14 ವರ್ಷಗಳ ಬಳಿಕ ಏರಿಕೆಯಾಗಲಿದೆ ಬೆಂಕಿಪೆಟ್ಟಿಗೆ ಬೆಲೆ| ಇದು ಬೆಲೆಏರಿಕೆ ಇಫೆಕ್ಟ್|

Ad Widget ... ..

ಶಿವಕಾಶಿ: ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಬೆಂಕಿಕಡ್ಡಿ ಸರದಿ. ಇದೂ ಕೂಡ ಈಗ ಬೆಲೆಏರಿಕೆಯ ಬೆಂಕಿ ಹಚ್ಚಲಿದೆ.

Ad Widget

ತಮಿಳುನಾಡಿನ ಶಿವಕಾಶಿಯಲ್ಲಿ ಐದು ಪ್ರಮುಖ ಬೆಂಕಿಪೊಟ್ಟಣದ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆದಿದೆ. ಸಭೆಯಲ್ಲಿ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1 ರಿಂದ ಬೆಂಕಿ ಪೊಟ್ಟಣದ ಬೆಲೆ ಏರಲಿದೆ. ಒಂದು ರೂಪಾಯಿಯಿದ್ದ ಬೆಲೆ 2 ರೂಪಾಯಿಯಾಗಲಿದೆ.

2007ರಲ್ಲಿ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಲಾಗಿತ್ತು. 50 ಪೈಸೆಯಿದ್ದ ಬೆಲೆಯನ್ನು 1 ರೂಪಾಯಿಗೆ ಏರಿಸಲಾಗಿತ್ತು. 14 ವರ್ಷದ ನಂತರ ಪೊಟ್ಟಣದ ಬೆಲೆ ಹೆಚ್ಚಾಗ್ತಿದೆ. ಬೆಂಕಿಕಡ್ಡಿಗಳನ್ನು ತಯಾರಿಸಲು 14 ರೀತಿಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಈ ಎಲ್ಲಾ ಕಚ್ಚಾ ವಸ್ತುಗಳ ಬೆಲೆಗಳು ಸಾಕಷ್ಟು ಹೆಚ್ಚಾಗಿದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಕೆಂಪು ರಂಜಕದಿಂದ ಹಿಡಿದು, ಮೇಣ, ಬಾಕ್ಸ್ ಬೋರ್ಡ್, ಪೇಪರ್, ಸ್ಪ್ಲಿಂಟ್ಸ್, ಪೊಟಾಶಿಯಂ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಇದ್ರಿಂದ ಬೆಂಕಿಪೊಟ್ಟಣದ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ.

Leave a Comment

Your email address will not be published. Required fields are marked *