Ad Widget .

ಕಾರ್ಕಳ: ದನದ ಕಾಲು ಕಡಿದು ವಾರಸುದಾರರಿಗೆ ಜೀವ ಬೆದರಿಕೆ, ದೂರು ದಾಖಲು

Ad Widget . Ad Widget .

ಕಾರ್ಕಳ: ಗದ್ದೆಗೆ ಬಂದು ಮೇಯುತ್ತಿದ್ದ ದನವೊಂದರ ಕಾಲು ಕಡಿದ ಘಟನೆ ಎರ್ಲಪ್ಪಾಡಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದ ಭಾಗಿಯಾಗಿದ್ದ ಆರೋಪಿಯ ಮಕ್ಕಳು ದೂರುದಾರರಿಗೆ ಜೀವ ಬೆದರಿಕೆಯೊಡ್ಡಿದ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಎರ್ಲಪ್ಪಾಡಿಯ ಸಂತೋಷ್ ಹೆಗ್ಡೆ ದೂರು ನೀಡಿದವರು.

Ad Widget . Ad Widget .

ಸಾಕು ದನಗಳನ್ನು ಮೇಯಲೆಂದು ಬೈಲು ಗದ್ದೆಗೆ ಬಿಟ್ಟಿದ್ದರು. ಮೇವಿಗಾಗಿ ಬಿಟ್ಟ ದನವೊಂದು ಅಮಣ್ಣಿ ಹೆಗ್ಡೆ ಎಂಬವರ ಗದ್ದೆಗೆ ಹೋಗಿದ್ದು, ಇದರಿಂದ ಕುಪಿತಗೊಂಡ ಅಮಣ್ಣಿ ಕತ್ತಿಯಿಂದ ದನದ ಕಾಲು ಕಡಿದಿದ್ದಾರೆ.

ಇನ್ನು ಇದೇ ವಿಚಾರವನ್ನು ಮುಂದಿಟ್ಟು ದೂರುದಾರ ಸಂತೋಷ್ ಕುಮಾರ್ ಹೆಗ್ಡೆಗೆ ಅಮಣ್ಣಿಯ ಮೂವರು ಮಕ್ಕಳು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Leave a Comment

Your email address will not be published. Required fields are marked *