Ad Widget .

ಕಿಲ್ಲರ್ ಕೆಎಸ್ಆರ್ ಟಿಸಿ ಗೆ ಬೈಕ್ ಸವಾರ ಬಲಿ| ಭೀಕರ ಅಪಘಾತದಲ್ಲಿ ಛಿದ್ರಗೊಂಡಿತು ದೇಹ|

Ad Widget . Ad Widget .

ಚಿಕ್ಕಮಗಳೂರು: ಬೈಕ್​ಗೆ ಕೆಎಸ್‌ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​ನಲ್ಲಿ ಸಂಭವಿಸಿದೆ.

Ad Widget . Ad Widget .

ಬೈಕ್ ಸವಾರ ರಾಜೇಶ್ (24) ಮೇಲೆ ಬಸ್ ಹತ್ತಿದ ಪರಿಣಾಮ ದೇಹ ಛಿದ್ರ ಛಿದ್ರವಾಗಿದೆ. ಬೈಕ್​ನಲ್ಲಿ ಹಿಂಬದಿ ಕುಳಿತಿದ್ದ ದಾಸರಹಳ್ಳಿ ಅಶೋಕ್ ಎಂಬುವರಿಗೆ ಗಂಭೀರ ಗಾಯವಾಗಿದೆ.

ಗಾರೆ ಕೆಲಸಕ್ಕೆ ಅಂತ ಬೈಕ್ ಸವಾರರು ಬಣಕಲ್​ ನಿಂದ ಮತ್ತಿಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಬಾಳೂರು ಸಮೀಪದ ಚನ್ನಡ್ಲು ಗ್ರಾಮದ ರಾಜೇಶ್ ಮೃತಪಟ್ಟಿದ್ದು, ದಾಸರಹಳ್ಳಿಯ ಅಶೋಕ್​ಗೆ ಗಂಭೀರ ಗಾಯಗಳಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂಬದಿಯಿಂದ ಬಸ್​ನ ಓವರ್ ಟೇಕ್ ಮಾಡಲು ಹೋಗಿರುವುದೇ ಅಪಘಾತಕ್ಕೆ ಕಾರಣ ಅಂತಾ ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *