ಹರಕೆ‌ ತೀರಿಸಿ‌ ಮರಳುತ್ತಿದ್ದಾಗ ದೇವರ ಪಾದ ಸೇರಿದ ಭಕ್ತ| 600 ಮೆಟ್ಟಿಲು ಹತ್ತಿ ದೇವಿ ದರ್ಶನ ಮಾಡಿದ್ದ|

Ad Widget ... ..

ದಾವಣಗೆರೆ: ದೇವರ ಹರಕೆ ತೀರಿಸಲೆಂದು ಉಚ್ಚಂಗೆಮ್ಮ ಕ್ಷೇತ್ರದ 600 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದ ಭಕ್ತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ ದೇವಾಲಯದಲ್ಲಿ ನಡೆದಿದೆ.

Ad Widget

60 ವರ್ಷದ ಹುಚ್ಚಪ್ಪ ಮೃತ ವ್ಯಕ್ತಿ. ಹುಚ್ಚಪ್ಪ 600 ಮೆಟ್ಟಿಲುಗಳನ್ನು ಹತ್ತಿ ದೇವಿಗೆ ಹರಕೆ ತೀರಿಸಿ ದೇವರ ದರ್ಶನ ಪಡೆದು ವಾಪಸ್ ಆಗುತ್ತಿದ್ದರು. ಈ ವೇಳೆ ಹೃದಯಾಘಾತಕ್ಕೀಡಾಗಿ ಕ್ಷೇತ್ರದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತ ಹುಚ್ಚಪ್ಪ ದಾವಣಗೆರೆ ಮೂಲದವರಾಗಿದ್ದು, ಪತ್ನಿ ಸಮೇತ ಉಚ್ಚಂಗೆಮ್ಮ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಡೋಲಿಯಲ್ಲಿ ಕೆಳಗೆ ಕರೆತಂದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *