ದೊಡ್ಡಬಳ್ಳಾಪುರ : ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ವಾಪಸ್ ಹೋಗುತ್ತಿದ್ದ ಬಸ್ ಘಾಟಿ ಸುಬ್ರಮಣ್ಯ ಬಳಿಯ ಕಂದಕಕ್ಕೆ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು,27 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಘಾಟಿ ಸುಬ್ರಮಣ್ಯದ ಒಕ್ಕಲಿಗರ ಸಮುದಾಯ ಭವನದಲ್ಲಿ ಗೌರಿಬಿದನೂರು ತಾಲೂಕಿನ ಪಿಂಚಾರ್ಲಹಳ್ಳಿಯ ಕಡೆಯವರ ಮದುವೆ ಇದ್ದು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುತ್ತಮುತ್ತಲಿನ ಗ್ರಾಮದ ಸಂಬಂಧಿಕರು ಮತ್ತು ಸ್ನೇಹಿತರು ಬಸ್ ನಲ್ಲಿ ಬಂದಿದ್ದರು. ಮದುವೆ ಕಾರ್ಯಕ್ರಮ ಮುಗಿದ ನಂತರ ಬಸ್ ನಲ್ಲಿ ಊರಿಗೆ ವಾಪಸ್ ಆಗುವವಾಗ ಸುಮಾರು 10 ಗಂಟೆಯ ಘಾಟಿ ಸುಬ್ರಮಣ್ಯ ಬಳಿಯ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಮದುವೆ ದಿಬ್ಬಣದ ಬಸ್ 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.
ಮಾಕಳಿ ಗ್ರಾಮದ ಶಿವಕುಮಾರ್, ಬಂಡಿಚಿಕ್ಕನಹಳ್ಳಿ ರಾಮಕೃಷ್ಣ ರೆಡ್ಡಿ ಮೃತ ವ್ಯಕ್ತಿಗಳು ಎಂದು ಹೇಳಲಾಗಿದೆ.ಇನ್ನು ಇದೆ ಬಸ್ ನಲ್ಲಿದ್ದ 27 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದೊಡ್ಡಬಳ್ಳಾಪುರದ ಶಾಸಕ ಟಿ ವೆಂಕಟರಮಣಯ್ಯ ಆಸ್ಪತ್ರೆಗೆ ಬೇಟಿ ನೀಡಿ ಗಾಯಳುಗಳ ಯೋಗಕ್ಷೇಮ ವಿಚಾರಿಸಿ ಮಾತನಾಡಿ ಸಾರ್ವಜನಿಕ ಅವರಣದಲ್ಲಿ ನಿರ್ಮಾಣವಾಗಿರುವ ಮೇಕ್ ಶಿಫ್ಟ್ ಆಸ್ಪತ್ರೆ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ಸಹಕಾರಿಯಾಗಿದೆ, ಒಂದೇ ಸಮಯದಲ್ಲಿ ಬಂದ 27 ಕ್ಕೂ ಹೆಚ್ಚು ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಸೂಕ್ತ ಹಾಸಿಗೆ ವ್ಯವಸ್ಥೆ ಮಾಡಲು ಮೇಕ್ ಶಿಫ್ಟ್ ಆಸ್ಪತ್ರೆ ನೆರವಾಗಿದೆ ಎಂದರು.