Ad Widget .

ಎರಡು ಮದುವೆಯಾದ ಕುಮಾರಸ್ವಾಮಿಗೆ ಬ್ಲೂಪಿಲಂ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ – ಬಿಜೆಪಿ ತಿರುಗೇಟು

Ad Widget . Ad Widget .

ಬೆಂಗಳೂರು: ಆರ್ ಎಸ್ಎಸ್ ವಿರುದ್ಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಿರಂತರ ವಾಗ್ದಾಳಿ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿರು.

Ad Widget . Ad Widget .

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ‌ ಪ್ರಧಾನ ಕಾರ್ಯದರ್ಶಿ ಅಶ್ವಥ್​ ನಾರಾಯಣ, ವಕ್ತಾರರಾದ ಗಣೇಶ್ ಕಾರ್ಣಿಕ್, ಚಲವಾದಿ ನಾರಾಯಣ ಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅಶ್ವಥ್​ ನಾರಾಯಣ ಅವರು ಎಚ್​ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸ್ವಯಂ ಸೇವಕ ಸಂಘದ ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ ಎಚ್​ಡಿಕೆ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ದ್ವಿಪತ್ನಿತ್ವದ ಬಗ್ಗೆಯೂ ಬಿಜೆಪಿಗರು ಪ್ರಶ್ನಿ ಎತ್ತಿದರು. ಕುಮಾರಸ್ವಾಮಿಯವರು RSS ಬಗ್ಗೆ ಟೀಕೆ ಮಾಡೋದು ಸರೀನಾ? ಅವರು ಸ್ವಲ್ಪ ಯೋಚನೆ ಮಾಡಬೇಕು, ನಾನು ಟೀಕೆ ಮಾಡಿದರೆ, ಯಾವ ರೀತಿ ಪ್ರತಿಯಾಗಿ ಟೀಕೆ ವ್ಯಕ್ತವಾಗುತ್ತೆ ಎಂದು ತಿಳಿದುಕೊಂಡು ಅದರ ಆಧಾರದ ಮೇಲೆ ಅವರು ಟೀಕೆ ಮಾಡಬೇಕು. ಯಾರೇ ಆಗಲಿ ಸಭ್ಯತೆಯಿಂದ ಟ್ವೀಟ್​​ ಮಾಡಬೇಕು.

ಉಪಚುನಾವಣೆ ಬಂದಾಗ ಎಚ್​ಡಿಕೆ ಕೂಗುಮಾರಿ ಥರ ಮಾತಾಡ್ತಾರೆ. ಉಪಚುನಾವಣೆಗಳ ವೇಳೆ ಎಚ್​ಡಿಕೆ ಮನಸ್ಥಿತಿ ಕಳ್ಕೊಂಡು ಮಾತಾಡ್ತಾರೆ, ಕುಮಾರಸ್ವಾಮಿ ಬೇಜವಾಬ್ದಾರಿ‌ ಹೇಳಿಕೆ ಕೊಡ್ತಿದ್ದಾರೆ ಎಂದು ಕಿಡಿಕಾರಿದರು.

ಬ್ಲೂಫಿಲಂಗಳ ಬಗ್ಗೆ ಎಚ್ಡಿಕೆಗೆ ಗೊತ್ತಿರುತ್ತೆ!

ಎಚ್​ಡಿಕೆ RSS ಬಗ್ಗೆ ಆರೋಪ ಮಾಡಿದ್ದಾರೆ. ಅವರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಅಪ್ರಸ್ತುತ ಆಗಿದ್ದ ಕುಮಾರಸ್ವಾಮಿ RSS ವಿರುದ್ಧ ಟೀಕೆ ಮಾಡಿ ಪ್ರಸ್ತುತರಾಗಲು ಪ್ರಯತ್ನ ಪಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಆರ್​ಎಸ್​ಎಸ್​ ಕಚೇರಿಗೆ ಬಂದು ನೋಡಿ ಅಂತ ಕುಮಾರಸ್ವಾಮಿಗೆ ಕಟೀಲ್ ಅವರು ಆಹ್ವಾನಿಸಿದ್ದಾರೆ. ಆದರೆ ಕುಮಾರಸ್ವಾಮಿ RSS ಶಾಖೆಗೆ ಬ್ಲೂಫಿಲಂ ನೋಡಲು ಬರ್ಲಾ ಅಂತ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಬ್ಲೂಫಿಲಂ ಬಗ್ಗೆ ಎಚ್​ಡಿಕೆಗೆ ಹೇಗೆ ಗೊತ್ತಾಯ್ತು? ಹೇಗೆ ಕಲಿತ್ಕೊಂಡ್ರು ಅವರು? ಬ್ಲೂಫಿಲಂಗಳ ಬಗ್ಗೆ ಎಚ್​ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ ಎಂದು ತಿರುಗೇಟು ನೀಡಿದರು.

Leave a Comment

Your email address will not be published. Required fields are marked *