುತ್ತಮುತ್ತ ಉತ್ತಮ ವಾತಾವರಣವನ್ನು ಸೃಷ್ಟಿ ಮಾಡುವಿರಿ. ಇದಕ್ಕಾಗಿ ಸಾರ್ವಜನಿಕರಿಂದ ಪ್ರಶಂಸೆಗಳು ಕೇಳಿಬರುತ್ತವೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಇತರರೊಡನೆ ಚರ್ಚಿಸುವುದರಿಂದ ತೊಂದರೆಯೇ ಹೆಚ್ಚು. ಯಾಂತ್ರಿಕ ಉತ್ಪಾದನಾ ಕ್ಷೇತ್ರದಲ್ಲಿರುವವರಿಗೆ ಲಾಭ ಹೆಚ್ಚುತ್ತದೆ. ಹಿರಿಯರ ಆರೋಗ್ಯದ ವಿಚಾರದಲ್ಲಿ ಸುಧಾರಣೆ ಕಂಡುಬರುತ್ತದೆ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಈ ಹಿಂದೆ ಬಂಧುಗಳಿಂದ ಆಗಿದ್ದ ಮೋಸ ಪರಿಹಾರವಾಗುತ್ತದೆ.

ಧನಸ್ಸು ರಾಶಿ

ಪೊಲೀಸ್ ಉದ್ಯೋಗದಲ್ಲಿರುವವರು ಶಿಸ್ತು ಸಂಯಮವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ನಿಧಾನಗತಿಯ ಪ್ರಗತಿ ಇರುತ್ತದೆ. ಸ್ನಾಯುಸೆಳೆತ ಸ್ವಲ್ಪ ಬಾಧಿಸಬಹುದು. ಹಿರಿಯರು ಮಾತನಾಡುವಾಗ ಸ್ವಲ್ಪ ಎಚ್ಚರವಿರಲಿ. ಆಡುವ ಮಾತು ಅವರಿಗೆ ತಿರುಗುಬಾಣವಾಗುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಪ್ರಗತಿಯನ್ನು ಕಾಣಬಹುದು. ನಿಮ್ಮ ಸಹೋದ್ಯೋಗಿಗಳ ಒಳ ತಂತ್ರಗಳು ನಿಮಗೆ ಗೊತ್ತಾಗಿ ಅವರನ್ನು ಮಟ್ಟ ಹಾಕುವಿರಿ. ದಾಂಪತ್ಯ ಸಾಮರಸ್ಯದಿಂದ ನೆಮ್ಮದಿಯನ್ನು ಕಾಣುವಿರಿ. ಬರಬೇಕಾಗಿದ್ದ ಹಣ ಸಕಾಲದಲ್ಲಿ ಒದಗಿ ಅನುಕೂಲವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಮ್ಮೆಯೆನಿಸುತ್ತದೆ.

ಮಕರ ರಾಶಿ

ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಲಕ್ಷಣಗಳಿವೆ. ಭೂಮಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಸಾಲಗಳನ್ನು ತೀರಿಸಲು ಹಲವು ಮಾರ್ಗಗಳು ದೊರೆಯುತ್ತವೆ. ದ್ವಿದಳ ಧಾನ್ಯಗಳ ವ್ಯಾಪಾರಿಗಳಿಗೆ ವ್ಯವಹಾರ ಹೆಚ್ಚುತ್ತದೆ. ಅದರಲ್ಲೂ ತೊಗರಿ, ಕಡಲೆ ಮುಂತಾದ ಧಾನ್ಯಗಳಿಂದ ಹೆಚ್ಚು ಲಾಭವಿರುತ್ತದೆ. ವೈದ್ಯರಿಗೆ ಉತ್ತಮ ಹೆಸರು ಬಂದರೂ ಅವರ ಸಿಬ್ಬಂದಿ ಮಾಡುವ ತಪ್ಪಿಗೆ ಮುಜುಗರವಾಗುತ್ತದೆ. ಶತ್ರುಗಳ ಭೀತಿ ನಿವಾರಣೆಯಾಗಿ ಸಂತಸವಾಗುತ್ತದೆ. ವಿದೇಶಗಳಲ್ಲಿ ಓದುತ್ತಿರುವವರಿಗೆ ಉತ್ತಮ ಸೌಲಭ್ಯ ದೊರೆಯುತ್ತದೆ. ವೃತ್ತಿಯಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಧರ್ಮ ಕಾರ್ಯಕ್ಕಾಗಿ ಹಣ ವಿನಿಯೋಗ ಮಾಡುವಿರಿ.

ಕುಂಭ ರಾಶಿ

ಪತ್ರಕರ್ತರಿಗೆ ಸುದ್ದಿ ಸಂಗ್ರಹಕ್ಕೆ ಅತಿಯಾದ ಉತ್ಸಾಹ ಬಂದು ವಾದವಿವಾದಗಳಿಗೆ ಕಾರಣವಾಗಬಹುದು. ಅಪಾಯಕಾರಿ ಕೆಲಸಗಳನ್ನು ಮಾಡುವವರು ಎಚ್ಚರವಹಿಸುವುದು ಒಳ್ಳೆಯದು. ಅನುಭವಿ ಕ್ರೀಡಾಪಟುಗಳಿಂದ ನೂತನ ಕ್ರೀಡಾಪಟುಗಳಿಗೆ ಉತ್ತಮ ಸಲಹೆ ದೊರೆಯುತ್ತದೆ. ಹಣದ ಒಳಹರಿವಿನಲ್ಲಿ ಮಂದಗತಿ ಇರುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚಿನ ಶ್ರಮ ಹಾಕಬೇಕಾದ ಅನಿವಾರ್ಯತೆ ಇದೆ. ನ್ಯಾಯಾಲಯದ ಕಟ್ಲೆಗಳಲ್ಲಿ ಜಯವಿರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ ಹೆಚ್ಚುತ್ತದೆ. ತಂದೆಯೊಂದಿಗಿನ ಸಂಬಂಧ ಬಹಳ ಸುಧಾರಿಸುತ್ತದೆ. ಸ್ತ್ರೀ ಮೇಲಧಿಕಾರಿಯಿಂದ ಸಹಾಯ ದೊರೆಯುತ್ತದೆ. ಹೋಟೆಲ್ ಉದ್ಯಮದವರಿಗೆ ಸ್ವಲ್ಪ ಪ್ರಗತಿ ಇರುತ್ತದೆ. ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುವಿರಿ.

ಮೀನ ರಾಶಿ

ಮಕ್ಕಳೊಂದಿಗೆ ಬೆರೆತು ಸಂತಸದ ದಿನವನ್ನಾಗಿ ಕಳೆಯುವಿರಿ. ವಿಶೇಷವಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ. ಸಾಲದ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆಯಿದೆ. ಬಂಧುವರ್ಗದವರಿಂದ ಸಂತಸದ ಸುದ್ದಿಗಳು ಕೇಳಿಬರುತ್ತವೆ. ಯಾಂತ್ರಿಕ ಸಲಕರಣೆಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸ್ಥಿರಾಸ್ತಿಯ ಕೊಳ್ಳುವಿಕೆ ಮತ್ತು ಮಾರಾಟದಲ್ಲಿ ಪ್ರಗತಿಯಾಗಿ ಲಾಭ ಬರುತ್ತದೆ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಸಂಗಾತಿಯ ಸಹಕಾರ ವಿಶೇಷವಾಗಿ ದೊರಕುತ್ತದೆ. ಹಿರಿಯರೊಂದಿಗೆ ಸಂಬಂಧ ಮಂಕಾಗುವ ಸಂದರ್ಭವಿದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಆಭರಣ ವ್ಯಾಪಾರಿಗಳಿಗೆ ಲಾಭ ಹೆಚ್ಚುತ್ತದೆ.

Leave a Comment

Your email address will not be published. Required fields are marked *