Ad Widget .

ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಮಾಡಿದ ವಕೀಲ ನಿಗೂಢ ನಾಪತ್ತೆ |ಬಾರ್ ಅಸೋಸಿಯೇಷನ್​ನಿಂದ ರಾಜೇಶ್ ಭಟ್ ಗೆ ಗೇಟ್ ಪಾಸ್| ವಕಾಲತ್ತು ‌ಅಧಿಕಾರ ಮೊಟಕು|

Ad Widget . Ad Widget .

ಮಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ನಾಪತ್ತೆಯಾಗಿದ್ದು, ಮಂಗಳೂರು ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

Ad Widget . Ad Widget .

ಇದರ ನಡುವೆ ವಕೀಲ ರಾಜೇಶ್ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಆದರೆ ನ್ಯಾಯಾಲಯ ಮಧ್ಯಂತರ ಜಾಮೀನನ್ನು ತಿರಸ್ಕರಿಸಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ಮಧ್ಯೆ ಅರೋಪಿಯನ್ನು ಪೊಲೀಸರು ಬಂಧಿಸಲು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ.

ರಾಜೇಶ್ ಭಟ್ ಅಮಾನತು
ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಾರ್ ಅಸೋಸಿಯೇಷನ್​ನಿಂದ ರಾಜೇಶ್ ಭಟ್ ಅಮಾನತು ಆಗಿದ್ದಾರೆ. ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ನಿಂದ ಅಮಾನತು ಆಗಿದ್ದಾರೆ. ಮುಂದಿನ ಆದೇಶದವರೆಗೂ ಪ್ರಾಕ್ಟೀಸ್ ಮಾಡದಂತೆ ಸೂಚನೆ ನೀಡಲಾಗಿದೆ.

ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ವಿರುದ್ಧ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಎಸ್ಪಿಪಿಯಾಗಿ ಕಾರ್ಯನಿರ್ವಹಿಸದಿರಲು ಸೂಚನೆ ಕೊಡಲಾಗಿದೆ. ಎಸಿಬಿ ಪೊಲೀಸ್ ಅಧೀಕ್ಷಕರಿಂದ ಸೂಚನಾ ಪತ್ರ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸಿಬಿ ಪ್ರಕರಣಗಳಲ್ಲಿ ಅಭಿಯೋಜನೆ ಮಾಡದಂತೆ ಸೂಚನೆ ಕೊಡಲಾಗಿದೆ. ರಾಜೇಶ್ ಭಟ್ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸಿಬಿ ಎಸ್ಪಿಪಿ ಆಗಿ ನಿಯೋಜನೆಗೊಂಡಿದ್ದ ರಾಜೇಶ್ ಭಟ್​ಗೆ ಕಾರ್ಯನಿರ್ವಹಿಸದಿರಲು ಸೂಚಿಸಲಾಗಿದೆ.

Leave a Comment

Your email address will not be published. Required fields are marked *