Ad Widget .

ಮಕ್ಕಳಿಲ್ಲದ ಬಂಜೆ ಎಂಬ‌ ಚುಚ್ಚುಮಾತಿಗೆ ಹತಾಶೆ| 70ರ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತ ಮಹಾತಾಯಿ..!

Ad Widget . Ad Widget .

ಗುಜರಾತ್: ವೃದ್ಧೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯನ್ನು ವಿಶ್ವದ ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

Ad Widget . Ad Widget .

ಗುಜರಾತ್ ನ ಮೋರಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೀವನ್ ಬೆನ್ ರಬಾರಿ ಎಂಬ ವೃದ್ಧೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅವರ ಪತಿ ಮಾಲ್ಧಾರಿ (75) ಅವರ ಆಸೆಯನ್ನು ಈಡೇರಿಸಿದ್ದಾರೆ. ಅವರು ಐವಿಎಫ್ ಮೂಲಕ ಗರ್ಭಧರಿಸಿದ್ದಾರೆ.

ಇನ್ನೊಬ್ಬ ಭಾರತೀಯ ಮಹಿಳೆ ಎರ್ರಮಟ್ಟಿ ಮಂಗಯಮ್ಮ, ಸೆಪ್ಟೆಂಬರ್ 2019 ರಲ್ಲಿ 74ನೇ ವಯಸ್ಸಿನಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಅವರನ್ನು ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ.

ರಬಾರಿ ಮತ್ತು ಮಾಲ್ಧಾರಿ ಮದುವೆಯಾದ 45 ವರ್ಷಗಳ ಬಳಿಕ ಮಗು ಜನಿಸಿದೆ. ಇವರಿಗೆ ಹೆರಿಗೆ ಮಾಡಿಸಿರುವ ವೈದ್ಯ ನರೇಶ್ ಭಾನುಶಾಲಿ ಮಾತನಾಡಿ, ಇದು ನಾನು ಕಂಡ ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *