Ad Widget .

ಕೊಲೆಯಾಗಿ‌ ಬದಲಾದ ಆತ್ಮಹತ್ಯೆ |ಗಂಡನ ಪ್ರಾಣಕ್ಕೇ ಕೊಳ್ಳಿ ಇಟ್ಟ ಪತ್ನಿ|ಅಪ್ರಾಪ್ತ ವಯಸ್ಕರಿಬ್ಬರ ಬಂಧನ

Ad Widget . Ad Widget .

ಕುಂದಾಪುರ: ಇಲ್ಲಿನ ಅಂಪಾರು ಗ್ರಾಮದಲ್ಲಿ ಅ.19ರಂದು ಬೆಳಕಿಗೆ ಬಂದ ಆತ್ಮಹತ್ಯೆ ಪ್ರಕರಣವು ಇದೀಗ ಕೊಲೆ ಎಂದು ತನಿಖೆಯಲ್ಲಿ ನಿಜಾಂಶ ಬಯಲಾಗಿದೆ. ಮೃತನ ಪತ್ನಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರಾಗಿರುವ ಕಾರಣ ಇವರನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದೆ.

Ad Widget . Ad Widget .

ಅಂಪಾರು ಗ್ರಾಮದ ವಿವೇಕ್ ನಗರ, ಮೋಡುಬಗೆ ನಿವಾಸಿ ನಾಗರಾಜ್ (36) ಕೊಲೆಯಾದವರು. ನಾಗರಾಜ್ ಪತ್ನಿಯಾಗಿದ್ದ ಆರೋಪಿ ಮಮತಾ (34) ಮತ್ತು ಆಕೆಯ ಪರಿಚಯಸ್ಥರು, ಕುಮಾರ್ ಮತ್ತು ದಿನಕರ್ ಅವರನ್ನು ಬಂಧಿಸಲಾಗಿದೆ. ಕೊಲೆಯಲ್ಲಿ ಭಾಗಿಯಾಗಿರುವ ಇಬ್ಬರು ಅಪ್ರಾಪ್ತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ

ಈ ಹಿಂದೆ ತನ್ನ ಪತಿ ಅಕ್ಟೋಬರ್ 18 ರಂದು ಸಂಜೆ 6.30 ರಿಂದ ಅಕ್ಟೋಬರ್ 19 ರ ಬೆಳಿಗ್ಗೆ 6 ಗಂಟೆಯೊಳಗೆ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಮಮತಾ ಈ ಹಿಂದೆ ದೂರು ದಾಖಲಿಸಿದ್ದರು. ವಿಪರೀತ ಮದ್ಯ ವ್ಯಸನಿಯಾಗಿದ್ದ ನಾಗರಾಜ್ ತನ್ನ ಜೀವನದ ಬಗ್ಗೆ ಜಿಗುಪ್ಸೆಗೊಂಡಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಆದರೆ ಮೃತರ ಸಹೋದರಿ ಶಿವಮೊಗ್ಗದ ಸಾಗರ ತಾಲೂಕಿನ ಮಾಲ್ವೆಯ ನಿವಾಸಿ ನಾಗರತ್ನ ಮತ್ತು ಇತರ ಕೆಲವು ಸಂಬಂಧಿಕರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಶಂಕರನಾರಾಯಣ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹದಲ್ಲಿ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳನ್ನು ಹೊಂದಿರುವುದನ್ನು ಕುಟುಂಬ ಸದಸ್ಯರು ಗಮನಿಸಿದ್ದು ಕೊಲೆ ಎಂದು ಶಂಕಿಸಿ ನಾಗರತ್ನ ಅವರು ಪೊಲೀಸರಿಗೆ ದೂರು ನೀಡಿದ್ದರು.

ನಾಗರಾಜ್ ಕೆಲ ದಿನಗಳ ಹಿಂದೆ ತನ್ನ ಪತ್ನಿ ಮತ್ತು ಇತರರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಸಹೋದರಿಗೆ ಕರೆ ಮಾಡಿ ನೋವು ತೋಡಿಕೊಂಡಿದ್ದರು. . ಇದೀಗ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ನಾಗರಾಜ್ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಮಮತಾಳನ್ನು ಪ್ರೀತಿಸಿದ ನಂತರ ಆತ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ನಾಗರಾಜ್ ನಿತ್ಯ ಕುಡುಕನಾಗಿದ್ದು, ಆತನ ಮನೆಯಲ್ಲಿ ದಿನವೂ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಅಕ್ರಮ ಸಂಬಂಧದಿಂದಾಗಿ ಕೊಲೆ ನಡೆದಿದೆ ಎಂದು ಕೆಲವು ಸ್ಥಳೀಯ ಮೂಲಗಳು ಹೇಳಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *