Ad Widget .

ಸುಳ್ಯ: ಚಲಿಸುತ್ತಿರುವಾಗ ಹೊತ್ತಿ‌ ಉರಿದ‌ ಕಾರು| ಚಾಲಕ ಅಪಾಯದಿಂದ ಪಾರು|

Ad Widget . Ad Widget .

ಸುಳ್ಯ: ಇಲ್ಲಿನ ಅಜ್ಜಾವರ ಗ್ರಾಮದ ಮಾವಿನಪಳ್ಳ ಎಂಬಲ್ಲಿ ವ್ಯಾಗನರ್ ಕಾರೊಂದು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.

Ad Widget . Ad Widget .

ಭುವನ್ ಅತ್ಯಾಡಿ ಎಂಬವರು ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಕಾರಿನೊಳಗೆ ಬೆಂಕಿ ಅವಘಡ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಭುವನ್ ರವರು ರಾತ್ರಿ ತನ್ನ ಮನೆಯಿಂದ ಮಾವಿನಪಳ್ಳ ರಸ್ತೆಯಲ್ಲಿ ಬರುತ್ತಿದ್ದಾಗ ಕಾರಿನ ಬೋನೆಟ್ ನಿಂದ ಹೊಗೆ ಬರಲಾರಂಭಿಸಿತು. ಇದನ್ನು ಗಮನಿಸಿದ ಭುವನ್ ಕಾರನ್ನು ಬದಿಗೆ ನಿಲ್ಲಿಸಿದರು. ಆ ವೇಳೆಗೆ ಕಾರ್ ಏಕಾಏಕಿ ಲಾಕ್ ಆಯಿತು. ಎದುರು ಬೆಂಕಿ ಹೊತ್ತಿಕೊಂಡಿತು. ಭುವನ್ ಹರ ಸಾಹಸ ಪಟ್ಟು ಕಾರಿನ ಡೋರ್ ತೆರೆದು ಹೊರಗಿಳಿದರು. ಅಲ್ಲೇ ರಸ್ತೆ ಬದಿಯಲ್ಲಿದ್ದ ಸ್ಥಳೀಯ ಮನೆಯವರಿಗೆ ವಿಷಯ ತಿಳಿಸಿದಾಗ. ಅವರು ಬಂದು ನೀರನ್ನು ಹಾಕಿ ದೊಡ್ಡ ಅನಾಹುತವನ್ನು ತಪ್ಪಿಸಿದರಾದರೂ ಕಾರಿನ ಇಂಜಿನ್ ಸಂಪೂರ್ಣ ಸುಟ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *