Ad Widget .

ಪುಟ್ಟ ಬಾಲಕಿಗೆ ಪೋರ್ನ್ ತೋರಿಸಿ ನೋಡುವಂತೆ ಒತ್ತಾಯ| ನಿರಾಕರಿಸಿದ್ದಕ್ಕೆ ಕೊಲೆಗೈದ ಅಪ್ರಾಪ್ತ ಬಾಲಕರು| ಎಲ್ಲಿಗೆ ಬಂತು ಕೇಡುಗಾಲ..!?

Ad Widget . Ad Widget .

ಅಸ್ಸಾಂ: ತಮ್ಮ ಜೊತೆ ಅಶ್ಲೀಲ ವಿಡಿಯೋಗಳನ್ನು ನೋಡಲು ನಿರಾಕರಿಸಿದ ಆರು ವರ್ಷ ಪ್ರಾಯದ ಬಾಲಕಿಯನ್ನು ಮೂರು ಅಪ್ರಾಪ್ತ ಹುಡುಗರು ಕೊಲೆಗೈದ ಘಟನೆ ಅಸ್ಸಾಂ ರಾಜ್ಯದ ನಾಗೂನ್ ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಬಾಲಕರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು 8 ರಿಂದ 11 ವರ್ಷದೊಳಗೆ ಬಾಲಕರು ಎಂದು ಹೇಳಲಾಗಿದೆ.

ರಾಜ್ಯದ ನಾಗೂನ್ ಜಿಲ್ಲೆಯ ಬಲಿಬತ್ ಬಳಿಯ ಕಲ್ಲು ಕ್ರಶರ್ ಬಳಿ ಘಟನೆ ನಡೆದಿದೆ. ಮಂಗಳವಾರ ಬಾಲಕಿಯ ಮೃತದೇಹವು ಶೌಚಾಲಯದಲ್ಲಿ ಪತ್ತೆಯಾದಾಗ ಘಟನೆಯು ಬೆಳಕಿಗೆ ಬಂದಿದೆ. ಕುಟುಂಬಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

6 ವರ್ಷದ ಬಾಲಕಿಯ ಹತ್ಯೆಯನ್ನು 24 ಗಂಟೆಗಳಲ್ಲಿ ಪತ್ತೆಹಚ್ಚಲಾಗಿದೆ ಎಂದು ನಾಗಾಂವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಮಿಶ್ರಾ ಹೇಳಿದ್ದಾರೆ. ಮತ್ತೊಂದೆಡೆ, ಕಲಿಯಾಬೋರ್ ಉಪ-ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತನಿಖೆಯ ಸಮಯದಲ್ಲಿ, ಅಪ್ರಾಪ್ತ ವಯಸ್ಕರು ಕೂಡ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಪತ್ತೆಯಾಗಿದೆ ಎಂದು ಹೇಳಿದರು.

“ನಮ್ಮ ತನಿಖೆಯ ಸಮಯದಲ್ಲಿ, ಅದೇ ಗ್ರಾಮದ 8 ರಿಂದ 11 ವರ್ಷದೊಳಗಿನ ಮೂವರು ಅಪ್ರಾಪ್ತ ಬಾಲಕರು 6 ವರ್ಷದ ಬಾಲಕಿಯನ್ನು ಬರ್ಬರವಾಗಿ ಕೊಂದಿದ್ದಾರೆ ಎಂಬುವುದು ಪತ್ತೆಯಾಗಿದೆ. ಒಬ್ಬ ಆರೋಪಿಯ ತಂದೆ ಇಡೀ ಘಟನೆಯನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ. ನಾವು ಆತನನ್ನು ಬಂಧಿಸಿದ್ದೇವೆ ಎಂದು ಆನಂದ್ ಮಿಶ್ರಾ ಹೇಳಿದರು

“ಆರೋಪಿ ಅಪ್ರಾಪ್ತ ವಯಸ್ಕರು ಅಶ್ಲೀಲ ವ್ಯಸನಿಗಳಾಗಿದ್ದಾರೆ. 11 ವರ್ಷದವನು ತನ್ನ ತಂದೆಯ ಮೊಬೈಲ್ ಫೋನ್ ಅನ್ನು ಅಶ್ಲೀಲ ತುಣುಕುಗಳನ್ನು ವೀಕ್ಷಿಸಲು ಬಳಸುತ್ತಿದ್ದ ಎಂದು ತನಿಖೆಯ ಸಮಯದಲ್ಲಿ ತಿಳಿದುಬಂದಿದೆ. ಇದು ತುಂಬಾ ಆತಂಕಕಾರಿಯಾಗಿದೆ. ನಾವು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

Leave a Comment

Your email address will not be published. Required fields are marked *