Ad Widget .

ಕ್ರಿಕೆಟ್ ಅಂಗಳದಲ್ಲಿಂದು ಇಂಡೋ ಪಾಕ್ ಕದನ| ಜಯಗಳಿಸಲು ಟೀಂ ಇಂಡಿಯಾ ‌ಮಾಸ್ಟರ್ ಪ್ಲ್ಯಾನ್

ದುಬೈ: ಟಿ20 ವಿಶ್ವಕಪ್ ನಲ್ಲಿ ಇಂಡಿಯಾ ಇಂದು ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಎದಿರುಬದಿರಾದಾಗ ಸಹಜವಾಗಿಯೇ ಆಟದ ಉತ್ಸಾಹವೂ ಹೆಚ್ಚಾಗುತ್ತದೆ.

Ad Widget . Ad Widget .

ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗೆ 5 ಬಾರಿ ಪಾಕ್ ವಿರುದ್ಧ ಸೆಣಸಾಡಿತ್ತು. ಈ ಪೈಕಿ ಐದರಲ್ಲೂ ಭಾರತ ಗೆಲುವು ಕಂಡಿದೆ.

Ad Widget . Ad Widget .

2007 ರ ಚೊಚ್ಚಲ ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲಿ ಮತ್ತು ಫೈನಲ್ ನಲ್ಲಿ ಭಾರತ-ಪಾಕ್ ಎದುರಾಗಿತ್ತು. ಈ ಎರಡೂ ಪಂದ್ಯಗಳನ್ನು ಭಾರತ ಗೆದ್ದಿದ್ದವು. ಮತ್ತೆ 2012 ರ ಟಿ20 ವಿಶ್ವಕಪ್ ನಲ್ಲಿ ಸೂಪರ್ 8 ಹಂತದಲ್ಲಿ ಭಾರತ ಏಕಪಕ್ಷೀಯವಾಗಿ ಪಾಕ್ ತಂಡವನ್ನು ಮಣ‍್ಣು ಮುಕ್ಕಿಸಿತ್ತು. 2014 ರ ಟಿ20 ವಿಶ್ವಕಪ್ ನಲ್ಲಿ ಸೂಪರ್ 10 ಹಂತದಲ್ಲಿ 7 ವಿಕೆಟ್ ಗಳ ಗೆಲುವು ಸಾಧಿಸಿತ್ತು. 2016 ರಲ್ಲಿ ಮತ್ತೆ ಸೂಪರ್ 10 ಹಂತದಲ್ಲಿ ಪಾಕ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿತ್ತು. ಹೀಗಾಗಿ ಟಿ20 ವಿಶ್ವಕಪ್ ನಲ್ಲಿ ಭಾರತ ಪಾಕ್ ಎದುರು ಅಜೇಯವಾಗಿ ಮುಂದುವರಿದಿದೆ.

ಎಲ್ಲಾ ಪಂದ್ಯಗಳಿಗಿಂತಲೂ ಈ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚು. ಯಾಕೆಂದರೆ ಎರಡೂ ಎದುರಾಳಿಗಳು ಐಸಿಸಿ ಈವೆಂಟ್ ಗಳಲ್ಲಿ ಮಾತ್ರ ಎದುರಾಗುತ್ತವೆ. ಹೀಗಾಗಿ ಈ ಪಂದ್ಯವೆಂದರೆ ಕ್ರಿಕೆಟ್ ಪ್ರಿಯರಿಗೆ ಹಬ್ಬ, ಕ್ರಿಕೆಟಿಗರಿಗೆ ಒತ್ತಡ ಹೆಚ್ಚು.

ಇನ್ನು, ತಂಡಗಳ ಬಲಾಬಲ ಹೇಳುವುದಾದರೆ ಟೀಂ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ತೋರಿದ ನಿರ್ವಹಣೆ ಮತ್ತೆ ಇಲ್ಲಿ ಮುಂದುವರಿಸಿದರೆ ಇಂದಿನ ಪಂದ್ಯ ಗೆಲ್ಲಬಹುದು. ಐಸಿಸಿ ಈವೆಂಟ್ ಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದ್ದೇ ಹೆಚ್ಚು. ಆದರೆ ಟಿ20 ಕ್ರಿಕೆಟ್ ನಲ್ಲಿ ಪಾಕಿಸ್ತಾನ ತಂಡವೂ ಪ್ರಬಲ ತಂಡವೇ. ಹೀಗಾಗಿ ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ಕ್ಕೆ ಆರಂಭವಾಗಲಿದೆ.

Leave a Comment

Your email address will not be published. Required fields are marked *